ಉಡುಪಿ: ವೇಗದೂತ ಸಾರಿಗೆಗಳಲ್ಲಿ ದೈನಂದಿನ, ಮಾಸಿಕ ಪಾಸುಗಳ ವಿತರಣೆ

ಉಡುಪಿ :ಕರಾರಸಾ ನಿಗಮವು ಪ್ರತಿದಿನ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಅತೀ ಕಡಿಮೆ ಪ್ರಯಾಣ ದರದಲ್ಲಿ ಮಂಗಳೂರು-ಉಡುಪಿ ಹಾಗೂ ಉಡುಪಿ-ಕುಂದಾಪುರ ಮಾರ್ಗಗಳಲ್ಲಿ ಕಾರ್ಯಚರಿಸುತ್ತಿರುವ ವೇಗದೂತ ಸಾರಿಗೆಗಳಲ್ಲಿ ದೈನಂದಿನ (ಪ್ರತಿದಿನ ಎರಡು ಟ್ರಿಪ್ (ಹೋಗುವ ಹಾಗೂ ಬರುವ)) ಹಾಗೂ ಮಾಸಿಕ ಬಸ್ಸು ಪಾಸುಗಳನ್ನು (ಒಂದು ತಿಂಗಳಿಗೆ) ವಿತರಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ. ಸದರಿ ದೈನಂದಿನ ಹಾಗೂ ಮಾಸಿಕ ಬಸ್ಸು ಪಾಸುಗಳ ದರಗಳು ಹೀಗಿವೆ.

ಮಂಗಳೂರು- ಉಡುಪಿ ದೈನಂದಿನ ಪಾಸು 100 ರೂ., ಮಾಸಿಕ ಪಾಸು 2000 ರೂ.ಗಳು. ಉಡುಪಿ-ಕುಂದಾಪುರ ದೈನಂದಿನ ಪಾಸು 70 ರೂ., ಮಾಸಿಕ ಪಾಸು 1400 ರೂ.ಗಳು.

ಸಾರ್ವಜನಿಕ ಪ್ರಯಾಣಿಕರು ಸದರಿ ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಂಗಳೂರು ಕರಾರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.