ಮಂಕಿಪಾಕ್ಸ್ ಪ್ರಕರಣದಲ್ಲಿ ಏರಿಕೆ: ಜಾಗತಿಕ ತುರ್ತುಸ್ಥಿತಿ ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ; ಭಾರತದಲ್ಲಿ ಒಟ್ಟು ನಾಲ್ಕು ಪ್ರಕರಣ ದೃಢ
ಜಿನಿವಾ: ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ವೈರಸ್ ಕುರಿತು ಡಬ್ಲ್ಯೂ.ಎಚ್.ಒ ನ ತುರ್ತು ಸಮಿತಿಯ ಎರಡನೇ ಸಭೆಯ ಕೊನೆಯಲ್ಲಿ ಈ ಘೋಷಣೆ ಬಂದಿದೆ. ವರ್ಗೀಕರಣವು ವಿಶ್ವ ಆರೋಗ್ಯ ಸಂಸ್ಥೆಯು ನೀಡಬಹುದಾದ ಅತ್ಯುನ್ನತ ಎಚ್ಚರಿಕೆಯಾಗಿದೆ. ವಿಶ್ವಾದ್ಯಂತ ಮಂಕಿಪಾಕ್ಸ್ ಪ್ರಕರಣಗಳಲ್ಲಿ ಏರಿಕೆಯನ್ನು ಅನುಸರಿಸಿ ಈ ಎಚ್ಚರಿಕೆಯನ್ನು ನೀಡಲಾಗಿದೆ. 75 ದೇಶಗಳಿಂದ ಈಗ 16,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ, ಏಕಾಏಕಿ ಏರಿಕೆಯ ಪರಿಣಾಮವಾಗಿ ಇದುವರೆಗೆ ಐದು ಸಾವುಗಳು ಸಂಭವಿಸಿವೆ ಎಂದು ಸಂಸ್ಥೆಯ […]
ಕೋವಿಡ್ ವೈರಸ್ ವಿರುದ್ಧ ಕ್ಷೀಣಿಸುತ್ತಿರುವ ಪ್ರತಿರಕ್ಷಣೆ: ಕೋವಿಡ್ ಬೂಸ್ಟರ್ ಡೋಸ್ ಅಗತ್ಯ ಎಂದ ಸರಕಾರ
ನವದೆಹಲಿ: ಕೋವಿಡ್ ವೈರಸ್ ವಿರುದ್ಧ ದೇಹದ ಪ್ರತಿರಕ್ಷಣೆ ಕ್ಷೀಣಿಸುತ್ತಿರುವುದರಿಂದ ಮುನ್ನೆಚ್ಚರಿಕಾ(ಬೂಸ್ಟರ್) ಡೋಸ್ ಅಗತ್ಯವಿದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಜಿಐ) ಕೋವಿಡ್ -19 ವರ್ಕಿಂಗ್ ಗ್ರೂಪ್‌ನ ಮುಖ್ಯಸ್ಥ ಡಾ.ಎನ್.ಕೆ. ಅರೋರಾ ಹೇಳಿದ್ದಾರೆ. ಎಐಆರ್ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಕಾರಣ ಮುನ್ನೆಚ್ಚರಿಕಾ ಡೋಸ್ ನ ಪ್ರಮಾಣವನ್ನು ಮಿಷನ್ ಮೋಡ್‌ನಲ್ಲಿ ಹೆಚ್ಚಿಸಬೇಕು. ಕೋವಿಡ್ ಪ್ರಕರಣಗಳು ತಗ್ಗಿರುವುದರಿಂದ ಜನರ ಮನಸ್ಸಿನಲ್ಲಿ ಉದಾಸೀನತೆ ಮನೆಮಾಡಿದೆ. ಆದರೆ ನಾವು ರೋಗದ ವಿರುದ್ದ […]
18 ವರ್ಷ ಮೇಲ್ಪಟ್ಟವರಿಗೆ ಜುಲೈ 15 ರಿಂದ 75 ದಿನಗಳವರೆಗೆ ಉಚಿತ ಕೋವಿಡ್-19 ಬೂಸ್ಟರ್ ಡೋಸ್
ಮುಂಬೈ: 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಶುಕ್ರವಾರದಿಂದ ಮುಂದಿನ 75 ದಿನಗಳವರೆಗೆ ಉಚಿತ ಕೋವಿಡ್-19 ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಬುಧವಾರ ಪ್ರಕಟಿಸಿದ್ದಾರೆ. ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ‘ಆಜಾದಿ ಕಾ ಅಮೃತ್ ಮಹೋತ್ಸವ’ ಅಂಗವಾಗಿ ಬೂಸ್ಟರ್ ಡೋಸ್ ಅಭಿಯಾನ ಅನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ. ವಿಶೇಷ 75 ದಿನಗಳ ಅಭಿಯಾನದಡಿಯಲ್ಲಿ, 18 ರಿಂದ 59 ವಯಸ್ಸಿನ ಎಲ್ಲಾ ವಯಸ್ಕರಿಗೆ ಜುಲೈ 15 […]
ಹೆಚ್ಚುತ್ತಿರುವ ಕೋವಿಡ್ ಪ್ರಕರಣ: ಓಮಿಕ್ರಾನ್ ಉಪತಳಿ ಪ್ರಾಬಲ್ಯವನ್ನು ತೋರಿಸುತ್ತಿರುವ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ
ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ನಡೆಸಿದ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಳು ಓಮಿಕ್ರಾನ್ ರೂಪಾಂತರವು ರಾಜ್ಯದಲ್ಲಿ ಇನ್ನೂ ಪ್ರಾಬಲ್ಯ ಹೊಂದಿದೆ ಎನ್ನುವುದನ್ನು ತೋರಿಸುತ್ತಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ, ಕರ್ನಾಟಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬುಧವಾರ ಟ್ವೀಟ್ ಮಾಡಿ, ಕೋವಿಡ್-19 ರೋಗಲಕ್ಷಣಗಳನ್ನು ಹೊಂದಿರುವ ಹೆಚ್ಚಿನ ಜನರು ನೋವಲ್ ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರದ ಬಿಎ.2 ಉಪ-ವೇರಿಯಂಟ್‌ನಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. “ಕರ್ನಾಟಕದಲ್ಲಿ ಯಾವ ತಳಿ ಪ್ರಾಬಲ್ಯ ಹೊಂದಿದೆ? ಜಿನೋಮ್ […]
ಮಾಲ್ಡೀವ್ಸ್‌ನಿಂದ ಮರಳಿದ ವಿರಾಟ್ ಕೊಹ್ಲಿಗೆ ಕೋವಿಡ್-19 ಸೋಂಕು: ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದ ಮೇಲೆ ಕೋವಿಡ್ ಕಾರ್ಮೋಡ
ಜುಲೈ 1 ರಿಂದ 5ರವರೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮರು ನಿಗದಿಪಡಿಸಲಾದ ಟೆಸ್ಟ್‌ಗೆ ಭಾರತ ಸಿದ್ಧತೆ ಮಾಡುತ್ತಿರುವ ಬೆನ್ನಲ್ಲೆ ಟೀಂ ಇಂಡಿಯಾದ ಹಲವಾರು ಆಟಗಾರರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ವೈರಸ್‌ಗೆ ಪರೀಕ್ಷೆ ಧನಾತ್ಮಕವೆಂದು ಕಂಡು ಬಂದ ನಂತರ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ತಂಡದೊಂದಿಗೆ ಯುಕೆಗೆ ಪ್ರಯಾಣಿಸಲು ನಿರಾಕರಿಸಿದರೆ, ಕಳೆದ ವಾರ ತಂಡವು ಲಂಡನ್‌ಗೆ ಆಗಮಿಸಿದ ಬಳಿಕ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ ಎಂದು ಟೈಮ್ಸ್ […]