ಕುಂದಾಪುರ: ಜ. 27 ರಂದು ಯುಕ್ತಿ ಉಡುಪ- ಸುನಿಧಿ ಉಡುಪ ಭರತನಾಟ್ಯ ರಂಗಪ್ರವೇಶ

ಕುಂದಾಪುರ: ನೃತ್ಯ ವಸಂತ ನಾಟ್ಯಾಲಯ ಇದರ ನಿರ್ದೇಶಕಿ ವಿದುಷಿ ಪವಿತ್ರ ಅಶೋಕ್ ಅವರ ಶಿಷ್ಯೆಯರಾದ ಹಾಗೂ ರಾಘವ ಉಡುಪ ಮತ್ತು ಶ್ರೀಕಾಂತಿ ಉಡುಪ ದಂಪತಿಗಳ ಪುತ್ರಿಯರಾದ ಯುಕ್ತಿ ಉಡುಪ ಹಾಗೂ ಸುನಿಧಿ ಉಡುಪ ಇವರ ಭರತನಾಟ್ಯ ರಂಗಪ್ರೇವೇಶವು ಜ.27 ರಂದು ಸಂಜೆ 4.30 ಕ್ಕೆ ಭಂಡಾರ್ಕರ್ಸ್ ಕಾಲೇಜಿನ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. ಭಂಡಾರ್ಕರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ, ಕರ್ನಾಟಕ ಕಲಾಶ್ರೀ ಗುರು ಉಲ್ಲಾಳ ಮೋಹನ್ ಕುಮಾರ್, ಕರ್ನಾಟಕ ಕಲಾಶ್ರೀ ಗುರು ಸತ್ಯನಾರಾಯಣ ರಾಜು, ಸಂದೇಶ ಲಲಿತಾ […]

ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

ಕುಂದಾಪುರ: ಡಿ. 5ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಟ್ರಸ್ಟ್ ನ ಅಧ್ಯಕ್ಷ ಗುರೂಜಿ ಶಾಂತಾರಾಮ್ ಭಂಡಾರ್ಕರ್ ಮಾತನಾಡಿ, ಪ್ರತಿದಿನವು ಇತರರನ್ನು ಗೆಲ್ಲಿಸಿ. ನಿತ್ಯವೂ ಮನೆ ಮನಸು ಕನಸಿನಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಇತರರು ಜಯ ಗಳಿಸಬೇಕು. ನಿಮಗೂ ಬದುಕಿನಲ್ಲಿ ಸಾರ್ಥಕತೆಯ ಅನುಭವವಾಗುತ್ತದೆ. ಆಗ ಜಗತ್ತು ನಿಮ್ಮ ವಶವಾಗುತ್ತದೆ. ಪ್ರತಿ ವರ್ಷ ನಮ್ಮ ತಂದೆಯವರಾದ ಎ.ಎಸ್.ಭಂಡಾರ್ಕಾರ್ ಅವರ ಸಂಸ್ಮರಣೆ ಮಾಡುವ ನಿಮಗೆ ಚಿರುಋಣಿ […]

ಕುಂದಾಪುರ: ಆ. 30 ರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ

ಕುಂದಾಪುರ: ಆಗಸ್ಟ್ 30 ರಂದು ಬೆಳಿಗ್ಗೆ 10.30ಕ್ಕೆ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮತ್ತು ತಳಿಕಂಡಿ (ಕುಂದಾಪ್ರ ಕನ್ನಡ ಸಾಂಸ್ಕೃತಿಕ ಕೋಶ) ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಲೇಖಕ ಇಂದ್ರ ಕುಮಾರ್ ಹೆಚ್.ಬಿ ಅವರ “ಎತ್ತರ” ಕಾದಂಬರಿಗೆ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಐ.ಎ.ಎಸ್. ತಳಿಕಂಡಿ (ಕುಂದಾಪ್ರ ಕನ್ನಡ ಸಾಂಸ್ಕೃತಿಕ ಕೋಶ) ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಡಾ. ಹೆಚ್.ಶಾಂತಾರಾಮ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಕಾಲೇಜಿನ ವಿಶ್ವಸ್ಥ ಮಂಡಳಿಯ […]

ಜೀವನದಲ್ಲಿ ಎಲ್ಲ ಬಾಗಿಲುಗಳು ಮುಚ್ಚಿದರೂ ಒಂದು ಬಾಗಿಲು ತೆರೆದಿರುತ್ತದೆ: ಡಾ.ಪಿ.ವಿ.ಭಂಡಾರಿ

ಕುಂದಾಪುರ: ಕಾಲೇಜು ವಿದ್ಯಾರ್ಥಿಗಳು  ಹರೆಯವೂ ಅಲ್ಲದ ವಯಸ್ಕರೂ ಅಲ್ಲದ ವಯಸ್ಸಿನವರು. ಈ ವಿಚಿತ್ರ ವಯಸ್ಸಿನಲ್ಲಿ ಬರುವಂತಹ ಸಮಸ್ಯೆಗಳನ್ನು ಮತ್ತು ಸೋಲನ್ನು ಎದುರಿಸಲು ತಮಗೆ ತಾವೆ ತಯಾರಾಗಬೇಕು. ಜೀವನದಲ್ಲಿ ಎಲ್ಲ ಬಾಗಿಲುಗಳು ಮುಚ್ಚಿದರೂ ಒಂದು ಬಾಗಿಲು ತೆರೆದಿರುತ್ತದೆ ಎಂಬುದರಲ್ಲಿ ನಂಬಿಕೆ ಇಡಬೇಕು  ಎಂದು ಉಡುಪಿಯ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ.ಪಿ.ವಿ.ಭಂಡಾರಿ ಕರೆ ನೀಡಿದರು. ಅವರು ಜೂನ್ 6ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವಯಸ್ಸಿನಲ್ಲಿ ಆತ್ಮವಿಶ್ವಾಸದ […]

ಭಂಡಾರ್ಕಾರ್ಸ್ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಕೆರೆಯ ಹೂಳೆತ್ತುವ ಕಾರ್ಯಕ್ರಮ

ಕುಂದಾಪುರ: ಮೇ. 19 ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಏನ್. ಎಸ್. ಎಸ್ ವಿದ್ಯಾರ್ಥಿಗಳಿಂದ ನೆಂಪು, ನೇರಳಕಟ್ಟೆಯ ಪುರಾತನ ದೇವಾಲಯವಾದ ಶ್ರೀ ಗಣಪತಿ ದೇವಸ್ಥಾನದ ಕೆರೆಯ ಹೂಳೆತ್ತುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ದೇವಸ್ಥಾನದ ಧರ್ಮದರ್ಶಿ ರಾಮಕೃಷ್ಣ ಭಟ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಅರುಣ್ ಎ ಎಸ್, ರಾಮಚಂದ್ರ ಆಚಾರ್, ಅಣ್ಣಪ್ಪ ಪೂಜಾರಿ ಹಾಗೂ ಉಪನ್ಯಾಸಕ ಗಿರಿರಾಜ್ ಭಟ್ ಉಪಸ್ಥಿತರಿದ್ದರು. 90 ವಿದ್ಯಾರ್ಥಿಗಳು ಒಂದು ದಿನದ ಈ ಶಿಬಿರದಲ್ಲಿ ಭಾಗವಹಿಸಿ […]