ಬಂಟ್ವಾಳ: ನದಿಯಲ್ಲಿ ಈಜಲೆಂದು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು
ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ಎಂಬಲ್ಲಿ ಶುಕ್ರವಾರ ಸಂಜೆ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬಿ.ಸಿ.ರೋಡ್ ಕೈಕಂಬ ಪರ್ಲ್ಯ ಮದ್ದ ನಿವಾಸಿ ಜುನೈದ್ ಎಂಬವರ ಪುತ್ರ ಸಲ್ಮಾನ್ (15) ಮೃತಪಟ್ಟ ಬಾಲಕ. ಶುಕ್ರವಾರ ಶಾಲೆಗೆ ರಜೆ ಇದ್ದ ಕಾರಣ ನಾಲ್ಕು ಮಂದಿ ಗೆಳೆಯರು ಸಾಯಂಕಾಲ ಬ್ರಹ್ಮರಕೂಟ್ಲು ಬಂಟರ ಭವನದ ಬಳಿ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದರು. ಈಜುತ್ತಿದ್ದ ವೇಳೆ ಸಲ್ಮಾನ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮೃತ […]
ಬಂಟ್ವಾಳದಲ್ಲಿ ಕಂಡು ಬಂದ ಬರಹ ಪಿ ಎಫ್ ಐ ಸಕ್ರಿಯವಾಗಿರುವ ಸಂಕೇತ: ಮುತಾಲಿಕ್
ಬಂಟ್ವಾಳ: ತಾಲೂಕಿನಲ್ಲಿ ಕಂಡು ಬಂದ ಪಿಎಫ್ ಐ ರಸ್ತೆ ಬರಹ ಒಂದು ಎಚ್ಚರಿಕೆಯಾಗಿದ್ದು ಪಿಎಫ್‌ಐ ಇನ್ನೂ ಸಕ್ರಿಯವಾಗಿದೆ ಎಂಬುದರ ಸಂಕೇತ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಉಡುಪಿಯಲ್ಲಿ ಬುಧವಾರ ಮಾತನಾಡಿದ ಪ್ರಮೋದ್ ಮುತಾಲಿಕ್, ಪಿಎಫ್‌ಐ ಬ್ಯಾನ್ ಅಥವಾ ಬಂಧನದಿಂದ ಅವರ ಆಟ ಮುಗಿಯುವುದಿಲ್ಲ, ಪುಂಡರನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದು ಹೇಳಿದ್ದಾರೆ. ಪಿಎಫ್‌ಐನ ಸಾವಿರಾರು ಕಾರ್ಯಕರ್ತರು ಇನ್ನೂ ಸಕ್ರಿಯವಾಗಿ ಇದ್ದಾರೆ ಎಂದು ಹೇಳಿರುವ ಮುತಾಲಿಕ್, ಕುತಂತ್ರ, ಷಡ್ಯಂತ್ರ, […]