‘ಬಲಿಪೆ’ ತುಳು ಚಿತ್ರದ ಪೋಸ್ಟರ್ ಬಿಡುಗಡೆ: ಮೇ 24ರಂದು ತೆರೆಗೆ

ಮಂಗಳೂರು: ಎಂಡೊಸಲ್ಫಾನ್‌ ದುರಂತ ಮತ್ತು ತುಳುನಾಡಿನ ದೈವ–ದೇವರ ಕಥೆಯನ್ನು ಒಳಗೊಂಡ, ಗಾಯತ್ರಿ ಫಿಲ್ಮ್ ಮೇಕರ್ಸ್ ನಿರ್ಮಿಸಿರುವ ‘ಬಲಿಪೆ’ ತುಳು ಚಿತ್ರ ಮೇ 24ರಂದು ತೆರೆ ಕಾಣಲಿದೆ ಎಂದು ಚಿತ್ರದಲ್ಲಿ ವಿಶೇಷ ಪಾತ್ರ ಮಾಡಿರುವ ದೈವನರ್ತಕ ದಯಾನಂದ ಕತ್ತಲ್‌ಸಾರ್ ತಿಳಿಸಿದರು. ಅವರು ನಗರದ ಪ್ರೆಸ್ ಕ್ಲಬ್ ನಲ್ಲಿ ಚಿತ್ರದ ಪೊಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ಬಲಿಪೆ ಎಂದರೆ ದೈವದ ವಾಹನ. ನೂರು ಹುಲಿಯ ಶಕ್ತಿ ಇರುವ ಹುಲಿ ಎಂದರ್ಥ. ಪೆರಾರ ಕ್ಷೇತ್ರ, ಕಾರಿಂಜ, ಬಜಪೆ ಮುಂತಾದ ಕಡೆಗಳಲ್ಲಿ ಚಿತ್ರೀಕರಣಗೊಂಡಿರುವ […]