ವಿಶ್ವ ಏಕತೆಯ ಪ್ರತೀಕ ಯುಎಇ ಯ ಪ್ರಥಮ ಹಿಂದೂ ಮಂದಿರ: ಪ್ರಧಾನಿ ಮೋದಿ
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ಮೊದಲ ಹಿಂದೂ ದೇವಾಲಯವಾದ ಅಬುಧಾಬಿಯಲ್ಲಿ ಬೋಚಸನ್‌ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥಾ (BAPS) ಹಿಂದೂ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉದ್ಘಾಟಿಸಿದರು. ದೇವಾಲಯದ ಆವರಣದಲ್ಲಿ ಗಂಗಾ ಮತ್ತು ಯಮುನಾ ನದಿಗಳಲ್ಲಿ ನೀರನ್ನು ಅರ್ಪಿಸಿದ ಪ್ರಧಾನಿ ಮೋದಿ ನಂತರ ದೇವಾಲಯದೊಳಗೆ ಪ್ರಾರ್ಥನೆ ಸಲ್ಲಿಸಿದರು. ಅಬುಧಾಬಿಯಲ್ಲಿನ BAPS ಹಿಂದೂ ದೇವಾಲಯದ ಲೋಕಾರ್ಪಣೆ ಸಮಾರಂಭ ಗುರುವಾರ ನಡೆಯಿತು. ಉದ್ಘಾಟನೆಗೂ ಮುನ್ನ ಅರ್ಚಕರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಯುಎಇಯಲ್ಲಿ ಮೊದಲ ಹಿಂದೂ ದೇವಾಲಯದ ಕುರಿತು ಮಾತನಾಡಿದ […]
ಅಬುಧಾಬಿಯಲ್ಲಿ ಹಿಂದೂ ದೇವಾಲಯದ ಉದ್ಘಾಟನೆಯ ಆಹ್ವಾನಕ್ಕೆ ಪ್ರಧಾನಿ ಮೋದಿ ಅಸ್ತು
ನವದೆಹಲಿ: ಫೆಬ್ರವರಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ರಾಜಧಾನಿ ಅಬುಧಾಬಿಯಲ್ಲಿ ಹಿಂದೂ ದೇವಾಲಯವನ್ನು ಉದ್ಘಾಟಿಸುವ ಆಹ್ವಾನವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ ಎಂದು ಬಿಎಪಿಎಸ್ ಸ್ವಾಮಿನಾರಾಯಣ ಸಂಸ್ಥೆ ತಿಳಿಸಿದೆ. ಸ್ವಾಮಿ ಈಶ್ವರಚರಣದಾಸ್ ಮತ್ತು ಸ್ವಾಮಿ ಬ್ರಹ್ಮವಿಹಾರಿದಾಸ್ ನೇತೃತ್ವದ ಬಿಎಪಿಎಸ್ ಸಂಘಟನೆಯ ಪ್ರತಿನಿಧಿಗಳು ನವದೆಹಲಿಯ ನಿವಾಸದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಫೆಬ್ರವರಿ 14 ರಂದು ಮಂದಿರದ ಉದ್ಘಾಟನೆಗೆ ಆಹ್ವಾನವನ್ನು ನೀಡಿದರು ಎಂದು ಸ್ವಾಮಿನಾರಾಯಣ ಸಂಸ್ಥೆಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅರಬ್ ದೇಶದಲ್ಲಿ ದೇವಾಲಯವನ್ನು ಉದ್ಘಾಟಿಸುವ ಆಹ್ವಾನವನ್ನು ಪಿಎಂ […]