ಬೆಳ್ತಂಗಡಿ: ಮಿತ್ತಬಾಗಿಲು, ಮಲವಂತಿಗೆ ಮತ್ತು ಕಡಿರುದ್ಯಾವರ ಭಾಗದ ಕಾಂಗ್ರೆಸ್‌ ನಾಯಕರು ಬಿಜೆಪಿ ಸೇರ್ಪಡೆ

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌ ಅವರ ಸಮ್ಮುಖದಲ್ಲಿ ಮೇ.5 ರಂದು ಮಿತ್ತಬಾಗಿಲು, ಮಲವಂತಿಗೆ ಮತ್ತು ಕಡಿರುದ್ಯಾವರ ಭಾಗದ ಕಾಂಗ್ರೆಸ್‌ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡರು. ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಸೆಬಾಸ್ಟಿನ್ ಮಿತ್ತಬಾಗಿಲು, ಬಾಲಕೃಷ್ಣ ಗೌಡ ಮಲವಂತಿಗೆ, ಪೂವಪ್ಪ ಪೂಜಾರಿ ಮಲವಂತಿಗೆ, ವನಿತಾ ಕಡಿರುದ್ಯಾವರ, ಬಾಲಕೃಷ್ಣ ಗೌಡ ಉದ್ದಾರೆ ಅವರನ್ನು ಪಕ್ಷದ ಧ್ವಜ ನೀಡುವ ಮೂಲಕ ಶಾಸಕ ಹರೀಶ್ ಪೂಂಜ ಅವರು ಬಿಜೆಪಿಗೆ ಬರಮಾಡಿಕೊಂಡರು.

ಬೆಳ್ತಂಗಡಿಯನ್ನು ದೇಶದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ಪಣ: ಹರೀಶ್ ಪೂಂಜಾ

ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಅವರು ನಡ, ಮಡಂತ್ಯಾ ರು ಮತ್ತು ಕಲ್ಲೇರಿಯಲ್ಲಿ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗಿಯಾದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಹರೀಶ್ ಪೂಂಜಾ, ಕ್ಷೇತ್ರದ ಮತದಾರರು ಮೊದಲ ಬಾರಿಗೆ ಗೆಲ್ಲಿಸಿದಾಗ ರಸ್ತೆ, ಕಿಂಡಿ ಅಣೆಕಟ್ಟು, ಶಾಲಾ- ಕಾಲೇಜುಗಳ ಅಭಿವೃದ್ದಿ, ಗ್ರಂಥಾಲಯ ಹಾಗೂ ಧಾರ್ಮಿಕ ಕೇಂದ್ರಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಬಾರಿಯೂ ಗೆಲ್ಲಿಸಿದಲ್ಲಿ ಬೆಳ್ತಂಗಡಿಯನ್ನು ದೇಶದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುತ್ತೇನೆ ಎಂದು ಅವರು ಹೇಳಿದರು. ಸಭೆಯಲ್ಲಿ ಮಂಡಲ ಬಿಜೆಪಿ […]

ಬೆಳ್ತಂಗಡಿ: ಸೋಮಾವತಿ ನದಿ ನೀರಿಗೆ ವಿಷಪ್ರಾಷನ – ನೀರು ಸರಬರಾಜು ಸ್ಥಗಿತ, ಮೀನುಗಳ ಮಾರಣಹೋಮ

ಬೆಳ್ತಂಗಡಿ: ನಗರ ಪಂಚಾಯತ್ ವ್ಯಾಪ್ತಿಯಲ್ಲಿ 11 ವಾರ್ಡ್ ಗಳಿಗೆ ನೀರು ಪೂರೈಸುತ್ತಿದ್ದ ಸೋಮಾವತಿ ನದಿ ನೀರಿಗೆ ದುಷ್ಕರ್ಮಿಗಳು ವಿಷ ಬೆರೆಸಿರುವ ಪರಿಣಾಮ ಸಾವಿರಾರು ಮೀನುಗಳ ಮಾರಣಹೋಮವಾಗಿವೆ. ಸೋಮಾವತಿ ನದಿ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಶ್ರಯವಾಗಿದೆ. ನಗರಕ್ಕೆ ಪ್ರಸಕ್ತ ಪ್ರತಿ ದಿನ 10 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದ್ದು ಇದೇ ನೀರನ್ನು ಅವಲಂಬಿಸಲಾಗಿತ್ತು. ಆದರೆ ವಿಷ ಪ್ರಾಶನವಾಗಿರುವ ಪರಿಣಾಮ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಇಂದು ಮುಂಜಾನೆ ಈ ಘಟನೆ ನಡೆದಿದ್ದು, ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ನದಿಯಲ್ಲಿದ್ದ […]

ಅಭಿಮಾನಿಗಳು, ಪಕ್ಷ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಬೆಳ್ತಂಗಡಿ ಅಭ್ಯರ್ಥಿ ಹರೀಶ್ ಪೂಂಜಾ

ಬೆಳ್ತಂಗಡಿ: ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾದೆ. ಈ ಕ್ಷಣಗಳು ನಿಜಕ್ಕೂ ಅವಿಸ್ಮರಣೀಯವಾದುದು. ಬೆಳ್ತಂಗಡಿಗೆ ಬೆಳ್ತಂಗಡಿಯೇ ಸಂಭ್ರಮಿಸಿದ ದಿನವಿದು. ನವ ಬೆಳ್ತಂಗಡಿ ನಿರ್ಮಾಣದ ಕನಸು ಹೊತ್ತು ಮೊದಲ ಬಾರಿಗೆ 2018 ರಲ್ಲಿ ನಾಮಪತ್ರ ಸಲ್ಲಿಸಿದ್ದೆ. ಇಂದು 2023 ರಲ್ಲಿ ನವ ಬೆಳ್ತಂಗಡಿಯನ್ನು ಹೊಸ ಪರ್ವಕ್ಕೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಇದು ಕೇವಲ ನಾಮಪತ್ರ ಸಲ್ಲಿಕೆಯ ದಿನವಲ್ಲ, ವಿಜಯ ಸಂಕಲ್ಪದ ದಿನ. ಮೇ 13 ರಂದು ಮತ್ತೊಮ್ಮೆ ಸಂಭ್ರಮಿಸುವ ಸಂಕಲ್ಪದೊಂದಿಗೆ ಮರಳಿದ್ದೇವೆ, […]

ಮಾ.4 ರಂದು ದ.ಕ ಜಿಲ್ಲಾ ಮಟ್ಟದ ಮಲೆಕುಡಿಯರ ವಾರ್ಷಿಕ ಸಮಾವೇಶ

ಮಂಗಳೂರು: ಮಲೆಕುಡಿಯರ ಸಂಘ ಜಿಲ್ಲಾ ಸಮಿತಿ ದ.ಕ ಜಿಲ್ಲೆ ವತಿಯಿಂದ ಮಾ.4 ರಂದು ದ.ಕ ಜಿಲ್ಲಾ ಮಟ್ಟದ ಮಲೆಕುಡಿಯರ ವಾರ್ಷಿಕ ಸಮಾವೇಶವು ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದಲ್ಲಿರುವ ಮಲೆಕುಡಿಯರ ಸಮುದಾಯ ಭವನ ಶಿವಗಿರಿ ಇಲ್ಲಿ ನಡೆಯಲಿದ್ದು, ಮಲೆಕುಡಿಯ ಸಮುದಾಯದವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.