ಬಂಟ್ವಾಳ: ಸುಣ್ಣದ ಡಬ್ಬಿ ನುಂಗಿದ್ದ ನಾಗರಹಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಜೀವದಾನ
ಬಂಟ್ವಾಳ: ತಾಲೂಕಿನ ವಗ್ಗದಲ್ಲಿರುವ ಸಾಲುಮರ ತಿಮ್ಮಕ್ಕ ಉದ್ಯಾನವನದ ಸಮೀಪದ ಕಾವಳಪಡೂರು ಗ್ರಾಪಂ ಉಪಾಧ್ಯಕ್ಷೆ ವಸಂತಿಯವರ ಮನೆ ಬಳಿ ಇದ್ದ ಬಿಲವೊಂದರಲ್ಲಿ ಸಿಲುಕಿ ಹೊರ ಬರಲು ಹೆಣಗಾಡುತ್ತಿದ್ದ ನಾಗರಹಾವನ್ನು ಮೂರು ದಿನಗಳಿಂದ ಗಮನಿಸುತ್ತಿದ್ದ ಮನೆಯವರು ಜೂನ್ 6ರಂದು ವಗ್ಗದ ಉರಗತಜ್ಞ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿ ಮನೆಗೆ ಕರೆಸಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಕಿರಣ್ ಹಾವನ್ನು ಬಿಲದಿಂದ ಮೆಲ್ಲಗೆ ಹೊರ ತೆಗೆದು ರಕ್ಷಿಸಿದ್ದಾರೆ. ಆದರೆ ಅದರ ತಲೆಯ ಕೆಳಭಾಗದಲ್ಲಿ ಎರಡು ಗಾಯಗಳಾಗಿದ್ದರಿಂದ ಚಿಕಿತ್ಸೆಗಾಗಿ ಮಂಗಳೂರಿನ ಪಶುವೈದ್ಯ ಡಾ.ಯಶಸ್ವಿ […]
ಕಾಂಗ್ರೆಸ್ ನಿಂದ ಸಮಾಜ ಬಲಿಷ್ಠಗೊಳಿಸುವ ಕಾರ್ಯ: ರಮಾನಾಥ್ ರೈ
ಬಂಟ್ವಾಳ: ಬಡವರಿಗಾಗಿ ಹಲವಾರು ಯೋಜನೆಗಳನ್ನು ತಂದು ಸಮಾಜವನ್ನು ಬಲಿಷ್ಠವಾಗಿರಿಸುವ ಕಾರ್ಯವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಶ್ರೀಮಂತರ ಪರವಾಗಿರುವ ಕೇಂದ್ರ ಸರಕಾರ ಬಡವರ ಬಗ್ಗೆ ಚಿಂತನೆಯನ್ನೇ ಮಾಡುತ್ತಿಲ್ಲ. ಬಡವರಿಗೆ ಅನುಕೂಲವಾಗುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದು ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದ ಹೆಮ್ಮೆ ನಮ್ಮಲ್ಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ತಿಳಿಸಿದರು. ಅವರು ಬಿ.ಸಿ.ರೋಡಿನಲ್ಲಿ ನಡೆದ ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಮತ್ತು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಕರ್ನಾಟಕ ರಾಜ್ಯ ಸರಕಾರದ ಮಹತ್ತರ ಯೋಜನೆಯಾದ ಶಕ್ತಿ […]
ಬಂಟ್ವಾಳದ ಸಮಗ್ರ ಅಭಿವೃದ್ದಿಗಾಗಿ ರಮಾನಾಥ್ ರೈ ಅವರನ್ನು ಗೆಲ್ಲಿಸೋಣ: ಜಯಂತಿ ಪೂಜಾರಿ
ಬಂಟ್ವಾಳ: ಮಹಿಳೆಯರಿಗೆ ಸುರಕ್ಷಿತ, ಸುಭದ್ರ ಮತ್ತು ಸಮೃದ್ಧಿದಾಯಕ ಪ್ರಣಾಳಿಕೆಯನ್ನು ಕಾಂಗ್ರೆಸ್ ಘೋಷಿಸಿದ್ದು, ಇಂತಹ ದೂರದೃಷ್ಟಿಯುಳ್ಳ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡುವ ಮೂಲಕ ರಾಜ್ಯದಲ್ಲಿ ಸುಸ್ಥಿರ ಸರಕಾರ ರಚಿಸಲು ನೆರವಾಗುವಂತೆ ಬಂಟ್ವಾಳ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಮನವಿ ಮಾಡಿದರು. ಬಂಟ್ವಾಳ ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಐದು ಪ್ರಮುಖ ಗ್ಯಾರಂಟಿಗಳನ್ನು ಘೋಷಿಸಿದೆ. ಬೆಲೆ ಏರಿಕೆ ಗಗನಕ್ಕೇರಿರುವ ಇಂತಹ ಸಂದರ್ಭದಲ್ಲಿ ಮನೆ ನಿರ್ವಹಿಸಲು ಮಹಿಳೆಯರಿಗೆ ಅನುಕೂಲವಾಗುವಂತಹ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. […]
ಬಂಟ್ವಾಳ: ಕಾಂಗ್ರೆಸ್ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ
ಬಂಟ್ವಾಳ : ಸಾಮಾಜಿಕ ಬದ್ಧತೆಯ ಸೈದ್ಧಾಂತಿಕ ರಾಜಕಾರಣ ಮಾಡಿಕೊಂಡು ಬಂದವನು ನಾನು. ಯಾವುದೇ ಧರ್ಮ, ಜಾತಿ ತಾರತಮ್ಯ ಮಾಡದೆ ಎಲ್ಲಾ ವರ್ಗಗಳನ್ನು ಸಮಾನತೆಯಿಂದ ನೋಡಿದವನು. ಚುನಾವಣೆಯಲ್ಲಿ ಮತ್ತೊಮ್ಮೆ ಆಯ್ಕೆಯಾದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಜನಸೇವೆ ಮಾಡುತ್ತೇನೆ ಎಂದು ಬಂಟ್ವಾಳ ಕಾಂಗ್ರೆಸ್ ಅಭ್ಯರ್ಥಿ ಬಿ. ರಮಾನಾಥ ರೈ ಭರವಸೆ ನೀಡಿದರು. ಬಂಟ್ವಾಳ ವಿಧಾನಸಭಾ ಕ್ಷೇತ್ರದ ತಮ್ಮ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ಬಿ.ಸಿ. ರೋಡ್ ನ ಪದ್ಮ ಪೆಟ್ರೋಲ್ ಪಂಪ್ ಮುಂಭಾಗದಲ್ಲಿರುವ ಧನಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿ ರಮಾನಾಥ […]
ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಭಜರಂಗದಳ ಪ್ರಮುಖನ ಮೃತದೇಹ ಪತ್ತೆ
ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಭಜರಂಗದಳ ಕಲ್ಲಡ್ಕ ಪ್ರಖಂಡದ ಗೋ ರಕ್ಷಾ ಪ್ರಮುಖ್ ರಾಜೇಶ್ ಪೂಜಾರಿ (26) ಎಂಬವರ ಮೃತದೇಹ ಪತ್ತೆಯಾಗಿದೆ. ಪಾಣೆಮಂಗಳೂರಿನ ಹಳೆಯ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸೇತುವೆಯ ಮೇಲೆ ದ್ವಿಚಕ್ರವಾಹನ ಪತ್ತೆಯಾದ ಹಿನ್ನೆಲೆಯಲ್ಲಿ ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರ ತಂಡವು ಆಗಮಿಸಿ ಶೋಧ ನಡೆಸಿದೆ. ಈ ಸಂದರ್ಭ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ರಾಜೇಶ್ ಪೂಜಾರಿ […]