ಭಾರೀ ಮಳೆಗೆ ಶೃಂಗೇರಿ-ಆಗುಂಬೆ ಮಾರ್ಗದಲ್ಲಿ ಭೂಕುಸಿತ: ರಸ್ತೆ ಸಂಪರ್ಕ ಕಡಿತ, ಪರ್ಯಾಯ ಮಾರ್ಗ ಸಂಚಾರ

ಕಾರ್ಕಳ : ಚಿಕ್ಕಮಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಶೃಂಗೇರಿ ಬಳಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಆಗುಂಬೆ- ಶೃಂಗೇರಿ ನಡುವೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಪ್ರಯಾಣಿಕರಿಗಾಗಿ ಬದಲಿ ಮಾರ್ಗದ ವಿವರ: ಶೃಂಗೇರಿ – ಕೆಲ್ಲಾರ್ – ಮೀಗಾ ಮಾರ್ಗವಾಗಿ ಬೇಗಾರ್ ಮೂಲಕ ಆಗುಂಬೆ ತಲುಪಬಹುದಾಗಿದೆ ಅಥವಾ ಶೃಂಗೇರಿ – ಕಾವಡಿ – ಬಿಲಗದ್ದೆ – ಶಾನುವಳ್ಳಿ – ಮಾವಿನಕಟ್ಟೆ – ಬೇಗಾರ್ ಮಾರ್ಗವಾಗಿ ಆಗುಂಬೆ ತಲುಪಬಹುದಾಗಿದೆ.

ರಾಜ್ಯದ ಮಳೆ ಪಟ್ಟಿಯಲ್ಲಿ ಉಡುಪಿಗೆ ಅಗ್ರಸ್ಥಾನ: ಆಗುಂಬೆಯ ಸ್ಥಾನವನ್ನು ಕಿತ್ತುಕೊಂಡ ಕರಾವಳಿ ಜಿಲ್ಲೆಯ ಭಾರೀ ಮಳೆಗೆ ಅರಣ್ಯ ನಾಶ ಕಾರಣ!

ಉಡುಪಿ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಎಡೆಬಿಡದೆ ಸುರಿಯುವ ಭಾರೀ ಮಳೆಗೆ ಹೆಸರುವಾಸಿಯಾಗಿದ್ದು, ದಕ್ಷಿಣ ಭಾರತದ ಚಿರಾಪುಂಜಿ ಎನ್ನುವ ಬಿರುದನ್ನು ಗಳಿಸಿರುವ ವಿಷಯ ಎಲ್ಲರಿಗೂ ತಿಳಿದಿರುವಂತಹದ್ದೆ. ಆದರೆ, ಇದೀಗ ಆಗುಂಬೆಯ ಕೈಯಿಂದ ಈ ಬಿರುದನ್ನು ಉಡುಪಿ ಜಿಲ್ಲೆಯು ಕಸಿದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಕೆಎಸ್‌ಡಿಎಂಎ) ಅಂಕಿಅಂಶಗಳ ಪ್ರಕಾರ, 2015 ಮತ್ತು 2021 ರ ನಡುವೆ ಕಳೆದ ಏಳು ವರ್ಷಗಳಲ್ಲಿ ಇಡೀ ರಾಜ್ಯಕ್ಕೆ ಹೋಲಿಸಿದಲ್ಲಿ ಉಡುಪಿ ಜಿಲ್ಲೆಯ ವಿವಿಧ ಸ್ಥಳಗಳು […]

ಆಗುಂಬೆ ಘಾಟಿ ವಾಹನ ಸಂಚಾರ ನಿಷೇಧ: ಆದೇಶ ಹಿಂತೆಗೆತ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ರ ಆಗುಂಬೆ ಘಾಟಿಯ ಮೂಲಕ ವಾಹನ ಸಂಚಾರವನ್ನು ಮಾರ್ಚ್ 19 ರಿಂದ 30 ದಿನಗಳ ವರೆಗೆ ನಿಷೇಧಿಸಿ ಮಾರ್ಚ್  7 ರಂದು ಆದೇಶ ಹೊರಡಿಸಲಾಗಿದ್ದು, ಆದರೆ ಕಾರ್ಕಳ, ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ರಕ್ಷಣಾ ತಡೆಗೋಡೆಗಳ ಮರು ನಿರ್ಮಾಣ ಹಾಗೂ ದುರಸ್ಥಿ ಕಾರ್ಯ ಆರಂಭಿಸಲು ಅರಣ್ಯ ಇಲಾಖೆಯ ಮೇಲಾಧಿಕಾರಿಗಳಿಂದ ಸೂಕ್ತ ನಿರ್ದೇಶನದ ಅನುಮತಿ ಪಡೆಯುವುದಾಗಿ ತಿಳಿಸಿರುವುದರಿಂದ ಅನುಮತಿ ದೊರಕುವವರೆಗೂ ಸದ್ರಿ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿ ಹೊರಡಿಸಿದ್ದ […]