ಶ್ರೀ ನಾರಾಯಣ ಗುರುಗಳ ಸಂದೇಶ ಸಾರುವ ಬೈಕ್ ರ್ಯಾಲಿಗೆ ಅನುಮತಿ ಕೊಡದ ಇಲಾಖೆ ಬಗ್ಗೆ ಬಿಲ್ಲವರು ಗರಂ!

ಕುಂದಾಪುರ: ಶ್ರೀ ನಾರಾಯಣ ಗುರು ಸಂದೇಶ ಸಾರುವ ಸಲುವಾಗಿ ಭಾನುವಾರ ನಡೆಯಲಿದ್ದ ಬೈಕ್ ರ್ಯಾಲಿಗೆ ಅನುಮತಿ ನಿರಾಕರಿಸಿದ ಬಗ್ಗೆ ಬಿಲ್ಲವ ಸಮಾಜದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಂತಿ ಭಂಗದ ನೆಪವೊಡ್ಡಿ ಅನುಮತಿ ನೀಡದ ಇಲಾಖೆ ವಿರುದ್ಧ ಬಿಲ್ಲವ ಮುಖಂಡರಾದ ಅಶೋಕ್ ಪೂಜಾರಿ ಬೀಜಾಡಿ, ಮಂಜು ಬಿಲ್ಲವ ಸಹಿತ ಇತರರು ಆಕ್ರೋಷ ವ್ಯಕ್ತಪಡಿಸಿದರು. ಶನಿವಾರ ಸಂಜೆಯವರೆಗೂ ಬಿಲ್ಲವ ಸಮಾಜದ ಮುಖಂಡರು ಹಾಗೂ ಸಚಿವ ಶಾಸಕರ ಮೂಲಕವು ಜಿಲ್ಲಾಡಳಿತದ ಬಳಿ ಬೈಕ್ ರ್ಯಾಲಿಗೆ ಅನುಮತಿ ನೀಡುವಂತೆ ಮನವಿ ಮಾಡಿದರೂ ಕೂಡ ಅನುಮತಿ […]