ಭಾರತದ ಕೋವಿಡ್ -19 ಚುಚ್ಚುಮದ್ದು ಅಭಿಯಾನವನ್ನು ಶ್ಲಾಘಿಸಿದ ಮೈಕ್ರೋಸಾಫ್ಟ್ ದಿಗ್ಗಜ: ‘ಜಗತ್ತಿಗೆ ಒಂದು ಪಾಠ’ ಎಂದ ಬಿಲ್ ಗೇಟ್ಸ್
ನವದೆಹಲಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಕೋವಿಡ್ -19 ವಿರುದ್ಧ ಚುಚ್ಚುಮದ್ದು ಅಭಿಯಾನದಲ್ಲಿ ಯಶಸ್ಸನ್ನು ಸಾಧಿಸಿರುವ ಭಾರತವನ್ನು ಶ್ಲಾಘಿಸಿದ್ದಾರೆ ಮತ್ತು ಆರೋಗ್ಯ ಫಲಿತಾಂಶವನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿದ ಭಾರತದ ರೀತಿಯು ಜಗತ್ತಿಗೆ ಒಂದು ಪಾಠವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾದ ಕೆಲವು ದಿನಗಳ ನಂತರ ಮಾಂಡವಿಯಾ ಟ್ವೀಟ್‌ಗೆ ಟ್ವಿಟರ್‌ನಲ್ಲಿ ಉತ್ತರದ ರೂಪದಲ್ಲಿ ಗೇಟ್ಸ್ ಹೇಳಿಕೆ ಬಂದಿದೆ. ಮೇ 25 ರಂದು ಮನ್ಸುಖ್ ಮಾಂಡವಿಯಾ ವರ್ಲ್ಡ್ ಎಕನಾಮಿಕ್ ಫೋರಮ್ 2022 […]