ದೊಡ್ಡಣ್ಣಗುಡ್ಡೆ: ಅ.28 ರಂದು ಚಂದ್ರಗ್ರಹಣ; ಶ್ರೀ ಕ್ಷೇತ್ರ ದುರ್ಗಾ ಆದಿಶಕ್ತಿ ದೇವಸ್ಥಾನದಲ್ಲಿ ಗ್ರಹಣ ಶಾಂತಿ 

ದೊಡ್ಡಣ್ಣ ಗುಡ್ಡೆ: ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಗ್ರಹಣ ಶಾಂತಿಯನ್ನು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಅ. 28ರ ಶನಿವಾರ ಹುಣ್ಣಿಮೆಯ ಕಾಲದಲ್ಲಿ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನಿಗೆ ರಾಹು ಗ್ರಹಣವು ಸಂಭವಿಸಲಿದೆ. ಇದರಿಂದ ಅಶ್ವಿನಿ ಮಖ, ಮೂಲಾ, ರೇವತಿ ಭರಣಿ ನಕ್ಷತ್ರದವರಿಗೂ ಮೇಷ ವೃಷಭ ಕನ್ಯಾ ವೃಶ್ಚಿಕ ರಾಶಿಯವರಿಗೂ ಅನಿಷ್ಟಕರವಾಗಿದೆ. ರಾತ್ರಿ ಗಂಟೆ 12. 57ಕ್ಕೆ ಗ್ರಹಣ ಸ್ಪರ್ಶವಾಗಲಿದ್ದು ಬೆಳಗ್ಗಿನ ಜಾವ 1.30ಕ್ಕೆ […]

ಕಾಡುಬೆಟ್ಟು ಶನೇಶ್ವರ ದೇವಸ್ಥಾನದಲ್ಲಿ ಚಂದ್ರಗ್ರಹಣ ಶಾಂತಿ ಹೋಮ

ಉಡುಪಿ: ಅಬ್ಬಗ ದಾರಗ ವೀರಭದ್ರ ಮತ್ತು ಶನೇಶ್ವರ ದೇವಸ್ಥಾನ ಟ್ರಸ್ಟ್ ಕಾಡುಬೆಟ್ಟು ವತಿಯಿಂದ ಶನೇಶ್ವರ ದೇವಸ್ಥಾನದಲ್ಲಿ ಚಂದ್ರ ಗ್ರಹಣ ಪ್ರಯುಕ್ತ ಮಂಗಳವಾರದಂದು ಲೋಕಕಲ್ಯಾಣಾರ್ಥವಾಗಿ ಸಂಜೆ ಸಾಮೂಹಿಕ ಚಂದ್ರಗ್ರಹಣ ಶಾಂತಿ ಹೋಮ ನಡೆಯಿತು. ದೇವಳದ ಅರ್ಚಕರು , ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.