ಉಡುಪಿ: ವೇಗದೂತ ಸಾರಿಗೆಗಳಲ್ಲಿ ದೈನಂದಿನ, ಮಾಸಿಕ ಪಾಸುಗಳ ವಿತರಣೆ
ಉಡುಪಿ :ಕರಾರಸಾ ನಿಗಮವು ಪ್ರತಿದಿನ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಅತೀ ಕಡಿಮೆ ಪ್ರಯಾಣ ದರದಲ್ಲಿ ಮಂಗಳೂರು-ಉಡುಪಿ ಹಾಗೂ ಉಡುಪಿ-ಕುಂದಾಪುರ ಮಾರ್ಗಗಳಲ್ಲಿ ಕಾರ್ಯಚರಿಸುತ್ತಿರುವ ವೇಗದೂತ ಸಾರಿಗೆಗಳಲ್ಲಿ ದೈನಂದಿನ (ಪ್ರತಿದಿನ ಎರಡು ಟ್ರಿಪ್ (ಹೋಗುವ ಹಾಗೂ ಬರುವ)) ಹಾಗೂ ಮಾಸಿಕ ಬಸ್ಸು ಪಾಸುಗಳನ್ನು (ಒಂದು ತಿಂಗಳಿಗೆ) ವಿತರಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ. ಸದರಿ ದೈನಂದಿನ ಹಾಗೂ ಮಾಸಿಕ ಬಸ್ಸು ಪಾಸುಗಳ ದರಗಳು ಹೀಗಿವೆ. ಮಂಗಳೂರು- ಉಡುಪಿ ದೈನಂದಿನ ಪಾಸು 100 ರೂ., ಮಾಸಿಕ ಪಾಸು 2000 ರೂ.ಗಳು. ಉಡುಪಿ-ಕುಂದಾಪುರ ದೈನಂದಿನ ಪಾಸು […]