ದೂರು ಕೊಟ್ಟವರ ಕಾರಿನಲ್ಲಿ ತಿರುಗಾಟ ಮಾಡಿದ ದಾವಣಗೆರೆ ಎಸ್ ಐ ಮತ್ತು ಪೇದೆ ವಿರುದ್ದ ಕ್ರಮ
ದಾವಣಗೆರೆ: ಖಾಸಗಿ ವಾಹನವನ್ನು ಅದರ ಮಾಲೀಕರ ಅನುಮತಿಯಿಲ್ಲದೆ ಅಥವಾ ಅದರ ಮೂಲವನ್ನು ತಿಳಿದುಕೊಳ್ಳದೆ ಬಳಸಿದ್ದಕ್ಕಾಗಿ ಮತ್ತು ನಾಗರಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಹದಡಿ ಪೋಲೀಸ್ ಠಾಣೆಯ ಪೇದೆ ಮತ್ತು ಮೇಲಾಧಿಕಾರಿಯ ವಿರುದ್ದ ವಿಚಾರಣೆಯನ್ನು ಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹದಡಿ ಪೊಲೀಸ್ ಠಾಣೆಯ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ಮೇಲಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ. ಬೆಂಗಳೂರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್ ವಿರುದ್ಧ ದಾವಣಗೆರೆ […]