ಕೊಡವೂರು: ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರ
ಕೊಡವೂರು: ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಗೆಳೆಯರ ಬಳಗ ಲಕ್ಷ್ಮೀ ನಗರ, ಡಿಜಿಟಲ್ ಸೇವಾ ಕೇಂದ್ರ ಕೊಡವೂರು ಇವರ ಸಹಯೋಗದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರವು ನ.13 ರಂದು ಲಕ್ಷ್ಮೀ ನಗರ ಪೇಟೆಯಲ್ಲಿ ನಡೆಯಿತು. ಶಿಬಿರವನ್ನು ಹಿರಿಯರಾದ ಶೇಕರ್ ಲಕ್ಷ್ಮೀನಗರ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಗರ ಸಭಾ ಸದಸ್ಯವಿಜಯ್ ಕೊಡವೂರು, ಈಗಾಗಲೇ ಕೊಡವೂರು ವಾರ್ಡಿನಲ್ಲಿ ಇಂತಹ ಶಿಬಿರವನ್ನು ಸಂಘ ಸಂಸ್ಥೆಗಳ ಸಹಯೋಗದಿಂದ ಮಾಡುತ್ತಾ ಇದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ […]
ಆಭಾ ಕಾರ್ಡ್ ವಿತರಣೆ ಮತ್ತು ಜೋಡಣೆ: ರಾಜ್ಯಮಟ್ಟದಲ್ಲಿ ಮೂರು ಪ್ರಶಸ್ತಿ ಉಡುಪಿ ಪಾಲು
ಉಡುಪಿ: ಜಿಲ್ಲೆಯಲ್ಲಿ ಅತೀ ಹೆಚ್ಚು ಆಭಾ ಕಾರ್ಡ್ ವಿತರಣೆ, ರಾಜ್ಯದಲ್ಲಿ ಅತೀ ಹೆಚ್ಚು ಆರೋಗ್ಯ ದಾಖಲೆಗಳನ್ನು ಆಭಾ ಕಾರ್ಡಿಗೆ ಜೋಡಣೆ ಮಾಡಿಸಿರುವುದು ಮತ್ತು ಜಿಲ್ಲೆಯ ಕಾರ್ಕಳ ತಾಲೂಕು ಆಸ್ಪತ್ರೆಯು ಆಭಾ ಕಾರ್ಡಿಗೆ ಅತೀ ಹೆಚ್ಚು ಆರೋಗ್ಯ ಕಾರ್ಡ್ಗಳನ್ನು ಜೋಡಿಸಿದ ತಾಲೂಕು ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದರಿಂದ ರಾಜ್ಯಮಟ್ಟದಲ್ಲಿ ಮೂರು ಪ್ರಥಮ ಪ್ರಶಸ್ತಿಗಳು ಜಿಲ್ಲೆಗೆ ಅಭಿಸಿದ್ದು, ಇತ್ತೀಚೆಗೆ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ […]
ಹಿರಿಯಡಕ ಗ್ರಾಮ ವನ್ ಕೇಂದ್ರದಲ್ಲಿ ಆಭಾ ನೋಂದಣಿ
ಹಿರಿಯಡಕ: ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯಡಕ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ವನ್ ಕೇಂದ್ರದಲ್ಲಿ ಆಭಾ (ಎ.ಬಿ.ಹೆಚ್.ಎ) ನೋಂದಣಿಯನ್ನು ಸೆ.19 ರಂದು ನಡೆಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಡಿಸೆಂಬರ್ ಅಂತ್ಯದೊಳಗೆ 1.5 ಲಕ್ಷ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ನಿರ್ಮಾಣ: ಕೇಂದ್ರ ಸರ್ಕಾರ
ನವದೆಹಲಿ: 1.50 ಲಕ್ಷ ಆಯುಷ್ಮಾನ್ ಭಾರತ್ – ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು (ಎಬಿ-ಎಚ್‌ಡಬ್ಲ್ಯೂಸಿ) ಸ್ಥಾಪಿಸುವ ಗುರಿ ಈ ವರ್ಷದ ಡಿಸೆಂಬರ್ ವೇಳೆಗೆ ಕಾರ್ಯರೂಪಕ್ಕೆ ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಶುಕ್ರವಾರ ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯ ಮಂಡಿಸಿದ ಆರೋಗ್ಯ ಹಕ್ಕು ಮಸೂದೆ 2021 ರ ಶಾಸನದ ಮೇಲಿನ ಚರ್ಚೆಯಲ್ಲಿ ಉತ್ತರಿಸಿದ ಡಾ ಮಾಂಡವೀಯ, ದೇಶದಲ್ಲಿ ಒಟ್ಟು 1.50 ಲಕ್ಷ ಕೇಂದ್ರಗಳನ್ನು ಸ್ಥಾಪಿಸುವ ಗುರಿಯಿದ್ದು, ಈಗಾಗಲೇ ಒಂದು ಲಕ್ಷ 22 ಸಾವಿರ ಕೇಂದ್ರಗಳು […]
ಆಯುಷ್ಮಾನ್ ಭಾರತ್- ಡಿಜಿಟಲ್ ಹೆಲ್ತ್ ಐಡಿ ಕಡ್ಡಾಯ
ಉಡುಪಿ : ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್-ಡಿಜಿಟಲ್ ಹೆಲ್ತ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸೌಲಭ್ಯವನ್ನು ಪಡೆಯಲು ಆಯುಷ್ಮಾನ್ ಭಾರತ್-ಹೆಲ್ತ್ ಐಡಿ (ಎ.ಬಿ.ಹೆಚ್.ಎ. ಐಡಿ) ಹೊಂದಿರುವುದು ಕಡ್ಡಾಯವಾಗಿರುತ್ತದೆ. ಇದರಲ್ಲಿ ರೋಗಿಯ ಅನುಮತಿ ಮೇರೆಗೆ ವೈದ್ಯಕೀಯ ಚಿಕಿತ್ಸೆಗಳ ವಿವರಗಳನ್ನು ನಮೂದಿಸಲಾಗುವುದು ಹಾಗೂ ಚಿಕಿತ್ಸೆ ಪಡೆದ ವಿವರವನ್ನು ಆನ್‌ಲೈನ್ ಮೂಲಕ ಸಕಾಲಕ್ಕೆ ವೀಕ್ಷಿಸಬಹುದಾಗಿದೆ. ಸಾರ್ವಜನಿಕರು https://healthid.ndhm.gov.in/register ಲಿಂಕ್ ಅನ್ನು ಕ್ಲಿಕ್ ಮಾಡಿ ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಆಧಾರ್ ಆಧಾರಿತ ಓ.ಟಿ.ಪಿ ವೆರಿಫಿಕೇಷನ್ ಮೂಲಕ ಎ.ಬಿ.ಹೆಚ್.ಎ. ಐಡಿ ಪಡೆಯಬಹುದಾಗಿದೆ ಎಂದು ಜಿಲ್ಲಾ […]