ಸಕಾರಾತ್ಮಕ ಭಾವನೆಗಳಿಂದ ಸಕಾರಾತ್ಮಕ ಕುಟುಂಬ ಹಾಗೂ ಸಮಾಜ ರೂಪಿಸಿ: ಬಿ.ಕೆ. ಶಿವಾನಿ
ಮಣಿಪಾಲ: ನಮ್ಮೊಳಗಿನ ಭಾವನೆಗಳನ್ನು ನಮ್ಮ ಮನಸ್ಸನ್ನು ನಾವೇ ನಿಯಂತ್ರಿಸಬೇಕು. ಮನಸ್ಸಿನ ಕೀಲಿ ಕೈ ಇನ್ನೊಬ್ಬರಿಗೆ ಕೊಡಬಾರದು. ಪ್ರತಿ ವಿಷಯದಲ್ಲೂ ವೈಯಕ್ತಿಕವಾಗಿ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳುವ ಮೂಲಕ ಕುಟುಂಬದಲ್ಲೂ ಸಕಾರಾತ್ಮಕತೆ ರೂಪಿಸುತ್ತ ಹೋಗಬೇಕು. ಈ ಪ್ರಕ್ರಿಯೆ ಮುಂದುವರಿದಂತೆ ಸಮಾಜದಲ್ಲೂ ಸಕಾರಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ ಎಂದು ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವಾಗ್ಮಿ ಬಿ.ಕೆ. ಶಿವಾನಿ ಅವರು ಹೇಳಿದರು. ಅವರು ಮಣಿಪಾಲ ಶಾಖೆಯ ವತಿಯಿಂದ ರವಿವಾರ ಮಣಿಪಾಲದ ಎಂಜೆಸಿ ಮೈದಾನದಲ್ಲಿ ಹಮ್ಮಿಕೊಂಡಿದ್ದ “ಅಪರಿಮಿತ ಸಂತೋಷಕ್ಕಾಗಿ ಪರಮಾತ್ಮನೊಂದಿಗೆ ಮನಸ್ಸನ್ನು ಜೋಡಿಸಿ” […]
ಫೆ. 11 ರಂದು ಬ್ರಹ್ಮಕುಮಾರಿ ರಾಜಯೋಗಿನಿ ಬಿ.ಕೆ.ಶಿವಾನಿ ಅವರಿಂದ ಪ್ರವಚನ
ಮಣಿಪಾಲ: ಫೆ. 11 ರಂದು ಸಂಜೆ 6 ರಿಂದ 8 ಗಂಟೆವರೆಗೆ ಎಂಜೆಸಿ ಗ್ರೌಂಡ್ ನಲ್ಲಿ ಬ್ರಹ್ಮಕುಮಾರಿ ರಾಜಯೋಗಿನಿ ಬಿಕೆ.ಶಿವಾನಿ ಅವರಿಂದ ಪ್ರೇರಣಾದಾಯಿ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ. ಪ್ರವೇಶ ಪಾಸ್ ಕಡ್ಡಾಯವಾಗಿದ್ದು ಪಾಸ್ ಗಾಗಿ ಪೆರಂಪಳ್ಳಿ ಓಂಶಾಂತಿ ರಸ್ತೆ, ಗ್ರೀನ್ ಫಾರ್ಚೂನ್ ಅಪಾರ್ಟ್ಮೆಂಟ್ ನಲ್ಲಿರುವ ಬ್ರಹ್ಮ ಕುಮಾರಿ ಕಚೇರಿಯನ್ನು ಸಂಪರ್ಕಿಸಬಹುದು. ಕರೆ: 9496501161/9986211034