ಬಿಹಾರ: ನಿರ್ಮಾಣ ಹಂತದಲ್ಲಿದ್ದ 1,716 ಕೋಟಿ ರೂ ವೆಚ್ಚದ ಸೇತುವೆ ಎರಡನೇ ಬಾರಿ ಕುಸಿತ; ತನಿಖೆಗೆ ಆದೇಶ
ಪಟ್ನಾ: ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ಗಂಗಾ ನದಿಗೆ 1,716 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸೇತುವೆ ಭಾನುವಾರ ಕುಸಿದು ಬಿದ್ದಿದೆ. ಭಾಗಲ್ಪುರದ ಸುಲ್ತಂಗಂಜ್ ಮತ್ತು ಖಗಾರಿಯಾ ಜಿಲ್ಲೆಯ ಆಗುವನಿ ನಡುವೆ ನಿರ್ಮಿಸಲಾಗಿದ್ದ ಚತುಷ್ಪಥ ಸೇತುವೆ ಎರಡನೇ ಬಾರಿಗೆ ಕುಸಿದಿದೆ. ಘಟನೆ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಕಳೆದ ವರ್ಷ ಜೋರಾದ ಗಾಳಿ ಮಳೆಗೆ ಸೇತುವೆ ಕುಸಿದಿತ್ತು. 2014 ರಲ್ಲಿ ಪ್ರಾರಂಭವಾದ ಸೇತುವೆಯನ್ನು ಪೂರ್ಣಗೊಳಿಸಲು ಇದುವರೆಗೆ ಎಂಟು ಬಾರಿ ಗಡು ನೀಡಲಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸೇತುವೆ […]
ಪರೀಕ್ಷಾ ಕೊಠಡಿಯಲ್ಲಿ 500 ವಿದ್ಯಾರ್ಥಿನಿಯರನ್ನು ಕಂಡು ಮೂರ್ಛೆ ಹೋದ ಹುಡುಗ: ಬಿಹಾರದಲ್ಲೊಂದು ಅಡ್ಮಿಟ್ ಕಾರ್ಡ್ ಅವಾಂತರ
ಪಟ್ನಾ: ಪರೀಕ್ಷಾ ಕೊಠಡಿಯಲ್ಲಿ 500 ವಿದ್ಯಾರ್ಥಿನಿಯರ ನಡುವೆ ಏಕಾಂಗಿಯಾಗಿದ್ದ ವಿದ್ಯಾರ್ಥಿಯೊಬ್ಬ ಪ್ರಜ್ಞೆ ತಪ್ಪಿ ಬಿದ್ದ ಪ್ರಕರಣವೊಂದು ಬಿಹಾರದಿಂದ ವರದಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದೆ. 12ನೇ ತರಗತಿಯ ಮನೀಷ್ ಶಂಕರ್ ಎನ್ನುವ ಈ ವಿದ್ಯಾರ್ಥಿಯ ಪ್ರವೇಶ ಪತ್ರದಲ್ಲಿ ಆತನ ಲಿಂಗದ ಜಾಗದಲ್ಲಿ ‘ಗಂಡು’ ಬದಲಿಗೆ ‘ಹೆಣ್ಣು’ ಎಂದು ತಪ್ಪಾಗಿ ಬರೆದಿರುವುದೆ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ತಪ್ಪಾಗಿ ನಮೂದಾದ ಲಿಂಗದ ಕಾರಣದಿಂದಾಗಿ ಅವನು ಬರೇ ಹುಡುಗಿಯರೇ ತುಂಬಿದ್ದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಾಗಿ ಬಂದಿದೆ. […]
ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಡಾ. ಸಂಜಯ್ ಜೈಸ್ವಾಲ್ ಉಡುಪಿ ಭೇಟಿ
ಉಡುಪಿ: ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಡಾ. ಸಂಜಯ್ ಜೈಸ್ವಾಲ್ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಮಣಿಪಾಲದ ಹೋಟೆಲ್ ವ್ಯಾಲಿವ್ಯೂನಲ್ಲಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ, ಮಾಧ್ಯಮ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಹಾಗೂ ವಿಹಿಂಪ ಮಹಿಳಾ ಪ್ರಮುಖ್ ಪೂರ್ಣಿಮಾ ಸುರೇಶ್ ನಾಯಕ್ ಉಪಸ್ಥಿತರಿದ್ದರು.
ನೇಪಾಳದಲ್ಲಿ 5.1 ತೀವ್ರತೆಯ ಭೂಕಂಪ: ಬಿಹಾರದ ಕೆಲವು ಭಾಗಗಳಲ್ಲಿ ಕಂಪನ
ಕಠ್ಮಂಡು: ಕಠ್ಮಂಡುವಿನ ಪೂರ್ವಕ್ಕೆ 53 ಕಿ.ಮೀ ದೂರದಲ್ಲಿ ಬುಧವಾರ ಮಧ್ಯಾಹ್ನ 2.52ರ ಸುಮಾರಿಗೆ 5.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಆಳವು ಭೂಮಿಯಿಂದ 10 ಕಿಮೀ ಆಳದಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಪಾಟ್ನಾ ಸೇರಿದಂತೆ ಬಿಹಾರದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪಾಟ್ನಾ ಘಟಕ ತಿಳಿಸಿದೆ.
ಬಿಹಾರದ ನಿಗೂಢ ಗುಹೆಯಲ್ಲಿದೆ ಅಪರಿಮಿತ ಸ್ವರ್ಣ ಭಂಡಾರ? 1500 ವರ್ಷಗಳ ಹಿಂದಿನ ರಹಸ್ಯದಿಂದ ಪರದೆ ಸರಿಸಲು ಯಾರಿಂದಲೂ ಸಾಧ್ಯವಾಗಿಲ್ಲ!
ಬಿಹಾರದ ರಾಜ್‌ಗಿರ್‌ನಲ್ಲಿರುವ ವೈಭಾರ್ ಬೆಟ್ಟಗಳಲ್ಲಿ ಮಾನವ ನಿರ್ಮಿತ ಗುಹೆಗಳು ಸಾವಿರಾರು ವರ್ಷಗಳಿಂದಲೂ ಜನರನ್ನು ಆಕರ್ಷಿಸುತ್ತಿದೆ. ಸ್ವರ್ಣ ಭಂಡಾರವೆನ್ನುವ ಹೆಸರಿನಿಂದ ಕರೆಸಿಕೊಳ್ಳುವ ಈ ಗುಹೆಯಲ್ಲಿ ಲೆಕ್ಕವಿಲ್ಲದಷ್ಟು ಅತ್ಯಮೂಲ್ಯ ಸ್ವರ್ಣದ ಖಜಾನೆಯನ್ನು ಬಚ್ಚಿಡಲಾಗಿದೆ ಎನ್ನುವುದೇ ಈ ಗುಹೆಯನ್ನು ಸಹಸ್ರಾರು ಜನರನ್ನು ಇತ್ತ ಆಕರ್ಷಿಸುತ್ತಿರುವುದು. ದಂತಕಥೆಗಳ ಪ್ರಕಾರ ಈ ಗುಹೆಯನ್ನು ವೈರದೇವ ಎಂಬ ಜೈನ ಸನ್ಯಾಸಿಯೊಬ್ಬರು ನಿರ್ಮಿಸಿದ್ದು, ತನ್ನ ಧ್ಯಾನಕ್ಕಾಗಿ ಈ ಗುಹೆಯನ್ನು ಬಳಸುತ್ತಿದ್ದರು. ಇದೆ ಸಮಯದಲ್ಲಿ ಬಿಂಬಿಸಾರನೆನ್ನುವವನೊಬ್ಬನು ತನ್ನ ಅಪರಿಮಿತ ಪರಾಕ್ರಮದ ಮೂಲಕ 15 ನೇ ವಯಸ್ಸಿನಲ್ಲಿಯೆ ರಾಜನಾಗುತ್ತಾನೆ ಮತ್ತು […]