ಶ್ರೀಲಂಕಾ ಸ್ಫೋಟದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಶಾಂತಿ, ಪ್ರೀತಿ ಅಹಿಂಸೆಯಿಂದ ಜಗತ್ತು ಗೆಲ್ಲಲು ಸಾಧ್ಯ: ಜೆರಾಲ್ಡ್ ಐಸಾಕ್
ಉಡುಪಿ: ಶ್ರೀಲಂಕಾದಲ್ಲಿ ಉಗ್ರರ ಸ್ಫೋಟಕ್ಕೆ ಮೃತರಾದವರಿಗೆ ಗುರುವಾರ ನಗರದ ಶೋಕಮಾತ ಇಗರ್ಜಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಅವರು ಮಾತನಾಡಿ ಭಯೋತ್ಪಾದನೆ, ಹಿಂಸೆ, ದ್ವೇಷ ಹಾಗೂ ಕ್ರೂರ ಕೃತ್ಯಗಳಿಂದ ಜಗತ್ತನ್ನು ನಾಶ ಮಾಡಲು ಸಾಧ್ಯವಿಲ್ಲ. ಬದಲಾಗಿ ಶಾಂತಿ, ಪ್ರೀತಿ, ಅಹಿಂಸೆ ಹಾಗೂ ಕ್ಷಮೆಯ ಮೂಲಕ ಜಗತ್ತನ್ನು, ಮಾನವ ಕುಲವನ್ನು ಜಯಿಸಲು ಸಾಧ್ಯ’ ಎಂದರು. ತಮ್ಮದಲ್ಲದ ತಪ್ಪಿಗೆ ನೂರಾರು ಮಂದಿ ಬಲಿಯಾಗಿದ್ದಾರೆ. ಈ ಕ್ರೂರ ಕೃತ್ಯವನ್ನು ಇಡೀ ಜಗತ್ತು ಖಂಡಿಸುತ್ತದೆ. […]