ಕುಂದಾಪುರ ಕಡಲ ತಡಿಯಲ್ಲಿ ಬಿರುಸಿನಿಂದ ಸಾಗ್ತಿದೆ”ಮಲ್ಲದಾನ” ಸಿನಿಮಾ ಚಿತ್ರೀಕರಣ:
ಕುಂದಾಪುರ: ಅಂಗಾಂಗದಾನದ ಮಹತ್ವ ಸಾರುವ, ಕಣ್ಣೀರಗಡಲಲ್ಲಿ ಸಾಗಿ ಬರುವ, ಭಾವನಾತ್ಮಕ ಹಾಗೂ ಸೂಕ್ಷ್ಮ ಸಂವೇದನೆಯುಳ್ಳು ಎರಡು ಗಂಟೆ ಸಮಯದ “ಮಲ್ಲದಾನ” ತುಳು ಸಿನೆಮಾದ ಚಿತ್ರೀಕರಣ ಕೋಡಿ ಕಡಲ ತಡಿಯಲ್ಲಿ ಬಿರುಸಿನಿಂದ ಸಾಗುತ್ತಿದೆ. ಕರಾವಳಿಯ ಉಡುಪಿ, ಮಲ್ಪೆ, ಮರವಂತೆ, ಕೋಡಿ, ಕುಂದಾಪುರದ ಚಿನ್ಮಯಿ ಆಸ್ಪತ್ರೆ ಹಾಗೂ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರ ಮನೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಈಗಾಗಲೇ ಚಿತ್ರೀಕರಣ ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಕ್ಲೈಮ್ಯಾಕ್ಸ್ ಚಿತ್ರೀಕರಣ ಕೋಡಿ ಬ್ಯಾರೀಸ್ ಕಾಲೇಜಿನ ಆಸುಪಾಸಿನಲ್ಲಿ ನಡೆಯುತ್ತಿದೆ. ಸುಮಾರು ೨೦ಲಕ್ಷ ಬಜೆಟ್‌ನ […]