ಕುಂದಾಪುರ: ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ-2ರ ಗ್ರಾಹಕರ ಸಮಾವೇಶ

ಕುಂದಾಪುರ: ದೇಶದ ಅಗ್ರಗಣ್ಯ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ-2ರ ಗ್ರಾಹಕರ ಸಮವೇಶವು ಅಂಕದಕಟ್ಟೆಯ ಸಹನಾ ಕನ್ವೆನ್ಶನ್ ಸೆಂಟರಿನಲ್ಲಿ ನಡೆಯಿತು.

ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬ್ಯಾಂಕ್ ನ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಬಂಧಕ ಶ್ರೀಜಿತ್ ಮಾತನಾಡಿ ತುಂಬ ಸಮಯದ ಬಳಿಕ ಗ್ರಾಹರಕ ಜೊತೆ ಸಂವಾದ ಮಾಡುವ ಯೋಗ ಬಂದಿದೆ. ಜಾಗತಿಕ ಸಾಂಕ್ರಮಿಕ ಸಂದರ್ಭದಲ್ಲಿ ತೊಂದರೆಯಾದರೂ ಬ್ಯಾಂಕ್ ತನ್ನ ಗ್ರಾಹಕರನ್ನು ಆಧರಿಸಿದೆ. ಡಿಸೆಂಬರ್ ಅಂತ್ಯಕ್ಕೆ ಬ್ಯಾಂಕ್ 20 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, ಪರದೇಶದಲ್ಲಿಯೂ 3 ಶಾಖೆಗಳನ್ನು ತೆರೆದಿದೆ. ಗ್ರಾಹಕರ ಸಹಕಾರದಿಂದ ಈ ಸಾಧನೆ ಮಾಡಲಾಗಿದ್ದು, ಅವರ ಸಲಹೆಗಳು ಸಾಧನೆಗೆ ಸ್ಪೂರ್ತಿ ಎಂದರು.

ಬ್ಯಾಂಕ್ ನ ಉಡುಪಿ ಕಚೇರಿಯ ಮಹಾ ಪ್ರಬಂಧಕ ರಾಮ್ ನಾಯ್ಕ್ ಮಾತನಾಡಿ, ಗ್ರಾಹಕರೊಡನೆ ಸಂವಾದ ನಡೆಸಲು ಕಾರ್ಯಕ್ರಮವನ್ನು ಅಯೋಜಿಸಲಾಗಿದೆ. ಬ್ಯಾಂಕ್ ಸಿಬ್ಬಂದಿಗಳು ಇಲ್ಲಿನ ಪ್ರಾದೇಶಿಕ ಭಾಶೆಗಳಲ್ಲಿ ವ್ಯವಹರಿಸಲು ತರಬೇತಿ ನೀಡಲಾಗುತ್ತಿದೆ. ಡಿಗಿಟಲ್ ಬ್ಯಾಂಕಿಂಗ್ ಗೆ ಒತ್ತು ನೀಡಲಾಗುತ್ತಿದ್ದು, ಬ್ಯಾಂಕ್ ಗ್ಯಾರಂಟಿ ಹೊಸ ಆಪ್ ನಿಂದ ವೇಗವಾಗಿ ಬ್ಯಾಂಕ್ ಗ್ಯಾರಂಟಿ ನೀಡಬಹುದು ಎಂದರು.

ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಅಧಿಕಾರಿ ಎಮಿ, ಕುಂದಾಪುರ ಶಾಖಾ ಅಧಿಕಾರಿ ರತ್ನಾಕರ ಗಾಣಿಗ, ಹಿರಿಯ ಗ್ರಾಹಕಿ ಕಲಾವತಿ ಚಾತ್ರ ಮುಂತಾದವರು ಉಪಸ್ಥಿತರಿದ್ದರು.

ಪೂನಂ ಪ್ರಭು ಸ್ವಾಗತಿಸಿದರು. ರೀನಾ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.