ವಿಧಾನಪರಿಷತ್ ಚುನಾವಣೆಯಲ್ಲಿ ಕ್ರೈಸ್ತರ ಅವಗಣನೆ ಸಮುದಾಯಕ್ಕೆ ಮಾಡಿದ ಅಪಮಾನ: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಡಿಯೋನ್ ಡಿʼಸೋಜಾ
ಉಡುಪಿ: ವಿಧಾನಪರಿಷತ್ ಚುನಾವಣೆಯಲ್ಲಿ ಕ್ರೈಸ್ತ ಅಭ್ಯರ್ಥಿಗೆ ಅವಕಾಶ ನೀಡದಿರುವ ಕಾಂಗ್ರೆಸ್ ಪಕ್ಷದ ನಿಲುವನ್ನು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಡಿಯೋನ್ ಡಿʼಸೋಜಾ ಖಂಡಿಸಿದ್ದು ಇದು ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಿದ್ದಾರೆ. ಐವನ್ ಡಿಸೋಜಾ ಅವರಂತಹ ನಾಯಕರ ಹೆಚ್ಚಿನ ಪ್ರಾತಿನಿಧ್ಯ ಮತ್ತು ಪಕ್ಷದ ಬದ್ಧತೆಯನ್ನು ಕೆಪಿಸಿಸಿ ಪದೇ ಪದೇ ಕಡೆಗಣಿಸುತ್ತಿದೆ. ಕ್ರಿಶ್ಚಿಯನ್ನರನ್ನು ಇತ್ತೀಚಿನ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಕೇಂದ್ರದವರೆಗಿನ ಚುನಾವಣೆಗಳಿಂದ ದೂರವಿರಿಸಿ ಅವರನ್ನು ದೃಢವಾದ ಮತ ಬ್ಯಾಂಕ್ ಎಂದು ಪರಿಗಣಿಸುವ ಕಾಂಗ್ರೆಸ್ ವಾಸ್ತವದಿಂದ ದೂರವಿದೆ. ಕ್ರಿಶ್ಚಿಯನ್ […]