ಡಿಸೆಂಬರ್ ಅಂತ್ಯದೊಳಗೆ 1.5 ಲಕ್ಷ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ನಿರ್ಮಾಣ: ಕೇಂದ್ರ ಸರ್ಕಾರ

ನವದೆಹಲಿ: 1.50 ಲಕ್ಷ ಆಯುಷ್ಮಾನ್ ಭಾರತ್ – ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು (ಎಬಿ-ಎಚ್‌ಡಬ್ಲ್ಯೂಸಿ) ಸ್ಥಾಪಿಸುವ ಗುರಿ ಈ ವರ್ಷದ ಡಿಸೆಂಬರ್‌ ವೇಳೆಗೆ ಕಾರ್ಯರೂಪಕ್ಕೆ ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಶುಕ್ರವಾರ ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯ ಮಂಡಿಸಿದ ಆರೋಗ್ಯ ಹಕ್ಕು ಮಸೂದೆ 2021 ರ ಶಾಸನದ ಮೇಲಿನ ಚರ್ಚೆಯಲ್ಲಿ ಉತ್ತರಿಸಿದ ಡಾ ಮಾಂಡವೀಯ, ದೇಶದಲ್ಲಿ ಒಟ್ಟು 1.50 ಲಕ್ಷ ಕೇಂದ್ರಗಳನ್ನು ಸ್ಥಾಪಿಸುವ ಗುರಿಯಿದ್ದು, ಈಗಾಗಲೇ ಒಂದು ಲಕ್ಷ 22 ಸಾವಿರ ಕೇಂದ್ರಗಳು […]

ಭಾರತದ ಪ್ರಪ್ರಥಮ 5ಜಿ ತರಂಗಾಂತರ ಹರಾಜಿನ ಮೊದಲ ದಿನದಂದು 1.45 ಲಕ್ಷ ಕೋಟಿ ರೂ ದಾಖಲೆ ಬಿಡ್ಡಿಂಗ್ ಸ್ವೀಕರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಭಾರತದ ಪ್ರಪ್ರಥಮ 5ಜಿ ತರಂಗಾಂತರ ಹರಾಜಿನ ಮೊದಲ ದಿನದಂದು ಸರ್ಕಾರವು 1.45 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ಬಿಡ್ಡಿಂಗ್ ಅನ್ನು ಸ್ವೀಕರಿಸಿದೆ. ಮೊದಲ ದಿನದಂದು ನಿರ್ಣಾಯಕ 700 MHz ಬ್ಯಾಂಡ್ ಮೊದಲ ಬಾರಿಗೆ ಬಿಡ್ಡಿಂಗ್ ಕಂಡಿತು. ಮಧ್ಯಮ-ಬ್ಯಾಂಡ್ (3.3-3.67 GHz) ಮತ್ತು ಉನ್ನತ-ಬ್ಯಾಂಡ್ (26 GHz) ಏರ್‌ವೇವ್‌ಗಳು ಬಿಡ್ಡುದಾರರಲ್ಲಿ ಬಲವಾದ ಆಸಕ್ತಿಯನ್ನು ಆಕರ್ಷಿಸಿದವು. ಎಲ್ಲಾ ಬಿಡ್‌ಗಳು ಮೂಲ ಬೆಲೆಯಲ್ಲಿವೆ. ಎಲ್ಲಾ ಮೂರು ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳು, […]

ಕೇಂದ್ರ ಸರಕಾರದ ಮಧ್ಯಪ್ರವೇಶದಿಂದ ಟೋಮೇಟೋ-ನೀರುಳ್ಳಿ ಚಿಲ್ಲರೆ ಮಾರಾಟ ಬೆಲೆ ಸ್ಥಿರ

ನವದೆಹಲಿ: ಮಾನ್ಸೂನ್ ಮಳೆಯ ಪ್ರಾರಂಭದೊಂದಿಗೆ ಮಾರುಕಟ್ಟೆಯ ಆಗಮನವು ಸುಧಾರಿಸಿರುವುದರಿಂದ ಟೊಮೇಟೊದ ಅಖಿಲ ಭಾರತ ಚಿಲ್ಲರೆ ಬೆಲೆ ಕಳೆದ ತಿಂಗಳಿಗಿಂತ ಶೇಕಡಾ 29 ರಷ್ಟು ಕುಸಿತವನ್ನು ದಾಖಲಿಸಿದೆ. ಈರುಳ್ಳಿಯ ಚಿಲ್ಲರೆ ಬೆಲೆಯು ಶೇಕಡಾ 9ರಷ್ಟು ನಿಯಂತ್ರಣದಲ್ಲಿದೆ, ಇದು ಕಳೆದ ವರ್ಷದ ಮಟ್ಟಕ್ಕಿಂತ ಕಡಿಮೆಯಾಗಿದೆ. ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಈರುಳ್ಳಿ ಮತ್ತು ಟೊಮೆಟೊ ಬೆಲೆ ಸ್ಥಿರವಾಗಿರಲು ಸಹಕಾರಿಯಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಪ್ರಸಕ್ತ ವರ್ಷದಲ್ಲಿ ಸರ್ಕಾರವು ಎರಡು ಲಕ್ಷ ಐವತ್ತು ಸಾವಿರ ಟನ್‌ಗಳಷ್ಟು ಈರುಳ್ಳಿಯನ್ನು ಸಂಗ್ರಹಿಸಿದೆ. ಇದು […]

ಕೇಂದ್ರ ಸರಕಾರದಿಂದ “ಒಂದು ರಾಷ್ಟ್ರ, ಒಂದು ಡಯಾಲಿಸಿಸ್” ಯೋಜನೆ: ಮನ್ ಸುಖ್ ಮಾಂಡವೀಯಾ

ನವದೆಹಲಿ: ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳು ಯಾವುದೇ ಸಮಯದಲ್ಲಿ ದೇಶದಲ್ಲಿ ಎಲ್ಲಿ ಬೇಕಾದರೂ ಚಿಕಿತ್ಸೆಗೊಳಗಾಗಲು ಕೇಂದ್ರ ಸಾರಕಾರವು “ಒಂದು ರಾಷ್ಟ್ರ, ಒಂದು ಡಯಾಲಿಸಿಸ್” ಕಾರ್ಯಕ್ರಮವನ್ನು ಹೊರತರಲಿದೆ ಎಂದು ಆರೋಗ್ಯ ಸಚಿವ ಡಾ.ಮನ್ ಸುಖ್ ಮಾಂಡವಿಯಾ ಹೇಳಿದ್ದಾರೆ. ಮರೀನಾ ಬೀಚ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಆಯೋಜಿಸಿದ್ದ ಸೈಕಲ್ ರಾಲಿಯಲ್ಲಿ ಡಾ ಮನ್ಸುಖ್ ಮಾಂಡವಿಯಾ ಭಾಗವಹಿಸಿದ್ದರು. ಆಬಳಿಕ ನಗರದ ತಮಿಳುನಾಡು ಸರಕಾರಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿನ ರೊಬೊಟಿಕ್ ಸರ್ಜರಿ ಸೌಲಭ್ಯ ಮತ್ತು ಆರಂಭಿಕ ಗರ್ಭಧಾರಣೆಯ ಅಸಂಗತತೆಗಳ ತಪಾಸಣೆ ಕೇಂದ್ರವನ್ನು ಅವರು […]

ಕೇಂದ್ರ ಸರ್ಕಾರದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉಡುಪಿ: ಕೇಂದ್ರ ಸರ್ಕಾರದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅರ್ಹ ಅಭ್ಯರ್ಥಿಗಳು https://ssc.nic.in ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ಜೂನ್ 16 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಗತ್ಯವಾದ ಮಾರ್ಗದರ್ಶನವನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದ್ದು, ಅನುಮಾನಗಳಿದ್ದಲ್ಲಿ ಸಹಾಯವಾಣಿ 080- 25502520, 9483862020 ಅನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಮೊ.ನಂ. 9945856670, 8105618291 ಮತ್ತು 8197440155 ನ್ನು ಸಂಪರ್ಕಿಸುವಂತೆ […]