26 ಪಕ್ಷಗಳ ಮೈತ್ರಿಕೂಟದ ಹೆಸರು INDIA ಎಂದು ಘೋಷಣೆ: ಈ ಬಾರಿಯ ಲೋಕಸಭೆ ಚುನಾವಣೆ NDA v/s INDIA ನಡುವೆ

ಬೆಂಗಳೂರು: ಮಂಗಳವಾರ ರಾಜ್ಯ ರಾಜಧಾನಿಯಲ್ಲಿ ನಡೆದ ಪ್ರತಿಪಕ್ಷಗಳ ನಾಲ್ಕು ಗಂಟೆಗಳ ಸುದೀರ್ಘ ಸಭೆಯ ಕೊನೆಯಲ್ಲಿ, 26 ಪಕ್ಷಗಳು ತಮ್ಮ ಮೈತ್ರಿಕೂಟದ ಹೆಸರನ್ನು INDIA ಎಂದು ಘೋಷಿಸಿಕೊಂಡವು. INDIA- Indian National Developmental, Inclusive Alliance (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ, ಅಂತರ್ಗತ ಮೈತ್ರಿ). ಪ್ರತಿಪಕ್ಷಗಳು 2024 ರ ಚುನಾವಣಾ ಸ್ಪರ್ಧೆಯನ್ನು ಬಿಜೆಪಿ ಮತ್ತು ದೇಶದ ಉಳಿದ ಭಾಗಗಳ ನಡುವಿನ ಹೋರಾಟ ಎಂದು ರೂಪಿಸಿದ್ದು, ಮಂಗಳವಾರ ಬೆಳಗ್ಗೆ ಮುಖಂಡರು ಸಭೆಗೆ ಕುಳಿತುಕೊಳ್ಳುವ ಮುನ್ನವೇ ಹೆಸರನ್ನು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ. […]

ಮುಖ್ಯ ಚುನಾವಣಾ ಕಚೇರಿಯಿಂದ ಅರ್ಹ ಮತದಾರರ ಅಂತಿಮ ಪಟ್ಟಿಯ ಪಿಡಿಎಫ್ ಮಾದರಿ ಬಿಡುಗಡೆ: ನಿಮ್ಮ ಹೆಸರು ಪರೀಕ್ಷಿಸಿಕೊಳ್ಳಿ

ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯು ಅರ್ಹ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಇದರಲ್ಲಿ ಮತದಾರರು ತಮ್ಮ ಹೆಸರು ನೋಂದಾವಣೆಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. https://ceo.karnataka.gov.in ವೆಬ್ ಸೈಟ್ ನಲ್ಲಿ ಪಿಡಿಎಫ್ ಮಾದರಿಯಲ್ಲಿ ಮತದಾರರು ತಮ್ಮ ಹೆಸರು ಮುಂತಾದ ವಿವರಗಳು ಪರಿಶೀಲಿಸಬಹುದು. ಮೃತಪಟ್ಟ, ವಿಳಾಸ ಬದಲಿಸಿರುವ ಹಾಗೂ ಕೈಬಿಟ್ಟಿರುವ ಮತದಾರರ ಮಾಹಿತಿಯನ್ನು ಕಾರಣ ಸಮೇತ ಪ್ರಕಟಿಸಲಾಗಿದೆ ಎಂದು ಮುಖ್ಯ ಚುನಾವಣಾ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ. ನಿಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಲು ಲಿಂಕ್ ಗೆ ಭೇಟಿ ನೀಡಿ https://ceo.karnataka.gov.in/FinalRoll_2023/ https://erms.karnataka.gov.in/2022_ADMS_AFTER_DRAFT/

ಅಟಲ್ ಉತ್ಸವ: ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನುಡಿಯಾದ ಐತಿಹಾಸಿಕ ‘ಬೂತ್ ಸಂಗಮ’ ಕಾರ್ಯಕ್ರಮ

ಉಡುಪಿ: ಬಿಜೆಪಿಯ ವಿಧಾನಸಭಾ ಚುನಾವಣೆಯ ಮುನ್ನುಡಿಯಾಗಿ ನಗರದ ಎಂಜಿಎಂ ಕಾಲೇಜು ಮೈದಾನದಲ್ಲಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 98 ನೇ ಜನ್ಮದಿನದ ಅಂಗವಾಗಿ ಅಟಲ್ ಉತ್ಸವ ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಐತಿಹಾಸಿಕ ‘ಬೂತ್ ಸಂಗಮ’ ಕಾರ್ಯಕ್ರಮ ಭಾನುವಾರ ನಡೆಯಿತು. ಉಡುಪಿ ವಿಧಾನಸಭಾ ಕ್ಷೇತ್ರದ ‘ಬೂತ್ ಸಂಗಮ’ದಲ್ಲಿ ನಗರ ಮತ್ತು ಗ್ರಾಮಾಂತರ ಭಾಗದ 226 ಮತಗಟ್ಟೆಗಳಿಂದಲೂ ಕಾರ್ಯಕರ್ತರು ಭಾಗವಹಿಸಿ ಇತಿಹಾಸ ನಿರ್ಮಿಸಿದರು.   ಮುಂಬರುವ ವಿಧಾನಸಭೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಮಂಥನ ನಡೆಸಲಾಯಿತು. […]

ಹಿಮಾಚಲ ಪ್ರದೇಶ ಮತ್ತು ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ: ರಮೇಶ್ ಕಾಂಚನ್

ಉಡುಪಿ: ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರವನ್ನು ಉಳಿಸಿಕೊಂಡಿರುವುದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ಇದೇ ಹೊತ್ತಿನಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬಂದಿದೆ. ದೇಶದ ರಾಜಧಾನಿಯಾಗಿರುವ ದೆಹಲಿಯ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಒಂದು ರಾಜ್ಯದಲ್ಲಿ ಗೆದ್ದಿರುವುದನ್ನೇ ಸಂಭ್ರಮಿಸಿ ಎರಡು ಕಡೆ ಸೋತಿರುವುದನ್ನು ಮರೆಮಾಚಲಾಗುತ್ತಿದೆ. ಕಾಂಗ್ರೆಸ್‌ ಮುಕ್ತ ಭಾರತ ಎಂದು ಹೇಳುತ್ತಿದ್ದ ಬಿಜೆಪಿಗೆ ಇತ್ತೀಚೆಗೆ ನಡೆದ ಹಲವು ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲ್ಲುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಅಸಾಧ್ಯ […]

ಗುಜರಾತ್ ಚುನಾವಣಾ ಫಲಿತಾಂಶ ರಾಜ್ಯ ಚುನಾವಣೆಯ ದಿಕ್ಸೂಚಿ: ನಯನಾ ಗಣೇಶ್, ವೀಣಾ ಶೆಟ್ಟಿ

ಉಡುಪಿ: ಗುಜರಾತ್ ಬಿಜೆಪಿ ಜಯಭೇರಿ ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಹೇಳಿದ್ದಾರೆ. ಗುಜರಾತ್ ನಲ್ಲಿ 7ನೇ ಬಾರಿ ಅತೀ ಹೆಚ್ಚು ಸ್ಥಾನ ಗಳಿಸುವ ಮೂಲಕ ದಾಖಲೆ ನಿರ್ಮಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಯಶಸ್ವಿ ಆಡಳಿತ, ಅಭಿವೃದ್ಧಿ ಪರ ಚಿಂತನೆಗೆ ಮತದಾರರ ಒಲವು ವ್ಯಕ್ತವಾಗಿದೆ. ಗುಜರಾತ್ ರಾಷ್ಟ್ರಕ್ಕೆ ಒಂದು ಮಾದರಿ ರಾಜ್ಯವಾಗಿ ರೂಪುಗೊಂಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವದಿಂದ ಗೆಲುವು ಸಾಧಿಸಿದ್ದು ಈ ಫಲಿತಾಂಶ ಮುಂದಿನ ರಾಜ್ಯ […]