ಪಕ್ಷ ಹಾಗೂ ವರಿಷ್ಠನ ತೀರ್ಮಾನದಂತೆ ನಡೆದುಕೊಳ್ಳುವೆ: ಹಾಲಾಡಿ ಶ್ರೀನಿವಾಸ ಶೆಟ್ಟಿ

ಕುಂದಾಪುರ: ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಜನರ ಆಶೋತ್ತರಗಳನ್ನು ಪೂರೈಸುತ್ತದೆ. ಬಿಜೆಪಿ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಲಿದ್ದು ಉತ್ತಮ ಆಡಳಿತ ನೀಡಲಿದೆ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ. ಸಚಿವ ಸ್ಥಾನದ ಆಂಕಾಕ್ಷೆ ಬಗ್ಗೆ ಕುಂದಾಪುರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಷ್ಟ್ರೀಯ ಪಕ್ಷವಾದ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಶಾಸಕನಾಗಿರುವೆ. ಹಾಗಾಗಿ ಪಕ್ಷದ ಮಾರ್ಗಸೂಚಿಗಳನ್ನು ನಾವು ಒಪ್ಪಬೇಕಿದೆ. ಪಕ್ಷ ಹಾಗೂ ವರಿಷ್ಠರ ತೀರ್ಮಾನಕ್ಕೆ ಬದ್ದನಾಗಿರುವೆ ಎಂದರು. ಕರಾವಳಿ ಜಿಲ್ಲೆಯಲ್ಲಿಯೇ ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಹೆಚ್ಚು […]
ಜನರ ಜೀವದ ಜತೆ ಬಿಜೆಪಿ ಶಾಸಕರ ಚೆಲ್ಲಾಟ: ರಮಾನಾಥ ರೈ

ಮಂಗಳೂರು: ಅಧಿಕಾರದ ಮದದಲ್ಲಿ ಶಾಸಕರು ಕಾಲಹರಣ ನಡೆಸುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಪ್ರಯತ್ನಿಸುತ್ತಿಲ್ಲ. ಜನರ ಜೀವನದ ಜತೆ ಜನಪ್ರತಿನಿಧಿಗಳು ಚೆಲ್ಲಾಟ ಆಡುತ್ತಿದ್ದಾರೆ. ಜನಪ್ರತಿನಿಧಿಗಳ ನಿಷ್ಕ್ರಿಯತೆಯನ್ನು ಖಂಡಿಸುತ್ತೇನೆ ಎಂದು ಮಾಜಿ ಸಚಿವ ರಮಾನಾಥ ರೈ ಬಿಜೆಪಿ ಶಾಸಕರ ವಿರುದ್ಧ ಕಿಡಿ ಕಾರಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಸಾಂಕ್ರಾಮಿಕ ರೋಗಗಳನ್ನು ಯಾರು ತಡೆಗಟ್ಟಬೇಕು..? ಶಾಸಕರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಬ್ಯುಸಿ ಆಗಿದ್ದಾರೆ. ಇವರಿಗೆ ಜನರ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಮಲದ ಕುದುರೆ ಆಪರೇಶನ್: ಬಹುಮತ […]
ಬಿ.ಎಸ್. ಯಡಿಯೂರಪ್ಪ ಇಂದೇ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಹಲವು ದಿನಗಳ ರಾಜಕೀಯ ಕೋಲಹಲಗಳ ಅನಂತರ ಬಿಜೆಪಿಗೆ ಆಡಳಿತ ನಡೆಸುವ ಅವಕಾಶ ದೊರೆತಿದ್ದು, ಹೀಗಾಗಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರವೇ ರಾಜ್ಯದ ಮುಖ್ಯಮಂತ್ರಿಯಾಗಿ 4ನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಅವಕಾಶ ನೀಡಲು ಮನವಿ ಮಾಡಿದ್ದಾರೆ. ತಮ್ಮದು ಸಿಂಗಲ್ ಲಾರ್ಜೆಸ್ಟ್ ಪಕ್ಷ ಎಂದು ಹಕ್ಕು ಮಂಡಿಸಿದ್ದಾರೆ. ಕೇಂದ್ರಕ್ಕೆ ತೆರಳಿದ್ದ BJP ನಿಯೋಗಕ್ಕೆ ಬಿಜೆಪಿ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಸಂಜೆ 6.15ರ ಒಳಗೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ […]
ವಿಶ್ವಾಸಮತ ಸಾಬೀತಿಗೆ ನಾಳೆ ಡೆಡ್‌ಲೈನ್:ರಾಜ್ಯಪಾರಿಂದ ಸಿ.ಎಂಗೆ ಆದೇಶ:

ಬೆಂಗಳೂರು : ಶುಕ್ರವಾರ ಮಧ್ಯಾಹ್ಹ 1.30ರೊಳಗೆ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಸಾಬೀತು ಮಾಡಬೇಕು ಎಂದು ರಾಜ್ಯಪಾಲ ವಿ.ಆರ್.ವಾಲಾ ಆದೇಶ ನೀಡಿದ್ದಾರೆ. ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರು ಒಂದು ಮುಹೂರ್ತ ನಿಗಧಿ ಮಾಡಿದ್ದಾರೆ. ಸದನ ನಡೆಯುತ್ತಿರುವಾಗ ಸದನದ ಒಳಗಡೆ ರಾಜ್ಯಪಾಲರು ಪ್ರವೇಶ ಮಾಡಬಹುದೆ? ಎನ್ನುವ ಪ್ರಶ್ನೆ ಉದ್ಭವಿಸಿದೆ. ರಾಜ್ಯಪಾರಿಂದ ಸಿ.ಎಂಗೆ ಆದೇಶ: ಸಾಂವಿಧಾನಿಕ ಬಿಕ್ಕಟ್ಟು ಕಾಣಿಸಿಕೊಂಡಾಗ ರಾಜ್ಯಪಾಲರು ಮಧ್ಯಪ್ರವೇಶಿಸಿ ಸಿಎಂಗೆ ಆದೇಶ ನೀಡಿದ್ದಾರೆ. ಗಮನಿಸಬೇಕಾದ ಅಂಶ ಎಂದರೆ ಇಲ್ಲಿ ಆದೇಶ ನೀಡಿರುವುದು ಸಿಎಂಗೆ ಹೊರತು ಸ್ಪೀಕರ್ ಗೆ ಅಲ್ಲ ಎನ್ನುವುದು […]
ಸುರತ್ಕಲ್ ಟೋಲ್‌ಗೇಟ್ ವಿರುದ್ಧ ಪ್ರತಿಭಟನೆ

ಮಂಗಳೂರು: ಮಂಗಳೂರಿನ ಸುರತ್ಕಲ್ ನ ಅಕ್ರಮ ಟೋಲ್‌ಗೇಟ್ ವಿರುದ್ಧ ಏಕಕಾಲದಲ್ಲಿ ಕಾಂಗ್ರೆಸ್ ಬೆಂಬಲಿತ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮುಂಜಾನೆಯೇ ಟೋಲ್‌ಗೇಟ್ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಅಕ್ರಮ ಟೋಲ್ ವಸೂಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯು ಪ್ರತಿಭಟನೆ ನಡೆಸುವ ಸನಿಹದಲ್ಲೇ ಬಿಜೆಪಿಗರೂ ಕೂಡ ಪ್ರತಿಭಟನೆ ನಡೆಸಿ ಗಮನ ಸೆಳೆದರು. ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಪೊಲೀಸ್ ರಕ್ಷಣೆಯಲ್ಲಿ […]