ದೊಡ್ಡಣ್ಣಗುಡ್ಡೆ: ಅ.28 ರಂದು ಚಂದ್ರಗ್ರಹಣ; ಶ್ರೀ ಕ್ಷೇತ್ರ ದುರ್ಗಾ ಆದಿಶಕ್ತಿ ದೇವಸ್ಥಾನದಲ್ಲಿ ಗ್ರಹಣ ಶಾಂತಿ 

ದೊಡ್ಡಣ್ಣ ಗುಡ್ಡೆ: ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಗ್ರಹಣ ಶಾಂತಿಯನ್ನು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಅ. 28ರ ಶನಿವಾರ ಹುಣ್ಣಿಮೆಯ ಕಾಲದಲ್ಲಿ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನಿಗೆ ರಾಹು ಗ್ರಹಣವು ಸಂಭವಿಸಲಿದೆ.

ಇದರಿಂದ ಅಶ್ವಿನಿ ಮಖ, ಮೂಲಾ, ರೇವತಿ ಭರಣಿ ನಕ್ಷತ್ರದವರಿಗೂ ಮೇಷ ವೃಷಭ ಕನ್ಯಾ ವೃಶ್ಚಿಕ ರಾಶಿಯವರಿಗೂ ಅನಿಷ್ಟಕರವಾಗಿದೆ. ರಾತ್ರಿ ಗಂಟೆ 12. 57ಕ್ಕೆ ಗ್ರಹಣ ಸ್ಪರ್ಶವಾಗಲಿದ್ದು ಬೆಳಗ್ಗಿನ ಜಾವ 1.30ಕ್ಕೆ ಗ್ರಹಣ ಮಧ್ಯಕಾಲವಾಗಲಿದೆ. ರಾತ್ರಿ ಗಂಟೆ 2.27 ನಿಮಿಷಕ್ಕೆ ಗ್ರಹಣ ಮೋಕ್ಷಕಾಲವಾಗಲಿದೆ.
ಸುದೀರ್ಘ ಒಂದು ಗಂಟೆ 17 ನಿಮಿಷಗಳ ಕಾಲ ಈ ಗ್ರಹಣ ಸಂಭವಿಸಲಿದ್ದು ರಾತ್ರಿ ಭೋಜನ ನಿಷಿದ್ಧ.
ಗ್ರಹಣ ಕಾಲದ ಅನಿಷ್ಟ ದೋಷ ನಿವಾರಣೆಗಾಗಿ ಸಾಮೂಹಿಕವಾಗಿ ಗ್ರಹಣ ಶಾಂತಿ ಹಮ್ಮಿಕೊಳ್ಳಲಾಗಿದೆ. ಗ್ರಹಣ ಶಾಂತಿಗಾಗಿ ಭಕ್ತರು ತಮ್ಮ ಹೆಸರು, ನಕ್ಷತ್ರ ಮತ್ತು ರಾಶಿಯನ್ನು ನೀಡಿ ಪಾಲ್ಗೊಳ್ಳಬಹುದು.
ಪೂಜಾ ಸಂಕಲ್ಪಕ್ಕೆ 250ರೂ. ನಿಗದಿಪಡಿಸಲಾಗಿದೆ.

ಕಾಣಿಕೆಯನ್ನು ಗೂಗಲ್ ಪೇ ಸಂಖ್ಯೆ: 9342749650 ಗೆ ಕಳುಹಿಸಿಕೊಡಬಹುದು. ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಅವರನ್ನು ಸಂಪರ್ಕಿಸಲು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಶನಿವಾರ ಸಂಭವಿಸಲಿರುವ ಚಂದ್ರಗ್ರಹಣವು ಮಧ್ಯರಾತ್ರಿ ಸಂಭವಿಸಲಿರುವುದರಿಂದ ಪ್ರಾಮುಖ್ಯತೆಯನ್ನು ಪಡೆದಿದೆ. ಜಪ ಸಿದ್ದಿ ಸಾಧಕರಿಗೆ ಇದು ತುಂಬಾ ಅನುಕೂಲವಾಗಲಿದೆ. ಗ್ರಹಣ ಸ್ಪರ್ಶಕಾಲದಲ್ಲಿ ಸ್ನಾನವನ್ನು ಮಾಡಿ ಶುಚಿರ್ಭೂತರಾಗಿ ದೇವರಿಗೆ ತುಪ್ಪದ ದೀಪ ಹಚ್ಚಿ ಅನಿಷ್ಠ ನಿವಾರಣೆಗೆ ಹಾಗೂ ಸ್ವಯಂ ಚೈತನ್ಯಕ್ಕಾಗಿ ದುರ್ಗೆ ಶಿವ ವಿಷ್ಣು ಆರಾಧನೆ ನವಗ್ರಹ ಜಪ ಇವೆಲ್ಲದರಿಂದ ದೇವರ ಧ್ಯಾನ ಆರಾಧನೆ ಮಾಡಿದಲ್ಲಿ ಒಳಿತಾಗಲಿದೆ. ಗ್ರಹಣ ಮೋಕ್ಷ ನಂತರ ಮತ್ತೆ ಸ್ಥಾನಾದಿಗಳನ್ನು ಮಾಡಿ ನಿತ್ಯ ಕೈಂಕರ್ಯ ಮಾಡಬಹುದು. ಗ್ರಹಣ ಕಾಲದಲ್ಲಿ ನಿದ್ದೆ ಮಾಡುವುದು ನಿಷಿದ್ಧ. ಸರ್ವರು ಗ್ರಹಣ ಕಾಲದ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಹೇಳಿದ್ದಾರೆ.