ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ: ಜುಲೈ 10 ರಂದು ತ್ರಿಶಾ ಅಡ್ಮಿಶನ್ ಟೆಸ್ಟ್
ಉಡುಪಿ: ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಾಣಿಜ್ಯ, ವಿಜ್ಞಾನ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ತ್ರಿಶಾ ಅಡ್ಮಿಶನ್ ಟೆಸ್ಟ್ (ಟಿಎಟಿ) ಪರೀಕ್ಷೆ ಜು.10 ರಂದು ನಡೆಯಲಿದೆ. ಸಾಮಾನ್ಯ ಜ್ಞಾನದ ಜತೆಗೆ ವಾಣಿಜ್ಯ ವಿಷಯಗಳ ಅರಿವನ್ನು ಪರೀಕ್ಷಿಸುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತು ಬುದ್ದಿವಂತಿಕೆಯನ್ನು ಅರಿಯಲು ಈ ಪರೀಕ್ಷೆ ಸಹಕಾರಿಯಾಗಲಿದೆ. ಎಂಬಿಎ ಪ್ರವೇಶ ಪರೀಕ್ಷೆ, ಐಎಎಸ್, ಸಿಎ, ಸಿಎಸ್, ಬ್ಯಾಂಕಿಂಗ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗಲಿದೆ. ಯಶಸ್ವಿಯಾಗಿ ನಡೆಸಲಾದ ಟಿಎಟಿ – 1 ದ್ವಿತೀಯ ಪಿಯುಸಿಯ […]
ಸಿ ಎ ದಿನಾಚರಣೆ: ತ್ರಿಶಾ ಹಳೆ ವಿದ್ಯಾರ್ಥಿನಿ ಶ್ರೀಲತಾ ಭಟ್ ಅವರ ಸ್ವ ಅನುಭವದ ಮಾತುಗಳು
ಸವಾಲಿನ ಜೊತೆಗೆ ಏನಾದರೂ ಮಾಡಬೇಕೆನ್ನುವ ಉತ್ಸಾಹವಿತ್ತು. ಸಿಎ ಪದವಿಯ ಜವಾಬ್ದಾರಿ ಮತ್ತು ಕಾರ್ಯವೈಖರಿಯನ್ನು ಗಮನದಲ್ಲಿಟ್ಟುಕೊಂಡು ಸಿ.ಎ ಆಗುವ ಕನಸು ಕಂಡು ಆಳ್ವಾಸ್ ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸಕ್ಕಾಗಿ ಸೇರಿಕೊಂಡೆ. ಸಿಎ ಗೋಪಾಲಕೃಷ್ಣ ಭಟ್ ಅವರ ಪ್ರಶಿಕ್ಷಣ ಕಾರ್ಯಕ್ರಮದಿಂದ ಪ್ರೇರೇಪಣೆಗೊಂಡು ಸಿ.ಎ ಯ ಮೂರು ಹಂತಗಳನ್ನು ‘ತ್ರಿಶಾ ಕ್ಲಾಸಸ್’ ಉಡುಪಿಯಲ್ಲಿ ಪೂರ್ತಿಗೊಳಿಸಿದೆ. ಉಡುಪಿಯ ‘ಸಿ.ಎ ಸಂಸ್ಥೆ ಸಿಕಾಸ’ ನನ್ನ ವೈಯಕ್ತಿಕ ಬೆಳವಣಿಗೆಯೊಂದಿಗೆ ಶ್ರದ್ಧೆ, ಶಿಸ್ತು, ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ತ್ರಿಶಾ ಸಂಸ್ಥೆಯು ನನ್ನ ಮೊದಲ ಕಾರ್ಯಕ್ಷೇತ್ರವಾದ ಅದ್ವೈತ್ ಕನ್ಸಲ್ಟನ್ಸಿ ಆಯ್ಕೆಯಲ್ಲೂ ಕೂಡ […]
ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೆಗಾ ಕರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮ
ಕುಂದಾಪುರ : ಸಿ.ಎ, ಸಿ.ಎಸ್ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳು ಸಾಕಷ್ಟು ಪೂರ್ವ ಸಿದ್ದತೆ ನಡೆಸಬೇಕು. ನಿರಂತರ ಪರಿಶ್ರಮ ಮತ್ತು ಸಾಧಿಸುವ ತುಡಿತವಿದ್ದರೆ ಖಂಡಿತವಾಗಿಯೂ ಸಿ.ಎ, ಸಿ.ಎಸ್ ಕನಸನ್ನು ನನಸಾಗಿಸಿಕೊಳ್ಳಲು ಸಾಧ್ಯ ಎಂದು ಐ.ಸಿ.ಎ.ಐ. ಸೆಂಟ್ರಲ್ ಕೌನ್ಸಿಲ್ ಮೆಂಬರ್ ಸಿ.ಎ ಕೋತಾ ಎಸ್. ಶ್ರೀನಿವಾಸ್ ಹೇಳಿದರು. ಅವರು ಜೂನ್ 8 ರಂದು ಐ.ಸಿ.ಎ.ಐ. ಉಡುಪಿ ಶಾಖೆಯ ಎಸ್.ಐ.ಆರ್.ಸಿ. ಹಾಗೂ ಕಾಲೇಜಿನ ವಾಣಿಜ್ಯ ವಿಭಾಗವು ಆಯೋಜಿಸಿದ್ದ ಮೆಗಾ ಕರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ […]
ತ್ರಿಶಾ ಕ್ಲಾಸಸ್: ಮೇ 20 ರಿಂದ ಸಿಎ ಫೌಂಡೇಶನ್ 21 ದಿನಗಳ ಕ್ರ್ಯಾಶ್ ಕೋರ್ಸ್
ಉಡುಪಿ: ಸಿ.ಎ, ಸಿ.ಎಸ್, ಎಂಬಿಎ, ಪದವಿ, ಪಿಯುಸಿ(ಕಾಮರ್ಸ್) ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಮೇ 20 ರಿಂದ ಸಿಎ ಫೌಂಡೇಶನ್ ಕ್ರ್ಯಾಶ್ ಕೋರ್ಸ್ ಆರಂಭವಾಗಲಿದೆ. ಸಿಎ ಫೌಂಡೇಶನ್ ಸಂಬಂಧಿಸಿದ ವಿಷಯಗಳ ಕುರಿತಾಗಿ ಉಡುಪಿ, ಮಂಗಳೂರು, ಮುಂಬಯಿಯ ಪ್ರಸಿದ್ದ ಪ್ರಾಧ್ಯಾಪಕರ ನೇತೃತ್ವದಲ್ಲಿ ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಈ ತರಬೇತಿ ಆಯೋಜಿಸಲಾಗಿದೆ. ಪ್ರತಿದಿನ ಸಿಎ ಫೌಂಡೇಶನ್ ಗೆತರಗತಿಗಳು ಜರುಗಲಿದ್ದು, ಪ್ರಶ್ನೆ ಪತ್ರಿಕೆಗಳನ್ನು ಅತ್ಯಂತ ಸುಲಭ ವಿಧಾನದಿಂದ ಬಗೆ ಹರಿಸುವ ಕುರಿತು […]
ಸಿಎ ಗಳಿಗಾಗಿ 3 ದಿನಗಳ ರೆಸಿಡೆನ್ಶಿಯಲ್ ರಿಫ್ರೆಶ್ ಕೋರ್ಸ್ ಆಯೋಜನೆ
ಮಡಿಕೇರಿ: ಐಸಿಎಐ ಯ ಎಸ್ ಐ ಆರ್ ಸಿ ಯ ಬೆಂಗಳೂರು ಶಾಖೆಯು ಮಂಗಳೂರು ಮತ್ತು ಉಡುಪಿ ಶಾಖೆಯೊಂದಿಗೆ ಜಂಟಿಯಾಗಿ ಸಿಎ ಮತ್ತು ಕುಟುಂಬದ ಸದಸ್ಯರುಗಳಿಗಾಗಿ 3 ದಿನಗಳ ರೆಸಿಡೆನ್ಶಿಯಲ್ ರಿಫ್ರೆಶ್ ಕೋರ್ಸ್ ಅನ್ನು ಆಯೋಜಿಸಿತ್ತು. ಕಾರ್ಯಕ್ರಮವು ಮೇ 6 ರಿಂದ 8 ವರೆಗೆ ಮಡಿಕೇರಿಯ ಪ್ಯಾಡಿಂಗ್‌ಟನ್ ರೆಸಾರ್ಟ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದ ಅಪ್ಪಚ್ಚು ರಂಜನ್, ಬೆಂಗಳೂರು ಶಾಖೆಯ ಅಧ್ಯಕ್ಷ ಸಿ.ಎ. ಶ್ರೀನಿವಾಸ ಟಿ, ಸಿಎ ಪ್ರಸನ್ನ ಶೆಣೈ, ಮಂಗಳೂರು ಶಾಖೆಯ ಅಧ್ಯಕ್ಷ, ಸಿಎ […]