ಕರೊನಾ ಸೋಂಕಿತ ರೋಗಿಗಳಿಗೆ ಜೀವ ರಕ್ಷಕ ಸಾಧನ: ಮಂಗಳೂರಲ್ಲಿ ಹೊಸ ಪ್ರಯೋಗ

ಮಂಗಳೂರು: ಗಂಭೀರ ಸ್ಥಿತಿಯಲ್ಲಿರುವ ಕರೊನಾ ಸೋಂಕಿತ ರೋಗಿಗಳಿಗೆ ಜೀವ ರಕ್ಷಕ ಸಾಧನವೊಂದು ಮಂಗಳೂರಿನಲ್ಲಿ ತಯಾರಾಗಿದೆ. ನಗರದ ಮಂಗಳಾ ಹಾಸ್ಪಿಟಲ್‌ನ ಮೆಡಿಕಲ್ ಡೈರೆಕ್ಟರ್ ಡಾ. ಗಣಪತಿ ಅವರ ತಂಡ ಆಕ್ಸಿಜನ ಬಬ್ಬಲ್ ಹೆಲ್ಮೆಟ್‌ನ್ನು ರೆಡಿ ಮಾಡಿದ್ದಾರೆ. ವೆಂಟಿಲೇಟರ್ ಅಳವಡಿಸಿ ಕೃತಕ ಉಸಿರಾಟ ನೀಡಬೇಕಾದ ರೋಗಿಗಳಿಗೆ ಈ ಸಾಧನ ಬಹಳಷ್ಟು ಉಪಯೋಗಕಾರಿಯಾಗಲಿದೆ. ಕರೊನಾ ಸೋಂಕಿನಿಂದ ರೋಗಿಯ ಆರೋಗ್ಯ ಸ್ಥಿತಿ ಗಂಭೀರ ಆಗಿ ಉಸಿರಾಟ ಸಮಸ್ಯೆ ಎದುರಾದಾಗ ಕೃತಕ ಉಸಿರಾಟದ ವ್ಯವಸ್ಧೆ ಮಾಡಬೇಕಾಗುತ್ತದೆ. ಈ ಸಂದರ್ಭ ಶ್ವಾಸನಾಳಕ್ಕೆ ಟ್ಯೂಬ್ ಹಾಕಿ ವೆಂಟಿಲೇಟರ್ […]