ಲಾಭ ತರಬೇಕಿದ್ದ ಕಲ್ಲಂಗಡಿ ಕೃಷಿ ನಷ್ಟದ ಹಳ್ಳ ಹಿಡಿಯಿತು: ಅಕಾಲಿಕ ಮಳೆಗೆ ಕಂಗಾಲಾದ ಕೋಟದ ಈ ಕೃಷಿಕ
ಕೋಟ: ಇಲ್ಲಿನ ಕೋಟ ಗಿಳಿಯಾರು ಪರಿಸರದ ಯುವ ಕೃಷಿಕ ಭೋಜ ಪೂಜಾರಿ ತನ್ನ ಎರಡು ಎಕ್ಕರೆ ಪ್ರದೇಶದ ಕೃಷಿ ಭೂಮಿಯಲ್ಲಿ ಕಲ್ಲಂಗಡಿ ಬೆಳೆದಿದ್ದಾರೆ ಆದರೆ ಲಾಭವಾಗಬೇಕಿದ್ದ ಕಲ್ಲಂಗಡಿ ಹಣ್ಣಿನ ಕೃಷಿ ನಷ್ಟದ ಹಳ್ಳ ಹಿಡಿದಿದೆ. ಪ್ರತಿವರ್ಷ ತಾನು ಪ್ರೀತಿಸುವ ಕೃಷಿ ಭೂಮಿಯಲ್ಲಿ ಭತ್ತ,ಉದ್ದು,ಅವಡೆ ಹೀಗೆ ನಾನಾ ರೀತಿಯ ಬೆಳೆಯ ಜೊತೆ ಲಾಭದಾಯಕ ಕಲ್ಲಂಗಡಿ ಹಣ್ಣಿನ ಕೃಷಿ ಬೆಳೆಯುತ್ತಾರೆ.ಆದರೆ ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸುವ ಭೋಜ ಪೂಜಾರಿಗೆ ಈ ಬಾರಿ ದೊಡ್ಡ ಮಟ್ಟದ ಸಂಕಷ್ಟ […]
ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ: ಒಂದು ವಾರ ಲಾಕ್ ಡೌನ್ ಮಾಡಲು ಸರ್ಕಾರ ಚಿಂತನೆ
ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ಕೊರೊನಾ ತೀವ್ರಗತಿಯಲ್ಲಿ ಹಬ್ಬುತ್ತಿದ್ದು, ಇದನ್ನು ತಡೆಗಟ್ಟುವುದೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಕೊರೊನಾಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಬೆಂಗಳೂರು ಸಹಿತ ಏಳು ಜಿಲ್ಲೆಗಳಲ್ಲಿ ಮಂಗಳವಾರದಿಂದ ಒಂದು ವಾರ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಿಎಂ ಯಡಿಯೂರಪ್ಪನವರು ಈ ಬಗ್ಗೆ ಹಿರಿಯ ಸಚಿವರೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೆ ಸಚಿವರು ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರು, ದಕ್ಷಿಣ ಕನ್ನಡ, ಬೀದರ್, ಬಳ್ಳಾರಿ, ಮೈಸೂರು, ಯಾದಗಿರಿ, […]