ಅವಿಭಜಿತ ದ.ಕನ್ನಡದಲ್ಲಿ ಭ್ರಷ್ಟಾಚಾರದ ದೂರುಗಳಿದ್ದಲ್ಲಿ ಲೋಕಾಯುಕ್ತ ಠಾಣೆಗೆ ದೂರು ನೀಡಿ: ಲೋಕಾಯುಕ್ತ ಎಸ್.ಪಿ ಲಕ್ಷ್ಮೀ ಗಣೇಶ್
ಮಂಗಳೂರು: ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಜನತೆಗೆ ಭ್ರಷ್ಟಾಚಾರದ ವಿರುದ್ದ ಯಾವುದೇ ರೀತಿಯ ದೂರು ಅಥವಾ ಅಕ್ರಮ ಆಸ್ತಿಗಳ ಬಗ್ಗೆ ದೂರು ದಾಖಲಿಸಲಿದ್ದಲ್ಲಿ, ಮಂಗಳೂರಿನ ಊರ್ವಾ ಸ್ಟೋರಿನಲ್ಲಿರುವ ಲೋಕಾಯುಕ್ತ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಂಗಳೂರು-ಉಡುಪಿ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಗಣೇಶ್ ಹೇಳಿದ್ದಾರೆ. ಸೋಮವಾರದಂದು ಊರ್ವಾಸ್ಟೋರ್ ನ ಲೋಕಾಯುಕ್ತ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಲೋಕಾಯುಕ್ತದ ವಾಪ್ತಿಯು ಅವಿಭಜಿತ ದ.ಕ ಜಿಲ್ಲೆಯ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳೆರಡಲ್ಲೂ ಇದ್ದು, ಈ ಹಿಂದೆ ಕರ್ನಾಟಕ […]