ಮಣಿಪಾಲ: ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು

ಮಣಿಪಾಲ: ಇಲ್ಲಿನ ಲಕ್ಷ್ಮೀಂದ್ರ ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಕಾರೊಂದು ಡಿವೈಡರ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿರುವ ಘಟನೆ ನಡೆದಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಗಾಯಾಳು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರಿನಲ್ಲಿದ್ದವರ ಮಾಹಿತಿ ಲಭ್ಯವಿಲ್ಲ. ಡಿಕ್ಕಿಯ ರಭಸಕ್ಕೆ ಬೊನೆಟ್ ಮತ್ತು ಬಂಪರ್ ಕಿತ್ತು ಹೋಗಿದೆ. ಮಣಿಪಾಲ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ: ಬೈಕ್- ಕಾರು ನಡುವೆ ಅಪಘಾತ; ಆಯುರ್ವೇದ ವಿದ್ಯಾರ್ಥಿ ಸಾವು

ಸುಳ್ಯ: ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಸುಳ್ಯದ ಪಾಲಡ್ಕ ಎಂಬಲ್ಲಿ ವರದಿಯಾಗಿದೆ. ಮೃತ ಬೈಕ್ ಸವಾರನನ್ನು ಸುಳ್ಯ ಕೆವಿಜೆ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಚಿಕ್ಕಬಳ್ಳಾಪುರ ನಿವಾಸಿ ಸ್ವರೂಪ್ (22) ಎಂದು ಗುರುತಿಸಲಾಗಿದೆ. ಸ್ವರೂಪ್ ತನ್ನ ಸ್ನೇಹಿತ ಸಂಭ್ರಮ್ ಜೊತೆ ದ್ವಿಚಕ್ರವಾಹದಲ್ಲಿ ತೆರಳುತ್ತಿದ್ದ ವೇಳೆ ವಾಹನವೊಂದನ್ನು ಓವರ್ ಟೇಕ್ ಮಾಡುವ ಸಂದರ್ಭ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ […]

ಕುಂಜಿಬೆಟ್ಟು: ವೋಲ್ವೋ ಬಸ್-ಕಾಂಕ್ರೀಟ್ ಮಿಕ್ಸರ್ ಲಾರಿ ಮಧ್ಯೆ ಅಪಘಾತ

ಕುಂಜಿಬೆಟ್ಟು: ಶನಿವಾರ ಬೆಳ್ಳಂಬೆಳಗ್ಗೆ ರಾಜ್ಯಹೆದ್ದಾರಿಯಲ್ಲಿ ವೋಲ್ವೋ ಬಸ್ ಮತ್ತು ಸಿಮೆಂಟ್ ಮಿಶ್ರಣ ಲಾರಿ ನಡುವೆ ಅಪಘಾತ ಸಂಭವಿಸಿದೆ. ಬಸ್ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ವೋಲ್ವೋ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಗಾಜು ಸಂಪೂರ್ಣ ನುಚ್ಚು ನೂರಾಗಿದೆ. ಬಸ್ ಬೆಂಗಳೂರಿನಿಂದ ಉಡುಪಿ ಮಾರ್ಗವಾಗಿ ಮಣಿಪಾಲಕ್ಕೆ ತೆರಳುತ್ತಿದ್ದಾಗ ಕುಂಜಿಬೆಟ್ಟು ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಹಲವಾರು ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ರೇಕ್ ವೈಫಲ್ಯದಿಂದಾಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ […]

ಕಾಪು: ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಆಟೋರಿಕ್ಷಾ ಮೇಲೆ ಉರುಳಿದ ಮರ; ಇಬ್ಬರು ಪ್ರಯಾಣಿಕರ ಸಾವು

ಕಾಪು: ನಿನ್ನೆ ಸಂಜೆ ವೇಳೆಗೆ ಸುರಿದ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ರಿಕ್ಷಾ ಮೇಲೆ ಬೃಹತ್ ಗಾತ್ರದ ಮರ ಬಿದ್ದು ರಿಕ್ಷಾದಲ್ಲಿದ್ದ ಪ್ರಯಾಣಿಕರಿಬ್ಬರು ಸಾವನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾಪು – ಶಿರ್ವ ರಸ್ತೆಯಲ್ಲಿ ನಡೆದಿದೆ. ಇಲ್ಲಿನ ಮಲ್ಲಾರು ಚಂದ್ರನಗರದ ಬಳಿ ಗುರುವಾರ ರಾತ್ರಿ ವೇಳೆ ಈ ಅವಘಡ ಸಂಭವಿಸಿದೆ. ಪಾದೂರು ಕೂರಾಲು ರೈಸ್ ಮಿಲ್ ಬಳಿಯ ನಿವಾಸಿ 45 ವರ್ಷದ ಪುಷ್ಪಾ ಕುಲಾಲ್ ಮತ್ತು ಕಳತ್ತೂರು ನಿವಾಸಿ 48ವರ್ಷದ ಕೃಷ್ಣ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ರಿಕ್ಷಾ ಚಾಲಕ […]

ಕಡಬ: ಆಲ್ಟೋ ಕಾರು- ಜೀಪ್ ಮುಖಾಮುಖಿ ಡಿಕ್ಕಿ: ನಾಲ್ವರ ಸಾವು; ಹಲವರಿಗೆ ಗಾಯ

ಕಡಬ: ಎರಡು ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ನೆಟ್ಟಣ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಎರಡು ವಾಹನಗಳಲ್ಲಿ ಒಟ್ಟು 20ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಹಾಸನದ ಬೇಲೂರು ತಾಲೂಕಿನ ಟಗರೆ ಮತ್ತು ಚಂದನಹಳ್ಳಿ ನಿವಾಸಿಗಳಾದ ಉಲ್ಲಾಸ್ (28), ಗಣೇಶ್ (26), ತನ್ವಿಕ್ (4) ಮತ್ತು ನೇತ್ರಾವತಿ (28) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಆಲ್ಟೋ ಕಾರು ಮತ್ತು ಜೀಪ್ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದವರು […]