ನಾಲ್ಕು ಮುದ್ದು ಮರಿಗಳಿಗೆ ಜನ್ಮವಿತ್ತ ನಮೀಬಿಯಾ ಚಿರತೆ ಜ್ವಾಲಾ; ಮೂರು ಮರಿಗಳ ತಾಯಿಯಾದ ಆಶಾ

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಚಿರತೆ ‘ಜ್ವಾಲಾ’ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಜನವರಿ 24 ರಂದು ಸ್ಪಷ್ಟ ಪಡಿಸಿದ್ದಾರೆ. ಮಂಗಳವಾರದಂದು ಚಿರತೆಯು ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಸಚಿವರು ಹೇಳಿದ್ದರು. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ಮುಂಚೂಣಿ ವನ್ಯಜೀವಿ ಯೋಧರು ‘ಜ್ವಾಲಾ’ ಚಿರತೆಯ ಅತಿ ಹತ್ತಿರ ಹೋಗಿ ನೋಡಿದಾಗ ನಾಲ್ಕು ಮರಿಗಳಿರುವುದು ಕಂಡುಬಂದಿದೆ ಎಂದು ಅವರು ಎಕ್ಸ್ ನಲ್ಲಿ ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳ ಪ್ರಕಾರ, […]