ನಿವೃತ್ತ ಅಧ್ಯಾಪಕ, ಹಿರಿಯ ಮುಖಂಡ ಪಟ್ಲ ಅಣ್ಣಯ್ಯ ನಾಯಕ್ ಇನ್ನಿಲ್ಲ

ಮಣಿಪಾಲ: ನಿವೃತ್ತ ಅಧ್ಯಾಪಕ, ಹಿರಿಯ ರಾಜಕೀಯ ಮುಖಂಡ ಪಟ್ಲ ಅಣ್ಣಯ್ಯ ನಾಯಕ್ (76) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ವಿಧಿವಶರಾದರು.

ಅವರು ಮಣಿಪಾಲದ ಶಾಲಾ ಅಧ್ಯಾಪಕರು ಹಾಗೂ ಪಟ್ಲ ಶಾಲೆಯ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ರಾಜಕೀಯ ಮುಖಂಡರಾಗಿಯೂ ಗುರುತಿಸಿಕೊಂಡಿದ್ದರು. ತನ್ನ ರಾಜಕೀಯ ಜೀವನದಲ್ಲಿ ಜೆಡಿಎಸ್ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಂಡಿದ್ದರು. ಜೆಡಿಎಸ್ ಮಾತ್ರವಲ್ಲದೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿಯೂ ತನ್ನ ಪ್ರಭಾವ ಹೊಂದಿದ್ದರು.

ಪರ್ಕಳದ ಹೆರ್ಗಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಗುತ್ತಿಗೆದಾರರ ರಾಜ್ಯ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ರಾಗಿದ್ದರು. ಅವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.