ಪರಿಸರ ಉಳಿಸುವ ಪ್ರಜ್ಞೆ ಮನೆಯಿಂದಲೇ ಆರಂಭವಾಗಬೇಕು: ಸಿ.ಎಂ.ಜೋಷಿ

ಉಡುಪಿ: ಪರಿಸರವನ್ನು ಹೇಗೆ ಉಳಿಸಬೇಕು, ಬೆಳೆಸಬೇಕೆಂಬ ಪ್ರಜ್ಞೆ ಶಾಲಾ ಮಟ್ಟದಿಂದಲೇ ಶುರುವಾಗಿದ್ದರೂ, ಪರಿಸರ ಉಳಿಸುವ ಪ್ರಜ್ಞೆಯು ಮನೆಯಿಂದಲೇ ಶುರುವಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮತ್ತು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಸಿ.ಎಂ.ಜೋಷಿ ಹೇಳಿದ್ದಾರೆ. ಅವರು ಗುರುವಾರ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಉಡುಪಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ ಇವರ ಸಹಯೋಗದಲ್ಲಿ, ರಜತಾದ್ರಿಯ ಅಟಲ್ ಬಿಹಾರಿ […]