ಬ್ರಹ್ಮಾವರ ಖಾಯಂ ನ್ಯಾಯಾಲಯ ಆರಂಭಗೊಂಡಿರುವುದು ಸಂತಸ ತಂದಿದೆ: ಶಿರಿಯಾರ ಪ್ರಭಾಕರ್ ನಾಯಕ್
ಉಡುಪಿ: ಜನತೆಯ ಪರವಾಗಿ ಸಾರ್ವಜನಿಕರಿಗೆ ಅತೀ ಹತ್ತಿರ ತಾಲೂಕು ಮಟ್ಟದ ನ್ಯಾಲಯ ಅತೀ ಅಗತ್ಯವೆಂದು ಪರಿಗಣಿಸಿ ಬೈಂದೂರು, ಬ್ರಹ್ಮಾವರ ಹಾಗೂ ಮುಂದೆ ಕಾಪು ನ್ಯಾಯಾಲಯ ಉದ್ಘಾಟನೆಯಾಗುವ ಸಾಧ್ಯತೆ ಇದೆ ಎಂದು ಹಿರಿಯ ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಕಲ್ಮರ್ಗಿ ಪ್ರಭಾಕರ್ ನಾಯಕ್ ತಿಳಿಸಿದ್ದಾರೆ. ಗ್ರಾಮಾಭಿವೃದ್ಧಿ, ದೇಶ ಪ್ರಗತಿ ಹೊಂದಲು ನ್ಯಾಯಾಲಯವು ಜನರ ಬಳಿಗೆ ತಲುಪುವುದು ಅತೀ ಅಗತ್ಯ ಎಂದು ಮನಗೊಂಡು ಭಾರತ ಸರ್ಕಾರವು ನ್ಯಾಯಾಂಗ ವ್ಯವಸ್ಥೆಯನ್ನು ಸರಿಪಡಿಸುವುದು ಸೂಕ್ತ ಕ್ರಮ ಎಂದು ಭಾವಿಸಿದೆ. ಉಡುಪಿ ಜಿಲ್ಲೆಯಲ್ಲಿ ಬೈಂದೂರು, […]
ಬ್ರಹ್ಮಾವರ: ಸ.ಪ.ಪೂ ಕಾಲೇಜು ಎನ್.ಎಸ್.ಎಸ್ ವತಿಯಿಂದ ಯುವ ಸ್ಪಂದನ ಕಾರ್ಯಕ್ರಮ
ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಸರಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ “ಎನ್ ಎಸ್ ಎಸ್ ಯುವಸ್ಪಂದನ ” ಕಾರ್ಯಕ್ರಮದ ಅಡಿಯಲ್ಲಿ “ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿಗಳು” ಎಂಬ ವಿಚಾರವಾಗಿ ವಿಶೇಷ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಾಲೂಕಿನ ತಹಸೀಲ್ದಾರ್ ರಾಜಶೇಖರ ಮೂರ್ತಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಮ್ಮ ಪರಿಚಯದೊಂದಿಗೆ ತಮ್ಮ ಜೀವನದ ಗುರಿ ಮತ್ತು ತಮ್ಮ ಜೀವನದ ಪ್ರೇರಕ ಶಕ್ತಿಗಳಾದ ಆದರ್ಶ […]
ಬ್ರಹ್ಮಾವರ: ಗ್ರಾಮಪಂಚಾಯತ್ ಅಧ್ಯಕ್ಷ/ ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪಟ್ಟಿ ಪ್ರಕಟ
ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿರುವ ಮೀಸಲಾತಿಯಂತೆ ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ 27 ಗ್ರಾಮ ಪಂಚಾಯತಿಗಳ 30 ತಿಂಗಳ ಎರಡನೇ ಅವಧಿಗೆ ಆಯ್ಕೆಯಾದ ಅಧ್ಯಕ್ಷ / ಉಪಾಧ್ಯಕ್ಷ ಸ್ಥಾನ ಮೀಸಲಾತಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ. ಕ್ರ.ಸಂ. ಗ್ರಾಮ ಪಂಚಾಯತ್ ಹೆಸರು ಅಧ್ಯಕ್ಷ ಉಪಾಧ್ಯಕ್ಷ 1 1-ಕೋಟತಟ್ಟು […]
ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನಲ್ಲಿ ವಾರ್ಷಿಕ ಕ್ರೀಡೋತ್ಸವ
ಬ್ರಹ್ಮಾವರ: ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನ ವಾರ್ಷಿಕ ಕ್ರೀಡೋತ್ಸವವು ಮೇ 25 ರಂದು ಜರುಗಿತು. ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ನ ಅಧ್ಯಕ್ಷ ತಾರನಾಥ್ ಶೆಟ್ಟಿ ವಹಿಸಿದ್ದರು. ಹಂಗಾರಕಟ್ಟೆ ಚೇತನಾ ಹೈಸ್ಕೂಲಿನ ಕಾರ್ಯದರ್ಶಿ ಹೆಚ್. ಇಬ್ರಾಹಿಂ ಸಾಹೆಬ್ ಧ್ವಜಾರೋಹಣ ಮಾಡಿದರು. ಚೇತನಾ ಹೈಸ್ಕೂಲಿನ ಅಧ್ಯಕ್ಷ ಬಿ.ಭರತ್ ಕುಮಾರ್ ಶೆಟ್ಟಿ ಕ್ರೀಡಾ ಜ್ಯೋತಿ ಬೆಳಗಿದರು. ಅತಿಥಿಗಳಾಗಿ ಚೇತನಾ […]
ಮೇ 17 ರಿಂದ 28 ರವರೆಗೆ ‘ಜನನಿ’ ಸಂಭ್ರಮೋತ್ಸವ ವರುಷದ ಆಚರಣೆ: ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ
ಬ್ರಹ್ಮಾವರ: ಇಲ್ಲಿನ ಮಧುವನ ಕಾಂಪ್ಲೆಕ್ಸ್ ನಲ್ಲಿರುವ ಜನನಿ ಎಂಟಪ್ರೈಸಸ್ ನಲ್ಲಿ ವರುಷದ ಆಚರಣೆ ಪ್ರಯುಕ್ತ ಮೇ 17 ರಿಂದ 28 ರವರೆಗೆ ನಡೆಸುವ ಖರೀದಿಗಳಿಗೆ ಆಕರ್ಷಕ ಬಹುಮಾನಗಳು, ಲಕ್ಕಿ ಡ್ರಾ, ವಿಶೇಷ ರಿಯಾಯತಿ, ಕ್ಯಾಶ್ ಬ್ಯಾಕ್, ಉಚಿತ ಡೆಲಿವರಿ ಮುಂತಾದ ಸೌಲಭ್ಯಗಳು ದೊರೆಯಲಿವೆ. ಕಿಚನ್ ಅಪ್ಲಾಯನ್ಸೆಸ್, ಮೊಬೈಲ್ ಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಫರ್ನಿಚರ್ ಗಳ ಮೇಲೆ ಕೊಡುಗೆಗಳು ಲಭ್ಯ. ಹೆಚ್ಚಿನ ಮಾಹಿತಿಗಾಗಿ: 0820-2987075, 9972013221 ಅನ್ನು ಸಂಪರ್ಕಿಸಿ