ಆನ್ಲೈನ್ ಆರ್ಡರ್: ಬ್ರಹ್ಮಾವರ ವ್ಯಕ್ತಿಯಿಂದ 87 ಸಾವಿರ ಮೋಸ
ಉಡುಪಿ: ಬ್ರಹ್ಮಾವರದ ಕುಂಜಾಲು ನಿವಾಸಿ ದಿನೇಶ್ ದೇವಳಿ ಎಂಬವರು ಇ-ಮೇಲ್ ನೆಟ್‌ನಿಂದ 1799 ರೂ., ಮೌಲ್ಯದ ಬ್ಲೂಟೂಥ್ ಸ್ಪೀಕರ್ ಆರ್ಡರ್ ಮಾಡಿದ್ದು, ಪಾರ್ಸೆಲ್ ತೆರೆದು ನೋಡಿದಾಗ ಇನ್ನೊಂದು ಕಂಪೆನಿಯ ಬ್ಲುಟೂತ್ ಸ್ಪೀಕರ್ ಕಳಿಸಿಕೊಡಲಾಗಿದ್ದು, ಈ ಬಗ್ಗೆ ಕಸ್ಟಮರ್ ಕೇರ್‌ಗೆ ಕರೆ ಮಾಡಿದಾಗ ತಪ್ಪಾಗಿದೆ ಹಣ ವಾಪಾಸ್ಸು ಮಾಡುವುದಾಗಿ ಆನ್ಲೈನ್ ಸಂಸ್ಥೆ ಹೇಳಿ ದಿನೇಶ ದೇವಳಿ ಇವರ ಮೊಬೈಲಿಗೆ ಒಂದು ಸಂದೇಶ ಕಳುಹಿಸಿದೆ. ಆನ್ಲೈನ್ ಕಂಪೆನಿ ಆ ಸಂದೇಶವನ್ನು ಇನ್ನೊಂದು ಮೊಬೈಲ್ ನಂಬರ್‌ಗೆ ಫಾರ್ವಡ್ ಮಾಡಲು ತಿಳಿಸಿದ್ದು, ಹಾಗೆ […]
ಬ್ರಹ್ಮಾವರದಲ್ಲಿ ಶಿಕ್ಷಕರ ಸಹಕಾರಿ ಸಂಘದ ನವೀಕೃತ ಶಾಖಾ ಕಚೇರಿ ಶುಭಾರಂಭ
ಉಡುಪಿ, ಜುಲೈ 8: ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ, ನಿಯಮಿತ ಇದರ ಶಾಖೆಯು ಬ್ರಹ್ಮಾವರದ ಸೈಂಟ್ ಅಂತೋನಿ ಪ್ರೆಸ್ ಪಾಯಿಂಟ್‍ನ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭಗೊಂಡಿದ್ದು, ಈ ಶಾಖೆಯ ಸಂಘದ ಅಧ್ಯಕ್ಷರಾದ ಸಿ. ಪ್ರಭಾಕರ ಶೆಟ್ಟಿಯವರ ನೇತೃತ್ವದಲ್ಲಿ ನೂತನ ವಿನ್ಯಾಸದೊಂದಿಗೆ ನವೀಕರಣಗೊಂಡು ಜೂನ್ 16 ರಂದು ಶುಭಾರಂಭಗೊಂಡಿರುತ್ತದೆ. ಶಾಖೆಯಲ್ಲಿ 528 ಸದಸ್ಯರಿದ್ದು, ಸಂಘದಲ್ಲಿ ಒಟ್ಟು 4146 ಸದಸ್ಯರಿದ್ದಾರೆ. ಸಂಘದ ಒಟ್ಟು ವ್ಯವಹಾರ ಸುಮಾರು 65 ಕೋಟಿ ರೂ. ಆಗಿರುತ್ತದೆ. ಇದೀಗ ನವೀಕರಣಗೊಂಡಿರುವ ಸಂಘದ ಶಾಖಾ ಕಚೇರಿಯಲ್ಲಿ ಜಿಲ್ಲೆಯ ಶಿಕ್ಷಕ […]
ಅಲಂಕಾರಿಕಾ ಮೀನು ಉತ್ಪಾದನಾ ತಂತ್ರಜ್ಞಾನ ಮಾಹಿತಿ ಶಿಬಿರ
ಉಡುಪಿ, ಜೂನ್ 29: ಕೃಷಿ ಮತ್ತು ತೋಟಗಾರಿಕಾ ವಿವಿ ಶಿವಮೊಗ್ಗ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ವತಿಯಿಂದ ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮದಡಿಯಲ್ಲಿ , ಅಲಂಕಾರಿಕಾ ಮೀನು ಉತ್ಪಾದನಾ ತಂತ್ರಜ್ಞಾನಗಳ ಬಗ್ಗೆ 6 ದಿನಗಳ ಮಾಹಿತಿ ಶಿಬಿರ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಮೀನುಗಾರಿಕಾ ವಿವಿಯ ಪ್ರಾಧ್ಯಾಪಕ ಡಾ.ಎ.ಟಿ.ರಾಮಚಂದ್ರ ನಾಯ್ಕ್ , ಅಲಂಕಾರಿಕಾ ಮೀನುಗಳ ಸಾಕಾಣೆ (ಅಕ್ವೇರಿಯಂ ) ಉದ್ಯೋಗಕ್ಕೆ ಹೆಚ್ಚಿನ ಅವಕಾಶವಿದೆ. ದೇಶದಲ್ಲಿ ಸುಮಾರು 250 […]
ಬ್ರಹ್ಮಾವರ: ಕೃಷಿ ಅಭಿಯಾನ ಕಾರ್ಯಕ್ರಮ
ಉಡುಪಿ, ಜೂನ್ 1: ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಬ್ರಹ್ಮಾವರ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮವು ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಘೋಷವಾಕ್ಯದಡಿಯಲ್ಲಿ ಜೂನ್ 12 ರಂದು ಬೆಳಗ್ಗೆ 10.30 ಕ್ಕೆ ಕೊಕ್ಕರ್ಣೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಲಿದ್ದು, ಕೊಕ್ಕರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಸಿಸೇರಿಯನ್ ಸೌಲಭ್ಯ ಪ್ರಾರಂಭ
ಉಡುಪಿ, ಮೇ 10: ಇತ್ತೀಚಿಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯ ನಿರ್ವಹಿಸುತ್ತಿರುವ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೇ 9 ರಂದು ಪ್ರಥಮ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಸಾಕಷ್ಟು ಜನೋಪಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರದಲ್ಲಿ ಪ್ರಸೂತಿ ತಜ್ಞೆ ಡಾ. ದೀಕ್ಷಿತಾ ಹಾಗೂ ಅರವಳಿಕೆ ತಜ್ಞ ಡಾ. ಅಜಿತ್ ಕುಮಾರ್ ಶೆಟ್ಟಿ ಯಶಸ್ವಿಯಾಗಿ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ನಡೆಸಿದರು. ಮಕ್ಕಳ ತಜ್ಞ ಡಾ. ಮಹಾಬಲ ಕೆ.ಎಸ್ ನವಜಾತ ಶಿಶುವಿನ ಯೋಗ ಕ್ಷೇಮ ನೋಡಿಕೊಂಡರು. […]