ಡಿ.4 ರಂದು ಹೂಡೆಯಲ್ಲಿ ಕೋಟ ಮೂರ್ತೆದಾರರ ಸೇ.ಸ.ಸಂಘ ದ 6ನೇ ಶಾಖೆ ಶುಭಾರಂಭ
ಉಡುಪಿ: ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘ ತನ್ನ 31ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದು, ಈ ಸಂದರ್ಭದಲ್ಲಿ ಸಂಪೂರ್ಣ ಹವಾನಿಯಂತ್ರಿತ 6ನೇ ಶಾಖೆಯು ತೋನ್ಸೆ ಹೂಡೆಯ ಮೀನು ಮಾರ್ಕೆಟ್ ಎದುರಿನ ‘ಸಿಂಧೂರ ಕಾಂಪ್ಲೆಕ್ಸ್’ನಲ್ಲಿ ಡಿಸೆಂಬರ್ 4 ರಂದು ಬೆಳಿಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ. ಸಂಘವು ಕೋಟದಲ್ಲಿ ಸ್ವಂತ ಸುಸಜ್ಜಿತ ಕೇಂದ್ರ ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣ ಮತ್ತು ಸಭಾಭವನ ಹೊಂದಿದ್ದು, ಸಾಸ್ತಾನ ಶಾಖೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಾಲು ಬಂಡವಾಳ 1.26 ಕೋಟಿ ರೂ., ಠೇವಣಿ 62 ಕೋಟಿ […]
ಜೂನ್ 25: ಕೆ. ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ ವತಿಯಿಂದ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ
ಉಡುಪಿ: ಕೆ. ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ ವತಿಯಿಂದ, ಪ್ರಸಾದ್ ನೇತ್ರಾಲಯ, ಕನ್ನರ್ಪಾಡಿ ಬಿಲ್ಲವ ಸೇವಾ ಸಂಘ, ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕಡೆಕಾರು, ಕಡೆಕಾರು ಗ್ರಾಮ ಪಂಚಾಯತ್, ಕೆ.ಎಂ.ಸಿ ಸಮುದಾಯ ವೈದ್ಯಕೀಯ ವಿಭಾಗ, ನಿರೂಪಮ ಪ್ರಸಾದ್ ಶೆಟ್ಟಿ ಸಾಫಲ್ಯ ಟ್ರಸ್ಟ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ( ಅಂಧತ್ವ ವಿಭಾಗ), ಡಾ.ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಮತ್ತು ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಉಚಿತ ನೇತ್ರ ಹಾಗೂ […]
ನಯಂಪಳ್ಳಿ 4 ನೇ ಅಡ್ಡರಸ್ತೆಗೆ ಶ್ರೀ ನಾರಾಯಣ ಗುರು ಮಾರ್ಗ ಎಂದು ನಾಮಕರಣ: ಆಕ್ಷೇಪಣೆ, ಸಲಹೆ ಆಹ್ವಾನ
ಉಡುಪಿ: ನಗರದ ಸಂತೆಕಟ್ಟೆ ಬಿಲ್ಲವರ ಸೇವಾ ಸಂಘ ಇವರು ನಯಂಪಳ್ಳಿ 4 ನೇ ಅಡ್ಡರಸ್ತೆಗೆ ಶ್ರೀ ನಾರಾಯಣ ಗುರು ಮಾರ್ಗ ಎಂದು ನಾಮಕರಣ ಮಾಡಲಿದ್ದು, ಈ ಕುರಿತು ಆಕ್ಷೇಪಣೆ ಹಾಗೂ ಸಲಹೆಗಳಿದ್ದಲ್ಲಿ ಸಾರ್ವಜನಿಕರು 30 ದಿನಗಳ ಒಳಗೆ ನಗರಸಭೆ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರ ಕಚೇರಿ ತಿಳಿಸಿದೆ.