ಉಡುಪಿಯ ‘ರಾಯಲ್ ಮಹಲ್’ ಬಹುಮಹಡಿ ಕಟ್ಟಡದ ಪಾರ್ಶ್ವ ಭಾಗ ಕುಸಿತ: ತಪ್ಪಿದ ಭಾರೀ ದುರಂತ
ಉಡುಪಿ: ಚಿತ್ತರಂಜನ್ ಸರ್ಕಲ್ ಬಳಿಯ ಸುಮಾರು ಐವತ್ತು ವರ್ಷದ ಹಳೆಯ ರಾಯಲ್ ಮಹಲ್ ಬಹುಮಹಡಿ ಕಟ್ಟಡದ ಪಾರ್ಶ್ವ ಭಾಗ ಕುಸಿದಿದ್ದು, ಅದೃಷ್ಟವಶಾತ್ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಏಕಾಏಕಿಯಾಗಿ ಕಟ್ಟಡ ಕುಸಿದು ಬಿದಿದ್ದು, ಕಟ್ಟಡ ಕುಸಿದು ಬೀಳುವ ಸದ್ದು ಕೇಳಿ ತಳಮಹಡಿಯಲ್ಲಿದ್ದ ಭಾರತೀಯ ಜನ ಔಷಧಿ ಕೇಂದ್ರ, ಹೋಟೆಲ್, ಚಿಪ್ಸ್ ಬೇಕರಿ ಅಂಗಡಿಯ ಸಿಬ್ಬಂದಿ ಹೊರಗಡೆ ಓಡಿ ಬಂದಿದ್ದಾರೆ. ಹಾಗಾಗಿ ಯಾರಿಗೂ ಪ್ರಾಣಹಾನಿಯಾಗಿಲ್ಲ ಎಂದು ವರದಿಯಾಗಿದೆ. ಕಟ್ಟಡದ ಒಂದು ಭಾಗ ಸಂಪೂರ್ಣ ಕುಸಿದಿರುವುದರಿಂದ ಹೆಚ್ಚಿನ […]