ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ: ಜುಲೈ 10 ರಂದು ತ್ರಿಶಾ ಅಡ್ಮಿಶನ್ ಟೆಸ್ಟ್

ಉಡುಪಿ: ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಾಣಿಜ್ಯ, ವಿಜ್ಞಾನ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ತ್ರಿಶಾ ಅಡ್ಮಿಶನ್ ಟೆಸ್ಟ್ (ಟಿಎಟಿ) ಪರೀಕ್ಷೆ ಜು.10 ರಂದು ನಡೆಯಲಿದೆ.

ಸಾಮಾನ್ಯ ಜ್ಞಾನದ ಜತೆಗೆ ವಾಣಿಜ್ಯ ವಿಷಯಗಳ ಅರಿವನ್ನು ಪರೀಕ್ಷಿಸುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತು ಬುದ್ದಿವಂತಿಕೆಯನ್ನು ಅರಿಯಲು ಈ ಪರೀಕ್ಷೆ ಸಹಕಾರಿಯಾಗಲಿದೆ. ಎಂಬಿಎ ಪ್ರವೇಶ ಪರೀಕ್ಷೆ, ಐಎಎಸ್, ಸಿಎ, ಸಿಎಸ್, ಬ್ಯಾಂಕಿಂಗ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗಲಿದೆ.

ಯಶಸ್ವಿಯಾಗಿ ನಡೆಸಲಾದ ಟಿಎಟಿ – 1

ದ್ವಿತೀಯ ಪಿಯುಸಿಯ ವಾಣಿಜ್ಯ, ವಿಜ್ಞಾನ, ಕಲಾವಿಭಾಗದ ವಿದ್ಯಾರ್ಥಿಗಳಿಗೆ ತ್ರಿಶಾ ಸಮೂಹ ಸಂಸ್ಥೆಯ, ಟಿಎಟಿ ಪರೀಕ್ಷೆಯನ್ನು ಜೂನ್ 6ಕ್ಕೆ ಯಶಸ್ವಿಯಾಗಿ ರಾಜ್ಯದ 285 ವಿದ್ಯಾರ್ಥಿಗಳ ಹಾಜರಾತಿಯಲ್ಲಿ ನಡೆಸಲಾಯಿತು.
ಪರೀಕ್ಷಾ ಫಲಿತಾಂಶ ಶೀಘ್ರದಲ್ಲೇ ಹೊರಬೀಳಲಿದ್ದು, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತ್ರಿಶಾ ಸಂಸ್ಥೆಯು ವಿದ್ಯಾರ್ಥಿವೇತನ ನೀಡಲಿದೆ ಹಾಗೂ ಪರೀಕ್ಷೆ ಬರೆದ ಅಷ್ಟೂ ವಿದ್ಯಾರ್ಥಿಗಳಿಗೆ ವಾಣಿಜ್ಯ ಕ್ಷೇತ್ರದಲ್ಲಿ ಅವಕಾಶವಿರುವ ಅಗತ್ಯ ವೃತ್ತಿಮಾರ್ಗದರ್ಶನವನ್ನು ಪೋಷಕರ ಸಮ್ಮುಖದಲ್ಲಿ ನೀಡಲಾಗುತ್ತದೆ. ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಾದ ಕೌಶಲಗಳ ಕಲಿಕೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಮಾರ್ಗದರ್ಶನ ನೀಡಲಾಗುತ್ತದೆ.

“ಟಿಎಟಿ ಪರೀಕ್ಷೆ ನನಗೊಂದು ಸ್ಪರ್ಧಾತ್ಮಕ ಪರೀಕ್ಷೆ ಹೇಗಿರುತ್ತೆ ಅನ್ನೋದನ್ನ ತಿಳಿಸಿಕೊಟ್ಟಿದೆ. ಜೊತೆಗೆ ಸಮಯವನ್ನು ಹೇಗೆ ಹೊಂದಾಣಿಕೆ ಮಾಡಿಕೊಂಡು ಪ್ರಶ್ನೆಗಳನ್ನು ಉತ್ತರಿಸಬೇಕು ಅನ್ನೋದನ್ನ ಕಲಿಸಿದೆ. ಪರೀಕ್ಷೆಯ ಮೂಲಕ ನನ್ನ ತಿಳುವಳಿಕೆಯ ಮಟ್ಟ ಇನ್ನೂ ಹೆಚ್ಚಾಗಬೇಕು ಅನ್ನೋದನ್ನ ತಿಳಿಸಿಕೊಟ್ಟದಕ್ಕೆ ತ್ರಿಶಾ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ.”
-ಪ್ರಜ್ವಲ್ ಶಿವಮೊಗ್ಗ
ಸಿ.ಎ ಫೌಂಡೇಶನ್

“ನಾನು ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ದುಕೊಂಡದ್ದು, ಆದರೆ ಸಿ.ಎ ಮಾಡೋದಕ್ಕೆ ಆಸಕ್ತಿ ಇದ್ದುದರಿಂದ ಈ ಪರೀಕ್ಷೆಯನ್ನು ಬರೆದಿದ್ದೇನೆ. ನನ್ನ ಸುತ್ತಮುತ್ತಲಿನ ವಿಚಾರಗಳ ಜೊತೆಗೆ ನನ್ನ ಓದುವಿಕೆಯ ವಿಚಾರಗಳು ಇಲ್ಲಿದ್ದುದಕ್ಕೆ ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಿದ್ದೇನೆ. ಜೊತೆಗೆ ನನ್ನ ಸಾಮರ್ಥ್ಯವನ್ನು ನೋಡಿ ಮುಂದಿನ ನನ್ನ ಆಯ್ಕೆಗಳ ಮಾಹಿತಿಯ ಕೌನ್ಸಿಲಿಂಗ್ ಕೂಡಾ ಸಿಗುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಪರೀಕ್ಷೆ ಬರೆದರೆ ಅವನ ಮುಂದಿನ ಓದಿಗೆ ತುಂಬಾ ಅನುಕೂಲವಾಗುತ್ತದೆ.”
-ಕಾರ್ತಿಕೇಯ ಬಳ್ಳಾರಿ
ಸಿ.ಎ ಫೌಂಡೇಶನ್

“ಇದೊಂದು ಹೊಸ ಅನುಭವ. ಸ್ಪರ್ಧಾತ್ಮಕ ಪರೀಕ್ಷೆಯ ಹೆಸರು ಮಾತ್ರ ಕೇಳಿದ್ದ ನಾನು, ಪರೀಕ್ಷೆ ಹೇಗಿರುತ್ತೆ ಅನ್ನುವುದನ್ನು ಪ್ರಾಯೋಗಿಕವಾಗಿ ತಿಳಿದುಕೊಂಡೆ. ಜೊತೆಗೆ ನನ್ನ ಜ್ಞಾನದ ಪರಿಧಿ ಎಷ್ಟು ಎನ್ನುವ ಅರಿವು ನನಗಿಲ್ಲಿ ಸಿಕ್ಕಿತ್ತು. ಈ ಟಿಎಟಿ ( ತ್ರಿಶಾ ಪ್ರವೇಶ ಪರೀಕ್ಷೆ) ಯ ಜೊತೆ ವಿದ್ಯಾರ್ಥಿಗಳಿಗೆ ಕೌನ್ಸಲಿಂಗ್ ಕೂಡಾ ಸಿಗುವುದರಿಂದ ಮುಂದಿನ ದಾರಿಗಳ ಬಗ್ಗೆ ಪೂರ್ಣ ಮಾಹಿತಿ ಸಿಗುತ್ತದೆ.
-ನಿರ್ಮಿತ್ ಕುಮಾರ್, ಬೆಂಗಳೂರು
ಬಿಬಿಎ-ಫೋಕಸ್ 360 ವಿದ್ಯಾರ್ಥಿ

ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ ಹಾಗೂ ತ್ರಿಶಾ ಕಾಲೇಜು ಮಂಗಳೂರಿನ ಕ್ಯಾಂಪಸ್ ಗಳಲ್ಲಿ ಜುಲೈ 10 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ಪ್ರವೇಶ ಪರೀಕ್ಷೆ ನಡೆಯಲಿದೆ.

ಈ ಪರೀಕ್ಷೆಯು ಒಟ್ಟು 100 ಅಂಕಗಳನ್ನು ಹೊಂದಿದ್ದು ಬಹು ಆಯ್ಕೆಯ ಆಪ್ಟಿಟ್ಯೂಡ್ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಜತೆಗೆ ಸರಳಗಣಿತ, ರೀಸನಿಂಗ್, ಇಂಗ್ಲಿಷ್, ಅಕೌಂಟ್ಸ್ ಹಾಗೂ ಬಿಸಿನೆಸ್ ಸ್ಟಡಿಗೆ ಸಂಬಂಧಿಸಿದ ಆಯ್ಕೆ ಆಧಾರಿತ ಪ್ರಶ್ನೆಗಳಿರುತ್ತವೆ.

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಈ ಸಂಸ್ಥೆಯು ನಡೆಸುವ ಪ್ರವೇಶ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗುವಂತೆ ಸಂಸ್ಥೆಯು ಈ ಮೂಲಕ ತಿಳಿಸಿದೆ.

ಈ ಮೇಲೆ ತಿಳಿಸಿದ ತ್ರಿಶಾ ಕಾಲೇಜುಗಳಲ್ಲಿ ಟಿಎಟಿ ಕುರಿತ ಮಾಹಿತಿ ಕೈಪಿಡಿ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು. ಪರೀಕ್ಷೆಗೆ ನೋಂದಾಯಿಸಲು ಈ ಲಿಂಕ್ ಬಳಸಿ: http://tinyurl.com/ TATexam