ಯೂರೋಪಿನಲ್ಲಿ ಧಗೆಯಿಂದ ಹಾಹಾಕಾರ, ಚೀನಾದಲ್ಲಿ ಬರಗಾಲ, ಭಾರತದಲ್ಲಿ ಅತಿವೃಷ್ಟಿಯ ಜಲಧಾರೆ, ಅಮೇರಿಕಾದಲ್ಲಿ ಹಿಮದ ಮಳೆ: ಇದು ಜಾಗತಿಕ ಹವಾಮಾನ ಬದಲಾವಣೆಯ ಕಾಲ

ಒಂದೆಡೆ ಸದಾ ತಣ್ಣಗಿರುತ್ತಿದ್ದ ಯೂರೋಪಿನ ದೇಶಗಳಲ್ಲಿ ತಾಪಮಾನ 35 ಡಿಗ್ರಿ ಹೆಚ್ಚಾಗಿ ಜನ ಬೇಸಗೆಯ ಧಗೆಯಿಂದ ಹೈರಾಣಾಗುತ್ತಿದ್ದರೆ ಇತ್ತ ನೈರುತ್ಯ ಚೀನಾದಲ್ಲಿ ಜುಲೈ ಮಾಹೆಯಲ್ಲಿ ಪ್ರವಾಹವಿರಬೇಕಾದಲ್ಲಿ ಭಯಂಕರ ಬರಗಾಲ ತಾಂಡವವಾಡುತ್ತಿದೆ. ಬ್ರಿಟನ್ನಿನಲ್ಲಿ ಈಗಾಗಾಲೇ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನವು ದಾಖಲೆಯ 40ಡಿಗ್ರಿ ಮಾಪನವನ್ನು ತಲುಪಲಿದೆ ಎನ್ನಲಾಗಿದೆ. ಫ್ರಾನ್ಸ್ ಇಟಲಿಯ ಕಾಡುಗಳನ್ನು ಬೆಂಕಿಯ ಕೆನ್ನಾಲಿಗೆ ಆವರಿಸಿಕೊಂಡಿದೆ. ಇಟಲಿಯಲ್ಲಿ 70 ವರ್ಷಗಳ ಬಳಿಕ ಬರಗಾಲ ಕಂಡು ಬಂದಿದೆ. ಅಮೇರಿಕಾದಲ್ಲಿ ಮರಳಿನ ತೂಫಾನು ಆವರಿಸಿಕೊಂಡು ಹೈವೆಯಲ್ಲಿ ವಾಹನಗಳು ಸಂಚರಿಸಲೂ […]

ರಾಜ್ಯದ ಮಳೆ ಪಟ್ಟಿಯಲ್ಲಿ ಉಡುಪಿಗೆ ಅಗ್ರಸ್ಥಾನ: ಆಗುಂಬೆಯ ಸ್ಥಾನವನ್ನು ಕಿತ್ತುಕೊಂಡ ಕರಾವಳಿ ಜಿಲ್ಲೆಯ ಭಾರೀ ಮಳೆಗೆ ಅರಣ್ಯ ನಾಶ ಕಾರಣ!

ಉಡುಪಿ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಎಡೆಬಿಡದೆ ಸುರಿಯುವ ಭಾರೀ ಮಳೆಗೆ ಹೆಸರುವಾಸಿಯಾಗಿದ್ದು, ದಕ್ಷಿಣ ಭಾರತದ ಚಿರಾಪುಂಜಿ ಎನ್ನುವ ಬಿರುದನ್ನು ಗಳಿಸಿರುವ ವಿಷಯ ಎಲ್ಲರಿಗೂ ತಿಳಿದಿರುವಂತಹದ್ದೆ. ಆದರೆ, ಇದೀಗ ಆಗುಂಬೆಯ ಕೈಯಿಂದ ಈ ಬಿರುದನ್ನು ಉಡುಪಿ ಜಿಲ್ಲೆಯು ಕಸಿದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಕೆಎಸ್‌ಡಿಎಂಎ) ಅಂಕಿಅಂಶಗಳ ಪ್ರಕಾರ, 2015 ಮತ್ತು 2021 ರ ನಡುವೆ ಕಳೆದ ಏಳು ವರ್ಷಗಳಲ್ಲಿ ಇಡೀ ರಾಜ್ಯಕ್ಕೆ ಹೋಲಿಸಿದಲ್ಲಿ ಉಡುಪಿ ಜಿಲ್ಲೆಯ ವಿವಿಧ ಸ್ಥಳಗಳು […]