ಸಹಕಾರ ಸಂಘಗಳ ನೌಕರರ ಕ್ರೀಡಾಕೂಟ ಪೂರ್ವಾಭಾವಿ ಸಭೆ

ಉಡುಪಿ: ಜಿಲ್ಲೆಯ ಸಹಕಾರ ಸಂಘಗಳ ನೌಕರರಿಗೆ ಫೆಬ್ರವರಿ ತಿಂಗಳ‌ ಮೊದಲ‌ ವಾರದಲ್ಲಿ ಸಹಕಾರಿ ಕ್ರೀಡಾಕೂಟವನ್ನು ಆಯೋಜಿಸಲು ನಿರ್ದರಿಸಲಾಗಿದ್ದು ಈ ಕುರಿತು ಪೂರ್ವಭಾವಿ ಸಭೆಯನ್ನು‌‌ ಜ.18 ರಂದು ಹೋಟೆಲ್‌ ಡಯಾನ‌ ಸಭಾಂಗಣದಲ್ಲಿ ನಡೆಸಲಾಯಿತು. ಉಡುಪಿ‌ ಜಿಲ್ಲಾ‌ ಸಹಕಾರಿ‌‌ ಯೂನಿಯನ್ ಅಧ್ಯಕ್ಷ ಬಿ.ಜಯಕರ‌ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ‌ ಸಹಕಾರಿ ಯೂನಿಯನ್ ನಿರ್ದೇಶಕ ಮಂಡಳಿ ಸದಸ್ಯ ಹಾಗೂ ‌ಸಹಕಾರ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜಿ.ಎನ್ ಉಪಸ್ಥಿತರಿದ್ದರು. ಈ‌ ಸಂದರ್ಭದಲ್ಲಿ ಸಹಕಾರ ರತ್ನ‌ ಪ್ರಶಸ್ತಿ ಪುರಸ್ಕೃತರಾದ ಬಿ.ಜಯಕರ ಶೆಟ್ಟಿ […]

ಮರವಂತೆ ಮೀನುಗಾರರ ಸಹಕಾರ ಸಂಘ ನೂತನ ಕಟ್ಟಡ ಉದ್ಘಾಟನೆ

ಬೈಂದೂರು: ಮರವಂತೆ ಮೀನುಗಾರರ ಸಹಕಾರ ಸಂಘ ನಿ., ಮರವಂತೆ ಬೈಂದೂರು, ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಭಾಗವಹಿಸಿ ಶುಭ ಹಾರೈಸಿದರು. ಸಮಾರಂಭವನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಂಸ್ಥೆಯ ಅಧ್ಯಕ್ಷ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.