ಬ್ಯಾಂಕ್ ಆಫ್ ಬರೋಡಾ ವತಿಯಿಂದ ಅಂತರ ಕಾಲೇಜು ಹಿಂದಿ ಸಂಗೋಷ್ಠಿ ಕಾರ್ಯಕ್ರಮ

ಮಂಗಳೂರು: ಬ್ಯಾಂಕ್ ಆಫ್ ಬರೋಡಾ, ವಲಯ ಕಛೇರಿ, ಮಂಗಳೂರು ಮತ್ತು ಬೆಸಂಟ್ ಮಹಿಳಾ ಕಾಲೇಜು ಕೊಡಿಯಾಲ್ ಬೈಲ್, ಮಂಗಳೂರು ವತಿಯಿಂದ ಜಂಟಿಯಾಗಿ ಅಂತರ ಕಾಲೇಜು ಹಿಂದಿ ಸಂಗೋಷ್ಠಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಮಂಗಳೂರಿನ ಸ್ಥಳೀಯ ಕಾಲೇಜು, ಉಡುಪಿ ಮತ್ತು ಸುಳ್ಯ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಂಗೋಷ್ಠಿ ಮತ್ತು ಪೇಪರ್ ಪ್ರಸ್ತುತಿ ಸ್ಪರ್ಧೆಯಲ್ಲಿ ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾತೃಭಾಷೆಯ ಮಹತ್ವದ ಬಗ್ಗೆ ವಿಮರ್ಶಿಸಿ ಸಂಶೋಧನಾ ಲೇಖನಗಳನ್ನು ಪ್ರಸ್ತುತ ಪಡಿಸಿದರು. ಬೆಸೆಂಟ್ ಮಹಿಳಾ ಕಾಲೇಜ್ ಪ್ರಾಂಶುಪಾಲ ಡಾ. ಪ್ರವೀಣ ಕುಮಾರ್ ಕೆ […]

ವ್ಯಕ್ತಿಗಳ ಪಾಸ್‌ಪೋರ್ಟ್ ಅಥವಾ ಓಸಿಐ ಕಾರ್ಡ್ ಗಳನ್ನು ಬ್ಯಾಂಕ್ ಗಳು ಇಟ್ಟುಕೊಳ್ಳುವುದು ಕಾನೂನುಬಾಹಿರ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ವ್ಯಕ್ತಿಗಳ ಪಾಸ್‌ಪೋರ್ಟ್ ಅಥವಾ ಓಸಿಐ ಕಾರ್ಡ್ಗಳನ್ನು ಬ್ಯಾಂಕ್‌ ಗಳು ತಮ್ಮ ಬಳಿ ಇಟ್ಟುಕೊಳ್ಳುವುದು ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಹೇಳಿದೆ. ಬ್ಯಾಂಕ್‌ನಿಂದ ಯಾವುದೇ ವ್ಯಕ್ತಿಯ ಪಾಸ್‌ಪೋರ್ಟ್ ಮತ್ತು ಒಸಿಐ ಕಾರ್ಡ್ ಅನ್ನು ಉಳಿಸಿಕೊಳ್ಳುವುದು ಕಾನೂನುಬಾಹಿರ ಎಂದು ತಿಳಿಸಿದ ಕರ್ನಾಟಕ ಹೈಕೋರ್ಟ್, ವಿಡಿಬಿ ಪ್ರಾಪರ್ಟಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಲ್ಲಿ ಒಬ್ಬರಾದ ಅರ್ಜಿದಾರ ಕೋಶಿ ವರ್ಗೀಸ್‌ ಅವರ ಪಾಸ್‌ಪೋರ್ಟ್ ಮತ್ತು ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ (ಓಸಿಐ) ಕಾರ್ಡ್ ಅನ್ನು ಅವರಿಗೆ ವಾಪಸ್ ಮರಳಿಸುವಂತೆ ಬ್ಯಾಂಕಿಗೆ […]

ಮಂಗಳೂರು: ಬ್ಯಾಂಕ್ ಆಫ್ ಬರೋಡಾ ವಿಜಿಲೆನ್ಸ್ ಜಾಗೃತಿ ಸಪ್ತಾಹ – 2023

ಮಂಗಳೂರು: ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯದ ಶಾಖೆಯಿಂದ “ಭ್ರಷ್ಟಾಚಾರ ತ್ಯಜಿಸಿ, ರಾಷ್ಟ್ರಕ್ಕೆ ಬದ್ಧರಾಗಿರಿ” ಎಂಬ ಧ್ಯೇಯದೊಂದಿಗೆ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ಸ್ಮರಣಾರ್ಥ ಮಂಗಳವಾರದಂದು ವಾಕಥಾನ್ ಆಯೋಜಿಸಲಾಯಿತು. ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ವಾಕಥಾನ್‌ಗೆ ಚಾಲನೆ ನೀಡಿದರು. ವಿಜಯ ಟವರ್ಸ್ ಜ್ಯೋತಿ ವೃತ್ತದಿಂದ, ಎ.ಬಿ.ಶೆಟ್ಟಿ ವೃತ್ತದವರೆಗೆ ವಾಕಥಾನ್ ನಡೆಯಿತು. ಕೆಎಸ್‌ಪಿಎಸ್, ಎಸಿಪಿ ಟ್ರಾಫಿಕ್, ಗೀತಾ ಕುಲಕರ್ಣಿ, ಪ್ರಧಾನ ವ್ಯವಸ್ಥಾಪಕರು ಮತ್ತು ಮಂಗಳೂರು ಬ್ಯಾಂಕ್ ಆಫ್ ಬರೋಡಾ ವಲಯ […]

ಬ್ಯಾಂಕ್‌ಆಫ್ ಬರೋಡಾದಿಂದ ಬಾಬ್ ಲೈಟ್ ಉಳಿತಾಯ ಖಾತೆಯ ಪರಿಚಯ: ಜೀವಮಾನ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ

ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್‌ ಆಫ್ ಬರೋಡಾ ತನ್ನ “ಬಾಬ್ ಕಿ ಸಂಗ್, ತ್ಯೋಹಾರ್ ಕಿ ಉಮಂಗ್” ಹಬ್ಬದ ಅಂಗವಾಗಿ ಬಾಬ್‌ ಲೈಟ್‌ಉಳಿತಾಯ ಖಾತೆ–ಜೀವಮಾನ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಯನ್ನು ಪರಿಚಯಿಸಿದೆ. ಗ್ರಾಹಕರಿಗೆ ಯಾವುದೇ ಕನಿಷ್ಟ ಬ್ಯಾಲೆನ್ಸ್ ಅಗತ್ಯವಿಲ್ಲದ ಬ್ಯಾಂಕಿಂಗ್‌ ಅನುಭವವನ್ನು ನೀಡುತ್ತದೆ. ಇದಲ್ಲದೆ, ವಿವಿಧ ಗ್ರಾಹಕರ ವಿಭಾಗಗಳ ಅಗತ್ಯತೆಗಳನ್ನು ಪೂರೈಸಲು, ಖಾತೆಯಲ್ಲಿ ನಾಮಮಾತ್ರ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ ಅನ್ನು ನಿರ್ವಹಿಸುವ ಮೂಲಕ ಬಾಬ್‌ ಲೈಟ್‌ ಖಾತೆಯು ಜೀವಮಾನದ ಉಚಿತ ರುಪೇ ಪ್ಲಾಟಿನಂ […]

ಮಂಗಳೂರು: ಬ್ಯಾಂಕ್ ಆಫ್ ಬರೋಡಾದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (ಬ್ಯಾಂಕ್) ಭಾರತದ 77 ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ರಾಷ್ಟ್ರವ್ಯಾಪಿ ಉಪಕ್ರಮಗಳೊಂದಿಗೆ ಆಚರಿಸಿತು. ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದೇಬದತ್ತ ಚಂದ್ ಮಾತನಾಡಿ, ನಾವು ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವಾಗ, ಬ್ಯಾಂಕ್ ಆಫ್ ಬರೋಡಾ, ರಾಷ್ಟದ ಪ್ರತಿ ತನ್ನ ಬದ್ಧತೆಯನ್ನು ಪುನರುಚ್ಚರಿಸಿ, ದೇಶದ ಆರ್ಥಿಕ, ಸಾಮಾಜಿಕ ಮತ್ತು ಡಿಜಿಟಲ್ ಇಂಡಿಯಾವನ್ನು ಬೆಂಬಲಿಸುವ ಒಂದು ದೃಢವಾದ ಪಾಲುದಾರನಾಗಿದೆ. ರಾಷ್ಟ್ರದ […]