ಕುಂದಾಪುರ: ಜ. 27 ರಂದು ಯುಕ್ತಿ ಉಡುಪ- ಸುನಿಧಿ ಉಡುಪ ಭರತನಾಟ್ಯ ರಂಗಪ್ರವೇಶ

ಕುಂದಾಪುರ: ನೃತ್ಯ ವಸಂತ ನಾಟ್ಯಾಲಯ ಇದರ ನಿರ್ದೇಶಕಿ ವಿದುಷಿ ಪವಿತ್ರ ಅಶೋಕ್ ಅವರ ಶಿಷ್ಯೆಯರಾದ ಹಾಗೂ ರಾಘವ ಉಡುಪ ಮತ್ತು ಶ್ರೀಕಾಂತಿ ಉಡುಪ ದಂಪತಿಗಳ ಪುತ್ರಿಯರಾದ ಯುಕ್ತಿ ಉಡುಪ ಹಾಗೂ ಸುನಿಧಿ ಉಡುಪ ಇವರ ಭರತನಾಟ್ಯ ರಂಗಪ್ರೇವೇಶವು ಜ.27 ರಂದು ಸಂಜೆ 4.30 ಕ್ಕೆ ಭಂಡಾರ್ಕರ್ಸ್ ಕಾಲೇಜಿನ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ.

ಭಂಡಾರ್ಕರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ, ಕರ್ನಾಟಕ ಕಲಾಶ್ರೀ ಗುರು ಉಲ್ಲಾಳ ಮೋಹನ್ ಕುಮಾರ್, ಕರ್ನಾಟಕ ಕಲಾಶ್ರೀ ಗುರು ಸತ್ಯನಾರಾಯಣ ರಾಜು, ಸಂದೇಶ ಲಲಿತಾ ಕಲಾ ಮಹಾವಿದ್ಯಾಲಯದ ಭರತನಾಟ್ಯ ವಿಭಾಗದ ಮುಖ್ಯಸ್ಥೆ ಗುರು ವಾಣಿ ರಾಜಗೋಪಾಲ್, ಬಿಜೈ ನ ನೃತ್ಯ ಕಲಾ ನಿಕೇತನದ ನಿರ್ದೇಶಕಿ ವಿದುಷಿ ಶೃದ್ದಾ ನರಾಯಣ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.