ಏಷ್ಯನ್ ಎಲೈಟ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಲೊವ್ಲಿನಾ, ಪರ್ವೀನ್, ಸವೀಟಿ ಮತ್ತು ಅಲ್ಫಿಯಾ ಪಠಾಣ್
ಜೋರ್ಡಾನ್: ಶುಕ್ರವಾರ ಜೋರ್ಡಾನ್‌ನ ಅಮ್ಮನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್‌ಗಳಾದ ಲೊವ್ಲಿನಾ ಬೊರ್ಗೊಹೈನ್, ಪರ್ವೀನ್ ಹೂಡಾ, ಸವೀಟಿ ಮತ್ತು ಅಲ್ಫಿಯಾ ಪಠಾಣ್ ಚಿನ್ನದ ಪದಕಗಳನ್ನು ಪಡೆದು ಭಾರತೀಯರೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಭಾರತದ ಪರ್ವೀನ್ ಜಪಾನ್‌ನ ಕಿಟೊ ಮಾಯ್ ವಿರುದ್ಧ 5-0 ಅಂತರದಿಂದ ಜಯ ಸಾಧಿಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಸರ್ವಾನುಮತದ ನಿರ್ಧಾರದ ಮೂಲಕ ನಾಲ್ಕನೇ ಶ್ರೇಯಾಂಕದ ಮಾಯ್ ಅನ್ನು ಸೋಲಿಸಲು ಪ್ರಬಲ ಪ್ರದರ್ಶನವನ್ನು ನೀಡಿದರು. ಲೊವ್ಲಿನಾ ಅವರು ಉಜ್ಬೇಕಿಸ್ತಾನದ ರುಜ್ಮೆಟೋವಾ ಸೊಖಿಬಾ […]