ಕುಂದಾಪುರ: ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ-2ರ ಗ್ರಾಹಕರ ಸಮಾವೇಶ
ಕುಂದಾಪುರ: ದೇಶದ ಅಗ್ರಗಣ್ಯ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ-2ರ ಗ್ರಾಹಕರ ಸಮವೇಶವು ಅಂಕದಕಟ್ಟೆಯ ಸಹನಾ ಕನ್ವೆನ್ಶನ್ ಸೆಂಟರಿನಲ್ಲಿ ನಡೆಯಿತು. ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ಯಾಂಕ್ ನ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಬಂಧಕ ಶ್ರೀಜಿತ್ ಮಾತನಾಡಿ ತುಂಬ ಸಮಯದ ಬಳಿಕ ಗ್ರಾಹರಕ ಜೊತೆ ಸಂವಾದ ಮಾಡುವ ಯೋಗ ಬಂದಿದೆ. ಜಾಗತಿಕ ಸಾಂಕ್ರಮಿಕ ಸಂದರ್ಭದಲ್ಲಿ ತೊಂದರೆಯಾದರೂ ಬ್ಯಾಂಕ್ ತನ್ನ ಗ್ರಾಹಕರನ್ನು ಆಧರಿಸಿದೆ. ಡಿಸೆಂಬರ್ ಅಂತ್ಯಕ್ಕೆ ಬ್ಯಾಂಕ್ 20 […]
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ಪದ್ಧತಿ ಇಲ್ಲ: ಬಿ.ಎಂ. ಸುಕುಮಾರ್ ಶೆಟ್ಟಿ
ಕುಂದಾಪುರ: ಇಲ್ಲಿನ ಬಹುಪ್ರಸಿದ್ದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಲಾಂ ಮಂಗಳಾರತಿ ಪದ್ಧತಿ ಇಲ್ಲ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿ ಯಾವುದೇ ರೀತಿಯ ಸಲಾಂ ಮಂಗಳಾರತಿ ಪದ್ಧತಿ ನಡೆಯುವುದಿಲ್ಲ, ನಾನು 40 ವರ್ಷದಿಂದ ಕೊಲ್ಲೂರು ದೇವಸ್ಥಾನದ ಭಕ್ತನಾಗಿದ್ದೇನೆ, ಹಾಗಾಗಿ ನನಗೆ ಈ ಬಗ್ಗೆ ತಿಳುವಳಿಕೆ ಇದೆ. ಮೂಕಾಂಬಿಕಾ ದೇವಸ್ಥಾನಕ್ಕೆ ಹತ್ತು ವರ್ಷಗಳ ಕಾಲ ಆಡಳಿತ ಮೊಕ್ತೇಸರನಾಗಿದ್ದೆ ಕೊಲ್ಲೂರಿನಲ್ಲಿ ಯಾವುದೇ ರೀತಿಯ ಸಲಾಂ ಮಂಗಳಾರತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೊಲ್ಲೂರು ದೇವಸ್ಥಾನದಲ್ಲಿ ಸಲಾಂ […]
ಕಳಪೆ ಕಾಮಗಾರಿಯಿಂದ ಗಂಗೊಳ್ಳಿ ಬಂದರು ಜೆಟ್ಟಿ ಕುಸಿತ: ನೀರಿನಲ್ಲಿ ಹೋಮವಾಯ್ತು 12 ಕೋಟಿ ರೂಪಾಯಿ ಅನುದಾನ
ಕುಂದಾಪುರ: ಕಳಪೆ ಕಾಮಗಾರಿಯಿಂದ ಇಲ್ಲಿನ ಗಂಗೊಳ್ಳಿ ಬಂದರಿನಲ್ಲಿ 12 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಿಸಿದ್ದ ಜೆಟ್ಟಿ ಕುಸಿದಿದ್ದು, ನಿರ್ಮಾಣ ಕಾಮಗಾರಿಯು ನೀರಿನಲ್ಲಿಟ್ಟ ಹೋಮದಂತಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರಂಭದಿಂದಲೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಒಂದಿಲ್ಲೊಂದು ಸಮಸ್ಯೆಗೆ ತುತ್ತಾಗುತ್ತಿದ್ದ ಗಂಗೊಳ್ಳಿ ಬಂದರು ಪ್ರದೇಶ ಇದೀಗ ಮತ್ತೆ ಸುದ್ದಿಯಲ್ಲಿದೆ. ಗಂಗೊಳ್ಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ನಡೆಯುತ್ತಿರುವ ಜೆಟ್ಟಿ ನಿರ್ಮಾಣ ಕಾರ್ಯದ ವೇಳೆ ಜೆಟ್ಟಿ ಭಾಗ ಕುಸಿತಕ್ಕೊಳಗಾಗಿದೆ. 150 ಮೀಟರಿಗೂ ಅಧಿಕ ಜೆಟ್ಟಿ ಕುಸಿದಿದ್ದು, ಸ್ಥಳೀಯ ಮೀನುಗಾರರು ಆತಂಕಕ್ಕೀಡಾಗಿದ್ದಾರೆ. ಜೆಟ್ಟಿ ಭಾಗವು ನಿರಂತರವಾಗಿ ಕುಸಿಯುತ್ತಿದ್ದರೂ […]
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣಕಯಂತ್ರ ಪ್ರಯೋಗಾಲಯ ಉದ್ಘಾಟನೆ
ಕುಂದಾಪುರ: ಜೂನ್12 ರಂದು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣಕಯಂತ್ರ ಪ್ರಯೋಗಾಲಯದ ಉದ್ಘಾಟನಾ ಸಮಾರಂಭವು ಜರುಗಿತು. ಕರ್ನಾಟಕ ಬ್ಯಾಂಕ್ ನ ಸಿ.ಇ.ಒ. ಮಹಾಬಲೇಶ್ವರ್ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದಬಾರದು ಆದರೆ ಇಷ್ಟಪಟ್ಟು ಓದಬೇಕು. ಜೊತೆಗೆ ಕೆಲಸ ಕಾರ್ಯದಲ್ಲಿ ಚಾತುರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಭಾಗವಹಿಸಿದ್ದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಹಾಗೂ ಬೈಂದೂರು ಕ್ಷೇತ್ರದ ಶಾಸಕ ಬಿ.ಎಮ್. ಸುಕುಮಾರ್ ಶೆಟ್ಟಿ […]