ಆರ್ಚರಿ ವಿಶ್ವಕಪ್ ಸ್ಟೇಜ್-3 ರ ಸಂಯುಕ್ತ ಮಿಶ್ರ ತಂಡ ಸ್ಪರ್ಧೆ: ಮೊಟ್ಟ ಮೊದಲ ಚಿನ್ನ ಗೆದ್ದ ಜ್ಯೋತಿ ಸುರೇಖಾ ವೆನ್ನುಮ್ ಮತ್ತು ಅಭಿಷೇಕ್ ವರ್ಮಾ
ನವದೆಹಲಿ: ನಿನ್ನೆ ಪ್ಯಾರಿಸ್ನಲ್ಲಿ ನಡೆದ ವಿಶ್ವಕಪ್ ಸ್ಟೇಜ್-3 ರಲ್ಲಿ ಬಿಲ್ಲುಗಾರರಾದ ಜ್ಯೋತಿ ಸುರೇಖಾ ವೆನ್ನುಮ್ ಮತ್ತು ಅಭಿಷೇಕ್ ವರ್ಮಾ ಅವರು ಸಂಯುಕ್ತ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶೂಟ್-ಆಫ್ನಲ್ಲಿ ಗ್ರೇಟ್ ಬ್ರಿಟನ್ನ ಎಲ್ಲಾ ಗಿಬ್ಸನ್ ಎದುರು ಫೈನಲ್ನಲ್ಲಿ ಸೋತ ಜ್ಯೋತಿ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಸಂಯುಕ್ತ ಮಿಶ್ರ ತಂಡದ ಫೈನಲ್ನಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನುಮ್ ಮತ್ತು ಅಭಿಷೇಕ್ ವರ್ಮಾ ಜೋಡಿ 152-149 ಅಂಕಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿತು. ಮಿಶ್ರ ಸಂಯುಕ್ತ […]