ಪಾದಚಾರಿಗಳಿಗೆ ಕಾರು ಡಿಕ್ಕಿ: ಹಲವರಿಗೆ ಗಾಯ; ಓರ್ವ ಮೃತ್ಯುವಶ
ಮಣಿಪಾಲ: ಇಲ್ಲಿನ ಸೆಂಟ್ರಲ್ ಪಾರ್ಕ್ ಹೋಟೇಲ್ ಇಳಿಜಾರು ರಸ್ತೆಯಲ್ಲಿ ತಡರಾತ್ರಿ ಅತಿ ವೇಗದಿಂದ ಬಂದ ಕಾರೊಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಹಲವರು ಗಾಯಗೊಂಡಿದ್ದು, ಓರ್ವ ಯುವಕ ಮೃತನಾಗಿದ್ದಾನೆ. ಇಲ್ಲಿನ ಐನಾಕ್ಸ್ ಚಿತ್ರಮಂದಿರದ ಹತ್ತಿರ ಹೋಟೇಲ್ ಒಂದರಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ಪಶ್ಚಿಮ ಬಂಗಾಲದ ನಿವಾಸಿ ಸಾಹಿನ್ ಎಸ್.ಕೆ(18) ಮೃತಪಟ್ಟ ಯುವಕ. ಇನ್ನುಳಿದ ಇತರ ಪಾದಾಚಾರಿಗಳಾದ ಸುಮಿತ್ ಜಸ್ವಾಲ್, ಸಂಸುಲ್ ಆರೀಫ್ ಹೋಕ್ಯೂ, ಲತೀಫುಲ್ ಚೌಧರಿ, ಸುಕ್ದೇಬ್ ಕರ್ಮರ್ಕರ್ ಇವರಿಗೆ ಕಾರು ಡಿಕ್ಕಿ ಹೊಡೆದಿದೆ. ಈ ಎಲ್ಲರಿಗೂ […]
ಭಾರತದ ರಸ್ತೆಗಳಲ್ಲಿ ಇಳಿಯಲಿದೆಯೆ ಅಂಬಾಸಿಡರ್ 2.0? ಇವಿ ಅವತಾರದಲ್ಲಿ ಪುನರಾಗಮನಕ್ಕೆ ಸಜ್ಜಾಗುತ್ತಿದೆಯೆ ಹಳೆ ಮಾಡೆಲ್ ಕಾರು?
ನವದೆಹಲಿ: ಎಪ್ಪತ್ತರ ದಶಕದಲ್ಲಿ 75 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದ, ಬಹು ಸುಪ್ರಸಿದ್ದ ಸಾಂಪ್ರದಾಯಿಕ ಅಂಬಾಸಿಡರ್ ಕಾರುಗಳು ತೆರೆಮರೆಗೆ ಸರಿದು ಹಲವು ವರ್ಷಗಳಾಗಿವೆ. ಆದರೀಗ ಹಳೆ ಮಾಡೆಲ್ ಕಾರುಗಳನ್ನು ಮತ್ತೆ ಹೊಸ ಅವತಾರದಲ್ಲಿ ಭಾರತದ ರಸ್ತೆಗಿಳಿಸಲು ಮಾತೃ ಕಂಪನಿ ಹಿಂದೂಸ್ತಾನ್ ಮೋಟಾರ್ಸ್ ಸಜ್ಜಾಗುತ್ತಿದೆ ಎಂದು ವರದಿಯಾಗಿದೆ. ತನ್ನ ಐಕಾನಿಕ್ ಅಂಬಾಸಿಡರ್ ಕಾರುಗಳಿಗೆ ಭಾರತದಲ್ಲಿ ಪ್ರಸಿದ್ಧವಾಗಿರುವ ಹಿಂದೂಸ್ತಾನ್ ಮೋಟಾರ್ಸ್, ಭಾರತೀಯ ಮಾರುಕಟ್ಟೆಯಲ್ಲಿ ತನ್ನನ್ನು ಪುನರ್ ಸ್ಥಾಪಿಸಲು ಯೋಜಿಸುತ್ತಿದ್ದು, ಈ ಬಾರಿ ಎಲೆಕ್ಟ್ರಿಕ್ ವಾಹನ ತಯಾರಕನಾಗಿ ಹೊರಹೊಮ್ಮಲಿದೆ ಎನ್ನಲಾಗಿದೆ. ತನ್ನ […]
ಮಂದಾರ್ತಿ: ಕಾರಿಗೆ ಬೆಂಕಿ ಹಚ್ಚಿಕೊಂಡು ಯುವ ಜೋಡಿ ಆತ್ಮಹತ್ಯೆ ಪ್ರಕರಣ; ಮಕ್ಕಳ ಪ್ರೀತಿಯ ವಿಷಯ ಗೊತ್ತಿಲ್ಲವೆಂದ ಪೋಷಕರು
ಮಂದಾರ್ತಿ: ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಬೆಂಗಳೂರಿನ ಯುವ ಜೋಡಿ ಮಂದಾರ್ತಿ ಸಮೀಪದ ಹೆಗ್ಗುಂಜೆಯಲ್ಲಿ ಬಾಡಿಗೆ ಕಾರಿಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಬಗ್ಗೆ ಮಕ್ಕಳ ಹೆತ್ತವರು ಪ್ರತಿಕ್ರಿಯೆ ನೀಡಿದ್ದು, ತಮ್ಮ ಮಕ್ಕಳು ಪ್ರೀತಿಸುತ್ತಿದ್ದ ವಿಷಯ ತಿಳಿದಿರಲಿಲ್ಲ, ಗೊತ್ತಿದ್ದಿದ್ದರೆ ಅವರಿಬ್ಬರಿಗೂ ಮದುವೆ ಮಾಡಿಸುತ್ತಿದ್ದೆವು ಎಂದು ಹೇಳಿದ್ದಾರೆ. 23 ವರ್ಷದ ಯಶವಂತ್ ಯಾದವ್ ವಿ ಮತ್ತು ಜ್ಯೋತಿ ಎಂ ಅವರ ಮೃತದೇಹಗಳು ಭಾನುವಾರ ಮುಂಜಾನೆ ಸುಟ್ಟ ಕಾರಿನೊಳಗೆ ಪತ್ತೆಯಾಗಿತ್ತು. ಬೆಂಗಳೂರಿನ ನಿವಾಸಿಗಳಾದ ಈ ಯುವ ಜೋಡಿ, ಮೇ 18 ರಂದು […]
ಮಂದಾರ್ತಿ: ಧಗಧಗಿಸುತ್ತಿದ್ದ ಕಾರಿನಲ್ಲಿದ್ದದ್ದು ಬೆಂಗಳೂರಿನ ಯುವ ಜೋಡಿ; ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು?
ಮಂದಾರ್ತಿ: ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ಬೆಳ್ಳಂಬೆಳಗ್ಗೆ ಉರಿಯುತ್ತಿದ್ದ ಕಾರಿನಲ್ಲಿ ಜೋಡಿ ಶವಗಳು ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಕೃತ್ಯ ಎಂದು ತನಿಖೆಯಿಂದ ತಿಳಿದು ಬಂದಿದೆ. ಯಶವಂತ್ (23) ಮತ್ತು ಜ್ಯೋತಿ (23) ಆತ್ಮಹತ್ಯೆ ಮಾಡಿಕೊಂಡಿರುವ ಯುವ ಜೋಡಿ. ಇವರು ಬೆಂಗಳೂರಿನ ಆರ್.ಟಿ.ನಗರದವರು ಎನ್ನಲಾಗಿದೆ. ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಸುಡುತ್ತಿದ್ದ ಕಾರನ್ನು ಕಂಡು ಸ್ಥಳೀಯರು ಬೆಂಕಿ ನಂದಿಸಿದಾಗ ಕಾರಿನೊಳಗೆ ಯುವಕ ಮತ್ತು ಯುವತಿಯ ಶವ ಪತ್ತೆಯಾಗಿದೆ. ಮೃತರು ನಿನ್ನೆ (ಮೇ 21) ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ […]
ಮಂದಾರ್ತಿ: ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಕಾರು, ಇಬ್ಬರು ಪ್ರಯಾಣಿಕರು ಮೃತ್ಯು ವಶ
ಮಂದಾರ್ತಿ: ಮಂದಾರ್ತಿ ಸಮೀಪ ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು ಎಂಬಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟುಹೋದ ಕಾರು ಹಾಗೂ ಎರಡು ಮೃತದೇಹ ಪತ್ತೆಯಾಗಿದೆ. ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ಬೆಂಕಿ ಹೊತ್ತಿ ಉರಿಯುವುದನ್ನು ಕಂಡ ಸ್ಥಳೀಯರು ವಿದ್ಯುತ್ ಅವಘಡ ಆಗಿರಬಹುದೆಂಬ ಶಂಕೆಯಿಂದ ಘಟನಾ ಸ್ಥಳಕ್ಕೆ ಬಂದಾಗ, ಹೊತ್ತಿ ಉರಿಯುತ್ತಿರುವ ಕಾರು ಪತ್ತೆಯಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಬೆಂಕಿ ಆಕಸ್ಮಿಕಕ್ಕೆ ಬಲಿಯಾದರೆ ಅಥವಾ ಇದೊಂದು ಉದ್ದೇಶಪೂರ್ವಕ ಕೃತ್ಯವೋ ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ.