ಕಾಂಗ್ರೆಸ್ಸಿಗರಿಗೆ ಹಿಂದೂ ಧಾರ್ಮಿಕ ಕೇಂದ್ರಗಳೆಂದರೆ ಮೊದಲಿನಿಂದಲೂ ಅಲರ್ಜಿ
ಕಾರ್ಕಳ: ಕಾರ್ಕಳ ನಗರ ದೇವತೆ ಶ್ರೀ ಮಾರಿಯಮ್ಮ ಹಾಗೂ ಉಚ್ಚಂಗಿ ದೇವಸ್ಥಾನದ ಜೀರ್ಣೊಧ್ಧಾರ ಹಾಗೂ ಬ್ರಹ್ಮಕಲಶ ಸಂಕಲ್ಪ ಇಡೀ ಕಾರ್ಕಳದ ಆಸ್ಥಿಕ ಭಕ್ತರ ಸಾಮೂಹಿಕ ಸಂಕಲ್ಪದ ಪ್ರತಿರೂಪವಾಗಿದೆ. ಯಾವುದೇ ಅಡತಡೆಗಳಿಲ್ಲದೆ ಮಂದಿರ ಭವ್ಯವಾಗಿ ನಿರ್ಮಾಣಗೊಂಡಿದೆ. ರಾಜಕೀಯ ತೆವಳಿಗೋಸ್ಕರ ಕಾಂಗ್ರೆಸ್ ಈಗ ಟೀಕೆ ಮಾಡುತ್ತ ದೇವಸ್ಥಾನದ ನಿರ್ಮಾಣವನ್ನೆ ಪ್ರಶ್ನಿಸುತ್ತಿದೆ, ಇದು ಖಂಡನೀಯ ಎಂದು ನಗರ ಬಿಜೆಪಿ ಅಧ್ಯಕ್ಷ ರವೀಂದ್ರ ಮೊಯ್ಲಿ ಹೇಳಿದ್ದಾರೆ. ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿ ದೀರ್ಘ ಕಾಲದಿಂದ ಸಮಸ್ತ ಭಕ್ತರು, ಸಮಿತಿ ಸದಸ್ಯರು ಸಂಕಲ್ಪ ತೊಟ್ಟಿದ್ದರು. ಒಮ್ಮತದಿಂದ […]