ಬ್ರಹ್ಮಾವರ: ಅಕ್ಷಯ ಫರ್ನಿಚರ್ ನಲ್ಲಿ ದೀಪಾವಳಿ ಹಬ್ಬದ ವಿಶೇಷ ರಿಯಾಯಿತಿ ಮಾರಾಟ ಮೇಳ
ಬ್ರಹ್ಮಾವರ: ದೀಪಾವಳಿ ಸಂಭ್ರಮದ ಪ್ರಯುಕ್ತ ಅಕ್ಷಯ ಫರ್ನಿಚರ್ ನಲ್ಲಿ ಅ.17 ರಿಂದ ಅ.31ರವೆಗೆ ವಿಶೇಷ ರಿಯಾಯಿತಿ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಅಕ್ಷಯ ಫರ್ನಿಚರ್ಸ್ ನ ವಿಶಾಲ ಮಳಿಗೆಯಲ್ಲಿ ಉತೃಷ್ಟ ಗುಣಮಟ್ಟದ ಪೀಠೋಪಕರಣಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಖರೀದಿಗಳ ಮೇಲೆ ಉಚಿತ ಕೊಡುಗೆಗಳಿವೆ. ಯಾವುದೇ ವೆಚ್ಚವಿಲ್ಲದ ಸುಲಭ ಕಂತುಗಳ ಸಾಲ ಸೌಲಭ್ಯವಿದೆ. ಹಳೆ ಪೀಠೋಪಕರಣಗಳ ಮೇಲೆ 30% ಎಕ್ಸ್ ಚೇಂಜ್ ಆಫರ್ ಮತ್ತು ಉಚಿತ ಡೆಲಿವರಿ ಸೇವೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0820 2561961/ 9108795961/9480574722 […]
ಬ್ರಹ್ಮಾವರ: ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
ಬ್ರಹ್ಮಾವರ: ಇಲ್ಲಿನ ಮೂರ್ತೆದಾರರ ಸೇವಾ ಸಹಕಾರಿ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಶಂಕರ ಪೂಜಾರಿ ಕುಕ್ಕುಡೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಎನ್ ಕರ್ಕೇರಾ ಲೆಕ್ಕ ಪರಿಶೋಧನೆ ನಡೆಸಲಾದ ಆರ್ಥಿಕ ತಃಖ್ತೆಗಳು, ಅನುಪಾಲನಾ ವರದಿ, ಲಾಭಾಂಶ ವಿಂಗಡನೆ, ಬಜೆಟ್ ಮತ್ತು ಖರ್ಚು, 2021-22 ಸಾಲಿನ ಆಯ-ವ್ಯಯ ಪಟ್ಟಿ, ಹಾಗೂ 2022-23 ಸಾಲಿನ ಕಾರ್ಯಚಟುವಟಿಕೆ ಗಳನ್ನು ಮಂಡಿಸಿ ಸರ್ವಾನುಮತದಿಂದ ಅನುಮೋದನೆ ಪಡೆದುಕೊಂಡರು. ಸಂಘದ ಅಧ್ಯಕ್ಷ […]
ಬ್ರಹ್ಮಾವರ: ಉಡುಪಿಯನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಕಚೇರಿಯ ಉದ್ಘಾಟನೆ
ಬ್ರಹ್ಮಾವರ: ಉಡುಪಿಯನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಆಗಸ್ಟ್ 28 ಭಾನುವಾರದಂದು ಬೆಳಿಗ್ಗೆ 10.00 ಗಂಟೆಗೆ ಬ್ರಹ್ಮಾವರದ ಮದರ್ ಪ್ಯಾಲೇಸ್ ಹತ್ತಿರವಿರುವ ಎಸ್.ಎಂ.ಎಸ್ ಚರ್ಚ್ ಕಾಂಪ್ಲೆಕ್ಸ್ ನ 2 ನೇ ಮಹಡಿಯಲ್ಲಿ ಜರುಗಲಿರುವುದು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ದ್ವೀಪ ಪ್ರಜ್ವಲನೆ ಮಾಡಲಿದ್ದು, ಶಾಸಕ ರಘುಪತಿ ಭಟ್ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಮಹಾಲಕ್ಷ್ಮೀ ಕೋ-ಆಪ್ ಬ್ಯಾಂಕ್ ನ ಅಧ್ಯಕ್ಷ ಯಶ್ ಪಾಲ್ ಸುವರ್ಣ ಕೊಠಡಿ […]
ಬ್ರಹ್ಮಾವರ: ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ವತಿಯಿಂದ ಹಾಸ್ಟೆಲ್ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ
ಬ್ರಹ್ಮಾವರ: ಭಾನುವಾರದಂದು ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಹಾಗೂ ಉಡುಪಿ ಟೆಂಪಲ್ ಸಿಟಿ ಲೀಜನ್ ವತಿಯಿಂದ ಬ್ರಹ್ಮಾವರದ ಗಾಂಧಿ ಮೈದಾನದ ಬಳಿ ಮೆಟ್ರಿಕ್ ಪೂರ್ವ ಮಕ್ಕಳಿಗಾಗಿ ಇರುವ ದೇವರಾಜ್ ಅರಸು ಹಿಂದುಳಿದ ವಿಭಾಗದ ಬಾಲಕಿಯರ ಹಾಸ್ಟೆಲ್ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಚೇಂಬರ್ ನ ಎಲ್ಲಾ ಹಿರಿಯ ಸದಸ್ಯರು ಉಪಸ್ಥಿತರಿದ್ದರು.
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಟ್ರೇಡ್ ಬುಲ್ಸ್ ಕಂಪನಿಯ ಕ್ಯಾಂಪಸ್ ಡ್ರೈವ್
ಬ್ರಹ್ಮಾವರ: ಭಾರತದಲ್ಲಿ ಅತ್ಯುತ್ತಮ ಹೆಸರು ಗಳಿಸಿದ ಟ್ರೇಡ್ ಬುಲ್ಸ್ ಕಂಪನಿಯ ಕ್ಯಾಂಪಸ್ ಸೆಲೆಕ್ಷನ್ ತಂಡವು ಬ್ರಹ್ಮಾವರದ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಗೆ ಜುಲೈ 29 ರಂದು ಭೇಟಿ ನೀಡಿತು. ಟ್ರೇಡ್ ಬುಲ್ಸ್ ಕಂಪನಿಯ ಪ್ರತಿನಿಧಿಗಳಾದ ನಯಿಮ್ ಅಕ್ತರ್, ಮಹಮ್ಮದ್ಸಿನಾನ್, ಮಂಜುನಾಥ್ ಇವರುಗಳು ಆಗಮಿಸಿ, ಸಂಸ್ಥೆಯ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಒಳಪಡಿಸಿ ಒಟ್ಟು 16 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರು. ಇದಲ್ಲದೆ ಸುಮಾರು 57 ವಿದ್ಯಾರ್ಥಿಗಳು ಟಿಸಿಎಸ್ ,ಅಪ್ ಸ್ಕಿಲ್ಸ್, ಅಮೆಜಾನ್, ಇಂಡಿಗೋ ಹೀಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಆಯ್ಕೆಯಾಗಿರುತ್ತಾರೆ. ಕಾರ್ಯಕ್ರಮದ […]