ಹೊಸ ಭಯೋತ್ಪಾದಕ ಗುಂಪುಗಳು ರಚನೆಯಾಗದಂತಹ ಕಾರ್ಯವಿಧಾನ ಅನುಸರಿಸಿ: ಏಜೆನ್ಸಿಗಳಿಗೆ ಅಮಿತ್ ಶಾ ಕರೆ
ನವದೆಹಲಿ: ಹೊಸ ಭಯೋತ್ಪಾದಕ ಗುಂಪುಗಳು ರಚನೆಯಾಗದಂತೆ ಎಲ್ಲಾ ಭಯೋತ್ಪಾದನಾ ವಿರೋಧಿ ಏಜೆನ್ಸಿಗಳು ಕಠಿಣ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ನೀಡಿದರು. ಗುರುವಾರ ನವದೆಹಲಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಯೋಜಿಸಿದ್ದ ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ದೃಢವಾಗಿ ನಿಗ್ರಹಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳು ಯಶಸ್ವಿಯಾಗಿದೆ. ಎನ್‌ಐಎ ವ್ಯಾಪ್ತಿಯಲ್ಲಿ ಮಾದರಿ ಭಯೋತ್ಪಾದನೆ ನಿಗ್ರಹ ರಚನೆಯನ್ನು […]
ಕೋಝಿಕ್ಕೋಡ್ ರೈಲಿನಲ್ಲಿ ಬೆಂಕಿ ಪ್ರಕರಣ: ಶಂಕಿತ ಆರೋಪಿಯ ಬಂಧನ
ಕೋಝಿಕ್ಕೋಡ್ : ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಶಂಕಿತ ಶಾರುಖ್ ಸೈಫಿ ಎಂಬಾತನನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಸಹಯೋಗದಿಂದ ಕೇರಳ ಪೊಲೀಸರ ವಿಶೇಷ ತಂಡ ಮಹಾರಾಷ್ಟ್ರ ತಲುಪಿ ಮಂಗಳವಾರ ರಾತ್ರಿ ರತ್ನಗಿರಿಯಿಂದ ಬಂಧಿಸಿದೆ. ರೈಲಿಗೆ ಬೆಂಕಿ ಹಚ್ಚಿದ್ದ ಆರೋಪಿಗೂ ಸುಟ್ಟ ಗಾಯಗಳಾಗಿದ್ದು, ರತ್ನಗಿರಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆಸ್ಪತ್ರೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಮಧ್ಯೆ ಕೇರಳದ ಎಟಿಎಸ್ […]