ಇಂದು ಬೂಸ್ಟರ್ ಡೋಸ್ ಲಸಿಕಾ ಮೇಳ: ಕೋವಿಶೀಲ್ಡ್ ಲಭ್ಯ

ಉಡುಪಿ: ಕೋವಿಡ್-19 ನಾಲ್ಕನೇ ಅಲೆಯಲ್ಲಿ ಸಂಭವಿಸಬಹುದಾದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನವರಿ 18 ರಂದು ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಮುನ್ನೆಚ್ಚರಿಕೆ ಡೋಸ್ ಲಸಿಕಾ ಮೇಳವನ್ನು ಆಯೋಜಿಸಲಾಗಿದೆ. ಕೋವಿಶೀಲ್ಡ್ ಪ್ರಥಮ ಡೋಸ್ ಲಸಿಕೆ ಪಡೆದು 84 ದಿನಗಳು ಮೀರಿದವರಿಗೆ 2 ನೇ ಡೋಸ್ ಕೋವಿಶೀಲ್ಡ್ ಲಸಿಕೆ, ಕೋವ್ಯಾಕ್ಸಿನ್ ಪ್ರಥಮ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರು, 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆಯಬಹುದಾಗಿದೆ. 2ನೇ ಡೋಸ್ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ […]

ಇಂದು ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಲಸಿಕಾ ಮೇಳ

ಉಡುಪಿ: ಕೋವಿಡ್-19 ನಾಲ್ಕನೇ ಅಲೆಯಲ್ಲಿ ಸಂಭವಿಸಬಹುದಾದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನವರಿ 11 ರಂದು ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಮುನ್ನೆಚ್ಚರಿಕೆ ಡೋಸ್ ಲಸಿಕಾ ಮೇಳವನ್ನು ಆಯೋಜಿಸಲಾಗಿದೆ. ಕೋವ್ಯಾಕ್ಸಿನ್ ಪ್ರಥಮ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರು, 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಮತ್ತು 2ನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದು 6 ತಿಂಗಳು ಪೂರೈಸಿದವರು ಕೋವ್ಯಾಕ್ಸಿನ್ ಮುನ್ನೆಚ್ಚರಿಕೆ ಲಸಿಕಾ ಡೋಸ್ (ಬೂಸ್ಟರ್ ಡೋಸ್) ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ […]

ಕೋವಿಶೀಲ್ಡ್ ಲಸಿಕೆಯು ಪುರುಷ ಫಲವತ್ತತೆಯ ಸಾಮರ್ಥ್ಯಕ್ಕೆ ಹಾನಿಕಾರಕವಲ್ಲ: ಕಸ್ತೂರ್ಬಾ ವೈದ್ಯಕೀಯ ತಂಡದ ಸಂಶೋಧನೆ

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಭಾರತೀಯ ಫಲವತ್ತತೆ ತಜ್ಞರ ತಂಡವು ಇದೆ ಮೊದಲ ಬಾರಿಗೆ ಕೋವಿಶೀಲ್ಡ್ ಲಸಿಕೆಗಳನ್ನು ಪಡೆದ ಪುರುಷರಲ್ಲಿ ವೀರ್ಯದ ಗುಣಮಟ್ಟದಲ್ಲಿನ ಬದಲಾವಣೆಗಳ ಪ್ರಾಯೋಗಿಕ ಸಂಶೋಧನೆ ನಡೆಸಿದೆ. ಸಂಶೋಧನಾ ವರದಿಯನ್ನು ಸೆ 5 ರಂದು ಯುಕೆ ಮೂಲದ ಸೊಸೈಟಿ ಫಾರ್ ರಿಪ್ರೊಡಕ್ಷನ್ ಎಂಡ್ ಫರ್ಟಿಲಿಟಿ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ನಂತರ ಪುರುಷರಲ್ಲಿ ಫಲವತ್ತತೆ ನಶಿಸಿ ಹೋಗುತ್ತದೆ ಎಂಬ ವರದಿಗಳನ್ನು ಆಧರಿಸಿ ಬಹುತೇಕ ಪುರುಷರು ಲಸಿಕೆಯನ್ನು ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು. ಲಸಿಕೆಯು ಪುರುಷರ […]

18 ವರ್ಷ ಮೇಲ್ಪಟ್ಟ ಬೂಸ್ಟರ್ ಡೋಸ್ ಅರ್ಹತೆಯುಳ್ಳವರಿಗೆ ಬಹು ಆಯ್ಕೆ ಲಭ್ಯ: ಕೋರ್ಬೆವಾಕ್ಸ್ ಪರಿಗಣಿಸಲು ಕೇಂದ್ರ ಮಾರ್ಗಸೂಚಿ

ನವದೆಹಲಿ: 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಜನರಿಗೆ ಕೋರ್ಬೆವಾಕ್ಸ್ ನೊಂದಿಗೆ ಮುನ್ನೆಚ್ಚರಿಕಾ(ಬೂಸ್ಟರ್) ಡೋಸ್ ನ ಭಿನ್ನ ಆಯ್ಕೆಯು ಲಭ್ಯವಿರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿ, 18 ವರ್ಷ ಮೇಲ್ಪಟ್ಟ ಜನರಿಗೆ ಕೋವಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆಗಳ ಎರಡನೇ ಡೋಸ್ ನೀಡಿದ ದಿನಾಂಕದಿಂದ ಆರು ತಿಂಗಳ ನಂತರ ಮುನ್ನೆಚ್ಚರಿಕಾ ಡೋಸ್ ಆಗಿ ಕೋರ್ಬೆವಾಕ್ಸ್ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ. ಅಂದರೆ, ಈ ಹಿಂದೆ ಕೋವಾಕ್ಸಿನ್ ಅಥವಾ ಕೋವಿಶೀಲ್ಡ್ ನ ಎರಡೂ ಡೋಸೇಜ್ […]

ಕೋವಿಡ್ 19: ಪ್ರತೀ ಬುಧವಾರದಂದು ಬೂಸ್ಟರ್ ಡೋಸ್ ಲಸಿಕಾ ಮೇಳ ಆಯೋಜನೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಮೇಳವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಶಾ ಕಾರ್ಯಕರ್ತೆಯರು ಎಲ್ಲಾ ಮನೆಗಳಿಗೆ ಭೇಟಿ ನೀಡಿ, 60 ವರ್ಷ ಮೇಲ್ಪಟ್ಟವರಲ್ಲಿ ಮುನ್ನೆಚ್ಚರಿಕಾ ಡೋಸ್ ಪಡೆಯಲು ಬಾಕಿ ಇರುವವರನ್ನು ಗುರುತಿಸಿ, ಬುಧವಾರ ನಡೆಯುವ ಲಸಿಕಾ ಮೇಳಕ್ಕೆ ಬರಲು ಪ್ರೇರೇಪಿಸಬೇಕು. ಆಸ್ಪತ್ರೆಗೆ ಬರಲು ಸಾಧ್ಯವಾಗದ ಹಾಗೂ ಹಾಸಿಗೆ ಹಿಡಿದಿರುವ 60 ವರ್ಷ ಮೇಲ್ಪಟ್ಟವರಿದ್ದಲ್ಲಿ ಅವರಿಗೆ ಮೊಬೈಲ್ ಲಸಿಕಾ ಶಿಬಿರ ವ್ಯವಸ್ಥೆ ಮಾಡಿ, ಲಸಿಕೆ ನೀಡಬೇಕು. ಪಂಚಾಯತ್ ವ್ಯಾಪ್ತಿಯಲ್ಲಿ ವೈದ್ಯಾಧಿಕಾರಿಗಳೊಂದಿಗೆ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮ ಕಾರ್ಯಪಡೆ ಸದಸ್ಯರ […]